ಟಾಕ್ಸಿಕ್‌ ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್‌, ಯಾವಾಗ ಚಿತ್ರ ಬಿಡುಗಡೆ, ಈ ಸಲನೂ ಕಾಗೆ ಹಾರಿಸ್ತಾರ!

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಬಗ್ಗೆ ಬರುವ ಅಪ್‌ಡೇಟ್ಸ್‌ ಏನು, ಸಿನಿಮಾ ಹೊಸ ರಿಲೀಸ್‌ ದಿನಾಂಕದ ಕಥೆ ಏನು, ಈ ಸಲನೂ ಕಾಗೆ ಹಾರಿಸ್ತಾರ ಅಥವಾ ಫ್ಯಾನ್ಸ್‌ಗೆ ಖುಷಿ ಕೊಡೋ ಸುದ್ದಿ ಇರುತ್ತಾ..

ʼಟಾಕ್ಸಿಕ್‌ʼ ಸಿನಿಮಾ ಶೂಟಿಂಗ್‌ ಶುರು ಮಾಡೋ ಮೊದಲೇ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ರು. ಸಿನಿಮಾಗೆ ಸೃಷ್ಟಿಯಾಗಿರುವ ಹೈಪ್‌ ನೋಡಿ ಹಲವರು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದರು. ಆದರೆ ಆರಂಭದಲ್ಲಿ ಪ್ರಕಟಿಸಿದ್ದ ಸಿನಿಮಾ ದಿನಾಂಕದಂದು ಸಿನಿಮಾ ರಿಲೀಸ್‌ ಆಗೋದು ಹಾಗಿದರಲಿ, ಸರಿಯಾಗಿ ಶೂಟಿಂಗೇ ಶುರುವಾಗಿರಲಿಲ್ಲ. ಆಗ ಮತ್ತೊಂದು ಡೇಟ್‌ ಕೊಟ್ಟರು. ಆ ಡೇಟ್‌ಗೂ ಸಿನಿಮಾ ತೆರೆಗೆ ಬರಲಿಲ್ಲ. ಮತ್ತೊಂದು ಮಗದೊಂದು ಅಂತ ಹೊಸ ಹೊಸ ರಿಲೀಸ್‌ ಡೇಟ್‌ ಕೊಡುತ್ತಾನೇ ಇದ್ದಾರೆ.

Toxic Update

ಜೂನ್‌ನಲ್ಲಿ ಸಿನಿಮಾ ಬರೋದು ಅಂತಿದ್ದಾಗ ಮಧ್ಯಪ್ರಾಚ್ಯ ಯುದ್ಧ ಶುರುವಾಗಿದೆ ಅಂತ ಸಿನಿಮಾ ಮುಂದಕ್ಕೆ ಹಾಕಿದರು. ಯುದ್ಧದಿಂದ ಅವಾಂತರ ಸೃಷ್ಟಿಯಾಗಿ ಯುದ್ಧಕ್ಕೂ ಬ್ರೇಕ್‌ ಬಿದ್ದಿದೆ, ಆದರೆ ಟಾಕ್ಸಿಕ್‌ಗೆ ರಿಲೀಸ್‌ ಭಾಗ್ಯ ಬಂದಿಲ್ಲ. ನಿನ್ನೆ ತಾನೇ ಟಾಕ್ಸಿಕ್‌ ಟೀಮ್‌ ಇವತ್ತು ಹೊಸ ಅಪ್‌ಡೇಟ್‌ ನೀಡಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಆದರೆ ಈಗಾಗಲೇ ಟಾಕ್ಸಿಕ್‌ ಟೀಮ್‌ನ ವರಸೆ ನೋಡಿ ಆಸಕ್ತಿ ಕಳೆದುಕೊಂಡಿರುವ ಪ್ರೇಕ್ಷಕರು ಈ ಬಗ್ಗೆ ಅಂಥಾ ಆಸಕ್ತಿ ಏನೂ ತೋರಿಸುತ್ತಿಲ್ಲ.

ಯಶ್ ನಟನೆಯ, 'ಮೂತೋನ್' ಖ್ಯಾತಿಯ ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿರುವ ಮುಂಬರುವ ಆಕ್ಷನ್ ಚಿತ್ರ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಬಗ್ಗೆ ಇವತ್ತು ಸಿಗುವ ಅಪ್‌ಡೇಟ್‌ ಆದರೂ ಏನು.. ಚಿತ್ರತಂಡ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೊಸ ಪ್ರಕಟಣೆಯೊಂದರ ಸುಳಿವು ನೀಡಿದೆ. ʼನಾಳೆಗೆ ಏನಾದರೂ ಪ್ಲಾನ್‌ಗಳಿವೆಯೇ?ʼ ಎಂದು ಬರೆಯುವ ಮೂಲಕ ಹೊಸ ವಿಷಯವನ್ನು ಹಂಚಿಕೊಳ್ಳುವ ಮುನ್ಸೂಚನೆ ನೀಡಿದೆ. ಚಿತ್ರತಂಡವು ಹೊಸ ಪ್ರಕಟಣೆಗೆ ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಮಾಧ್ಯಮ ವರದಿಗಳ ಪ್ರಕಾರ, ನಿರ್ಮಾಪಕರು 'ಟಾಕ್ಸಿಕ್' ಚಿತ್ರವನ್ನು ಇದೇ ವರ್ಷ ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಮತ್ತೊಂದೆಡೆ, ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಬಿಡುಗಡೆಗಾಗಿ ಚಿತ್ರತಂಡವು ಆಯ್ಕೆಗಳನ್ನು ಹುಡುಕುತ್ತಿರುವುದರಿಂದ ಚಿತ್ರವು ಇನ್ನಷ್ಟು ತಡವಾಗಬಹುದು ಎಂದು ಇನ್ನೊಂದು ವರದಿ ತಿಳಿಸಿದೆ. ಈ ಪ್ರಕಾರ ಸಿನಿಮಾ ರಿಲೀಸ್‌ ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್‌ ಆಗುವ ಸಾಧ್ಯತೆಗಳಿವೆ.

