ಡೇಕೇರ್ ಹಿಂಸೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಸತ್ಯ ಬಯಲು ಮಾಡಿದವರ ಬಂಧಿಸಿದ ಪೊಲೀಸ್!

ಬೆಂಗಳೂರು: ಐಟಿ ಕೇಂದ್ರ, ಸಿಲಿಕಾನ್ ವ್ಯಾಲಿ ಬೆಂಗಳೂರು ಇತ್ತೀಚೆಗೆ ಅಮಾನವೀಯ ಹಾಗೂ ಖಂಡನೀಯ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು. ಪ್ರತಿಷ್ಠ ಕಂಪನಿಯೊಂದರ 'ಮಕ್ಕಳ ಆರೈಕೆ ಕೇಂದ್ರದಲ್ಲಿ (ಡೇಕೇರ್) ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಮಕ್ಕಳ ಮೇಲಿನ ದೌರ್ಜನ್ಯ ವಿಷಯವನ್ನು ಜಗತ್ತಿಗೆ ತೋರಿಸಿದ 'ವಿಸ್ಟ್‌ಬ್ಲೋವರ್ (ಮಾಹಿತಿ ಬಹಿರಂಗಪಡಿಸಿದವರು) ವಿರುದ್ಧ ಕ್ರಮ ಕೈಗೊಳ್ಳಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಐಟಿ ಕಾರಿಡಾರ್ ಪ್ರದೇಶದಲ್ಲಿರುವ ಖ್ಯಾತ ಬಹುರಾಷ್ಟ್ರೀಯ ಐಟಿ ಕಂಪನಿಯಾದ ಕ್ಯಾಪ್‌ಚೆಮಿನಿ ಕಂಪನಿಯಲ್ಲಿ ಮಕ್ಕಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿತ್ತು. ಉದ್ಯೋಗಿಗಳು ಮಕ್ಕಳ ಕಡೆ ಚಿಂತಿಸದೇ ಸರಿಯಾಗಿ ಕೆಲಸ ಮಾಡಲು ಅನುಕೂಲ ಆಗುವಂತೆ ಡೇಕೇರ್ ನಿರ್ಮಿಸಿ ಅಲ್ಲಿ ಉದ್ಯೋಗಿಗಳ ಮಕ್ಕಳನ್ನು ನೋಡಿಕೊಳ್ಳಲು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಈ ಕೇಂದ್ರದಲ್ಲಿ ಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.

Bengaluru Daycare

ದೌರ್ಜನ್ಯ ಹೊರತಂದವರನ್ನೇ ಒಳ (ಜೈಲು) ಕಳುಹಿಸಲು ಪ್ಲ್ಯಾನ್

ಈ ಘಟನೆಯ ವಿಡಿಯೋ ವನ್ನು ಜಗತ್ತಿಗೆ ಗೊತ್ತುವಂತೆ ಮಾಡಿದವರ (ವಿಸ್ಟ್‌ಬ್ಲೋವರ್) ವಿರುದ್ಧವೇ ಸದ್ಯ ಪೊಲೀಸರು ಕಾನೂನು ಸಮರ ಸಾರಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರಿ ಚರ್ಚೆ ಹುಟ್ಟು ಹಾಕಿದೆ. ಅಳುತ್ತಿದ್ದ ಮಕ್ಕಳನ್ನು ಸಮಾಧಾನಪಡಿಸುವ ಬದಲು ಅವರನ್ನು ವಾಷಿಂಗ್ ಮಷಿನ್ ಒಳಗೆ ಹಾಕಿ ಹಿಂಸಿಸಲಾಗಿದೆ. ಮಕ್ಕಳಿಗೆ ಸುಮ್ಮನಿರುವಂತೆ ಬೆದರಿಕೆ ಹಾಕಲಾಗಿದೆ. ಮಕ್ಕಳ ಮುಖಕ್ಕೆ ಬಲವಾಗಿ ಹೊಡೆಯುವುದು, ಕತ್ತಲೆ ಕೋಣೆಯಲ್ಲಿ ಕೂಡಿಡುವುದು, ವಾಶ್ ರೂಮ್‌ ಒಳಗಿಟ್ಟು ಬೆದರಿಕೆ ಹಾಕುವುದು ಮಾಡಲಾಗುತ್ತದೆ. ಇಂತಹ ಆಘಾತಕಾರಿ ದೃಶ್ಯಗಳು ವಿಡಿಯೋದಲ್ಲಿದ್ದವು. ಅದರಲ್ಲೂ ಬೆಂಗಳೂರಿನಲ್ಲಿ ಇಂತದ್ದೊಂದು ಬೆಳವಣಿಗೆ ನಡೆದಿದ್ದು, ಇದನ್ನು ಸಮಾಜವೇ ಖಂಡಿಸಿತ್ತು.

