ತಿಮ್ಮಪ್ಪನ ದರ್ಶನಕ್ಕೆ 3550 ಮೆಟ್ಟಿಲು ಹತ್ತಿದ 116 ವರ್ಷದ ಅಜ್ಜಿ! ವೈರಲ್ ಆಯ್ತು ಭಕ್ತಿಯ ವಿಡಿಯೋ

ತಿರುಮಲ: ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಭಕ್ತರ ಸಂಖ್ಯೆ ಅಪಾರ. ಬೆಂಗಳೂರು, ಕರ್ನಾಟಕ ಸೇರಿದಂತೆ ನಾನಾ ಭಾಗಗಳಿಂದ ಬಾಲಾಜಿ ದರ್ಶನಕ್ಕೆ ತೆರಳುತ್ತಾರೆ. ಅದೇ ರೀತಿ ಕರ್ನಾಟಕದ ಮೂಲದ 116ರ ಇಳಿವಯಸ್ಸಿನ ವಯೋವೃದ್ಧೆ ತಿರುಮಲ ಬೆಟ್ಟ ಹತ್ತಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಬೆಟ್ಟ ಏರಲು ದೇವರ ದರ್ಶನಕ್ಕೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಅಜ್ಜಿ ತೋರಿಸಿಕೊಟ್ಟಿದ್ದಾರೆ. ಅಜ್ಜಿ ಬೆಟ್ಟ ಏರುವ ವಿಡಿಯೋ ಇಂಟರ್‍‌ನೆಟ್‌ನಲ್ಲಿ ವೈರಲ್ ಆಗಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರ ಸಹಸ್ರಾರು ಮಂದಿ ಪೈಕಿ ಅನೇಕರು ಅಲಿಪಿರಿ, ಶ್ರೀವಾರಿ ಮೂಲಕ ಪಾದಾಯಾತ್ರೆ ಕೈಗೊಳ್ಳುತ್ತಾರೆ. ಇಲ್ಲಿನ ಸಾವಿರಾರು ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತುತ್ತಾರೆ. ಇದು ಭಕ್ತಿಯ ಪರಾಕಾಷ್ಠೆಯು ಹೌದು, ಹಿಂದಿನಿಂದ ನಡೆದು ಬಂದ ಸಾಂಪ್ರದಾಯವು ಹೌದು. ಸುಮಾರು 3550 ಮೆಟ್ಟಿಲುಗಳನ್ನು ಕಾಲ್ನಡಿಗೆಯಿಂದ ಹತ್ತಿ ಬರುವ ಭಕ್ತಾಧಿಗಳಿಗೆ ವಿಶೇಷ ದರ್ಶನ, ಸೌಲಭ್ಯಗಳು ಇರುತ್ತದೆ. ಅಜ್ಜಿ ದೇವರ ಮೇಲಿನ ಅಚಲ ನಂಬಿಕೆಯಿಂದ ಎಲ್ಲ ಮೆಟ್ಟಿಲುಗಳನ್ನು ಏರುವ ಮೂಲಕ ಸ್ಪೂರ್ತಿಯಾಗಿದ್ದಾರೆ. ಜೊತೆಗೆ ಬಂದ ಅಪಾರ ಭಕ್ತರು ಹಾಗೂ ನೆಟ್ಟಿಗರು ಮನ ಗೆದ್ದಿದ್ದಾರೆ.

116-Year-Old

ಅಜ್ಜಿ ಕುಟುಂಬಸ್ಥರೊಂದಿಗೆ ನಿಧಾನವಾಗಿ ಮೆಟ್ಟಿಲು ಹತ್ತುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜ್ಜಿಯ ವಯಸ್ಸು, ಯಾವ ಊರು ಎಂದೆಲ್ಲ ಕೇಳುವ ಸಹಭಕ್ತಾಧಿಕಗಳು ವಿಡಿಯೋ ಮಾಡಿದ್ದು, ವೈರಲ್ ಆಗಿದೆ. ಅಜ್ಜಿಗೆ ದೇವರ ಮೇಲಿನ ನಂಬಿಕೆ, ಭಕ್ತಿ ಭಾವವನ್ನು ಮೆಚ್ಚಿಕೊಂಡಿದ್ದಾರೆ. ಅಜ್ಜಿಯ ವಯಸ್ಸು, ತಾವು ಬೆಟ್ಟ ಹತ್ತುವರ ಕುರಿತು ಅವರ ಮೊಮ್ಮಗ ವಿವರಣೆ ಹೇಳುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು.