Samantha: ಸಮಂತಾಗೆ ಮಗು ಆಗಲ್ಲ ಅಂದೋರೆಲ್ಲ ಬಾಯಿ ಮುಚ್ಕೊಂಡಿರ್ಬೇಕ್‌, ಅಮ್ಮನಾಗ್ತಿದ್ದಾರಂತೆ ಸ್ಯಾಮ್
Samantha: ಸಮಂತಾಗೆ ಮಗು ಆಗಲ್ಲ ಅಂದೋರೆಲ್ಲ ಬಾಯಿ ಮುಚ್ಕೊಂಡಿರ್ಬೇಕ್‌, ಅಮ್ಮನಾಗ್ತಿದ್ದಾರಂತೆ ಸ್ಯಾಮ್

ಟಾಕ್ಸಿಕ್‌ ಚಿತ್ರವು ದಶಕಗಳ ಹಿಂದಿನ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ಆರಂಭಿಕ ಕಾಲದ ಹಿನ್ನೆಲೆಯುಳ್ಳ ಆಕ್ಷನ್ ಕಥಾಹಂದರವನ್ನು ಹೊಂದಿದ್ದು, ಗೀತು ಮೋಹನ್ ದಾಸ್ ಅವರು ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಯಶ್ ಅವರ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಅಕ್ಷಯ್ ಒಬೆರಾಯ್, ಸುದೇವ್ ನಾಯರ್, ಅಮಿತ್ ತಿವಾರಿ ಸೇರಿದಂತೆ ಹಲವರು ಪೋಷಕ ಪಾತ್ರಗಳಲ್ಲಿದ್ದಾರೆ.

ಚಿತ್ರಕ್ಕೆ ರವಿ ಬಸ್ರೂರ್ ಅವರು ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅಂತರರಾಷ್ಟ್ರೀಯ ಸಾಹಸ ನಿರ್ದೇಶಕರಾದ ಜೆ.ಜೆ. ಪೆರ್ರಿ ಅವರು ಹಲವಾರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರೆ, ಅನ್ಬರಿವ್ ಜೋಡಿಯು ಕೆಲವು ಪ್ರಮುಖ ಸಾಹಸ ಭಾಗಗಳ ಜವಾಬ್ದಾರಿ ಹೊತ್ತಿದೆ.

ಈ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿದ್ದು, ನಂತರ ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ.

Vinod Prabhakar: ನಟ ವಿನೋದ್ ಪ್ರಭಾಕರ್ ದಿಢೀರ್‌ ಆಸ್ಪತ್ರೆಗೆ ದಾಖಲು, ICUನಲ್ಲಿ ಚಿಕಿತ್ಸೆ, ಪ್ರಚಾರದ ವೇಳೆ ಆಗಿದ್ದೇನು?
Vinod Prabhakar: ನಟ ವಿನೋದ್ ಪ್ರಭಾಕರ್ ದಿಢೀರ್‌ ಆಸ್ಪತ್ರೆಗೆ ದಾಖಲು, ICUನಲ್ಲಿ ಚಿಕಿತ್ಸೆ, ಪ್ರಚಾರದ ವೇಳೆ ಆಗಿದ್ದೇನು?

ಮುಂದಿನ ದಿನಗಳಲ್ಲಿ, ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ 'ರಾಮಾಯಣ' ಚಿತ್ರದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಿದ್ದು, ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ ನಟರ ಜೊತೆಗೆ ಈ ಚಿತ್ರದಲ್ಲಿ ರಣಬೀರ್‌ ಕಪೂರ್‌, ಸಾಯಿ ಪಲ್ಲವಿ, ರವಿ ದುಬೆ, ಸನ್ನಿ ಡಿಯೋಲ್ ಮತ್ತು ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಕೊನೆಗೂ ಉಳಿದಿರುವ ಪ್ರಶ್ನೆ ಅಂದರೆ ಇವತ್ತು ಟಾಕ್ಸಿಕ್‌ ಟೀಮ್‌ ಕೊಡುವ ಅಪ್‌ಡೇಟ್‌ ಏನು, ಹಾಲಿವುಡ್‌ ಲೆವೆಲ್‌ ರೀಚ್‌ ಮಾಡ್ತೀವಿ ಅಂತ ಕತೆ ಹೇಳಿ ಈ ಸಲನೂ ಕಾಗೆ ಹಾರಿಸ್ತಾರ ಅನ್ನೋದು!

ಬರಹ: ಭವಾನಿ ಭಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+