Viral Video: ಮಾಲೀಕನ ಜೀವ ಉಳಿಸಲು ವಿಷಕಾರಿ ಹಾವಿನೊಂದಿಗೆ ಹೋರಾಡಿ ಪ್ರಾಣಬಿಟ್ಟ ಜಿಮ್ಮಿ! ಕಣ್ಣೀರಾಗಿಸಿದ ಘಟನೆ
Viral Video: ಮಾಲೀಕನ ಜೀವ ಉಳಿಸಲು ವಿಷಕಾರಿ ಹಾವಿನೊಂದಿಗೆ ಹೋರಾಡಿ ಪ್ರಾಣಬಿಟ್ಟ ಜಿಮ್ಮಿ! ಕಣ್ಣೀರಾಗಿಸಿದ ಘಟನೆ

ಮೊದಲು ಮಕ್ಕಳನ್ನು ಹಿಂಸಿಸಿದವರ ಮೇಲೆ ಕ್ರಮವಹಿಸಿ

ಡೇಕೇರ್ ಭಯಾನಕ ವಿಡಿಯೋಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಮೊಬೈಲ್ ಕ್ಯಾಮೆರಾಗಳ ಮೂಲಕ ರೆಕಾರ್ಡ್ ಮಾಡಲಾಯಿತು. ಬಳಿಕ ಅದನ್ನು ವಿವಿಧ ವಾಟ್ಸಾಪ್ ಗ್ರೂಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕೆ ಪೊಲೀಸರು ಅವರ ಮೇಲೆ ಕ್ರಮ ಜರುಗಿಸಿದ್ದಾರೆ. ಸಂತ್ರಸ್ತ ಅಸಹಾಯಕ ಮಕ್ಕಳ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ. ಮಕ್ಕಳ ಗುರುತು ಸಮಾಜಕ್ಕೆ ತಿಳಿಯುವಂತೆ ಮಾಡಲಾಗಿದೆ. ಇಂಟರ್ನೆಟ್‌ನಲ್ಲಿ ಇಂತಹ ದೃಶ್ಯಾವಳಿ ಪ್ರಸಾರ ಮಾಡುವಂತಿಲ್ಲ. ಆದರೂ ಮಾಡಲಾಗಿದೆ ಎಂಬ ಆರೋಪದ ಮೇರೆಗೆ 'ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಪೋಕ್ಸೋ' ನಿಯಮಗಳ ಅಡಿಯಲ್ಲಿ ಈ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.

ಪೊಲೀಸರ ಈ ನಿರ್ಧಾರದ ವಿರುದ್ಧ ಪೋಷಕರು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಕ್ಕಳ ರಕ್ಷಣೆಗಾಗಿ ಧ್ವನಿ ಎತ್ತಿ ಸತ್ಯವನ್ನು ಜಗತ್ತಿನ ಮುಂದೆ ತಂದವರನ್ನು ಬಂಧಿಸುವುದು ಯಾವ ನ್ಯಾಯ. ನಿಯಮಗಳ ಹೆಸರಿನಲ್ಲಿ ಜೈಲಿಗೆ ಕಳುಹಿಸುವ ನಡೆ ಎಷ್ಟು ಸರಿ. ನಿಜವಾದ ಅಪರಾಧ ಎಸಗಿದವರನ್ನು ರಕ್ಷಿಸಲು ನಡೆಸುತ್ತಿರುವ ಯತ್ನವೆಂದು ಪೋಷಕರು ದೂರಿದ್ದಾರೆ. ವಾಸ್ತವದಲ್ಲಿ ಪೊಲೀಸರು ಡೇ ಕೇರ್ ಸೆಂಟರ್‌ನ ಆಡಳಿತ ಮಂಡಳಿ ಹಾಗೂ ದೌರ್ಜನ್ಯ ಎಸಗಿದ ಮಹಿಳಾ ಸಿಬ್ಬಂದಿ ವಿರುದ್ಧ ಮೊದಲು ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು, ನೆಟ್ಟಿಗರು ಒತ್ತಾಯ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+