Viral Video: ಮಾಲೀಕನ ಜೀವ ಉಳಿಸಲು ವಿಷಕಾರಿ ಹಾವಿನೊಂದಿಗೆ ಹೋರಾಡಿ ಪ್ರಾಣಬಿಟ್ಟ ಜಿಮ್ಮಿ! ಕಣ್ಣೀರಾಗಿಸಿದ ಘಟನೆ
Viral Video: ಮಾಲೀಕನ ಜೀವ ಉಳಿಸಲು ವಿಷಕಾರಿ ಹಾವಿನೊಂದಿಗೆ ಹೋರಾಡಿ ಪ್ರಾಣಬಿಟ್ಟ ಜಿಮ್ಮಿ! ಕಣ್ಣೀರಾಗಿಸಿದ ಘಟನೆ

25, 30 ವರ್ಷದ ಹರೆಯದವರೇ ಇಂದಿನ ದಿನಗಳಲ್ಲಿ ಹೆಚ್ಚು ನಡೆಯಲು, ನೂರು ಮೆಟ್ಟಿಲು ಹತ್ತಲು ಹಿಂದೇಟು ಹಾಕುತ್ತಾರೆ. ಅಷ್ಟರ ಮಟ್ಟಿಗೆ ಎಸಿ ರೂಮ್‌ನಲ್ಲಿ ಲ್ಯಾಪ್, ಕಂಪ್ಯೂಟ್ ಮುಂದೆ ಕೂತು ಕೂತು ನಮ್ಮ ದೈಹಿಕ ಆರೋಗ್ಯ ಹಾಳಾಗಿಬಿಟ್ಟಿದೆ. ಮನುಷ್ಯನಿಗೆ ವ್ಯಾಯಾಮ, ಇನ್ನಿತರ ದೈಹಿಕ ಶ್ರಮ ಕಡಿಮೆಯಾಗಿದ್ದು, ಇತ್ತೀಚೇಗೆ ಕೆಲವರು ಬೆಟ್ಟ ಹತ್ತುವುದಿರಲಿ, ಹತ್ತು ನಿಮಿಷ ಆಯಾಸದ ಕೆಲಸಗಳನ್ನು ಮಾಡುವಷ್ಟರಲ್ಲಿ ಸುಸ್ತಾಗಿ ಬಿಡುತ್ತೇವೆ. ಅಂಥತದಲ್ಲಿ ಎರಡು ತಲೆಮಾರು ಕಂಡು 116 ಅಜ್ಜಿ ಗಂಟೆಗಳ ಕಾಲ ತಿರುಮಲ ಬೆಟ್ಟ ಹತ್ತಿ ಸರತಿ ಸಾಲಿನಲ್ಲಿ ಸಾಗಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಈ ಮೂಲಕ ವಯಸ್ಸಾದರೂ ಸರಿ ದೈಹಿಕ ಆರೋಗ್ಯಯುತವಾಗಿದ್ದರೆ ಏನನ್ನಾದರೂ ಮಾಡಬಹುದೆಂದು ಅಜ್ಜಿ ತೋರಿಸಿಕೊಟ್ಟಿದ್ದಾರೆ.

ಇಷ್ಟಾರ್ಥ ನೆರವೇರಿಕೆಗಾಗಿ ಬೆಟ್ಟ ಹತ್ತುವ ಭಕ್ತರು

ನೇರ ವಾಹನಗಳ ಮೂಲಕ ತಿರುಪತಿ ಬೆಟ್ಟದ ಮೇಲೆ ತೆರಳಿ ದರ್ಶನ ಮಾಡಬಹುದು. ಧರ್ಮದರ್ಶನ, ವಿಶೇಷ ದರ್ಶನಗಳ ವ್ಯವಸ್ಥೆ ಇದೆ. ಇನ್ನೂ ಹಲವರು ತಿಮ್ಮಪ್ಪನ ಬೆಟ್ಟ ಹತ್ತಿ ದರ್ಶನ ಮಾಡಿದರೆ ಪುಣ್ಯ ಸಿಗುತ್ತದೆ. ಮನಸ್ಸಿಗೆ ಸಮಾಧಾನ ಭಾವ ಸಿಗುತ್ತದೆ, ತಪ್ಪುಗಳಿಗೆ ಪ್ರಾಯಶ್ಚಿತ ಸಿಗುತ್ತದೆ ಎಂದು ನಂಬುತ್ತಾರೆ. ಇಷ್ಟಾರ್ಥಗಳ ಹರಕೆಗಾಗಿ ನಿತ್ಯವು ಸುಮಾರು 3 ರಿಂದ 5 ಗಂಟೆಗಳ ಸಮಯ ನಿರಂತರ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಮಾಡುವ ಭಕ್ತರು ಸಂಖ್ಯೆ ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+