ಐಸಿಸ್ ನೊಂದಿಗೆ ನಂಟುಹೊಂದಿದ್ದ ಕೇರಳದ ಯುವಕ ಬಂಧನ
ಆಲಪಿ(ಕೇರಳ), ಆಗಸ್ಟ್ 4: ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ದೊಂದಿಗೆ ನಂಟು ಹೊಂದಿದ್ದ ಕೇರಳ ಮೂಲದ ಭಯೋತ್ಪಾದಕನೊಬ್ಬನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕೇರಳದ ಆಲಪಿಯಲ್ಲಿ ಇಂದು(ಆಗಸ್ಟ್ 4) ಬಂಧಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳಕ್ಕೆ ಸಿಕ್ಕ ಮಾಹಿತಿಯ ಪ್ರಕಾರ ಐಸಿಸ್ ನೊಂದಿಗೆ ನಂಟು ಹೊಂದಿದ್ದ ಇಬ್ಬರು ಉಗ್ರರಲ್ಲಿ ಒಬ್ಬ ತಮಿಳುನಾಡಿನ ಕೋಯಿಮತ್ತೂರಿನಲ್ಲಿ ಮತ್ತು ಇನ್ನೊಬ್ಬ ಕೇರಳದ ಆಲಪಿಯಲ್ಲಿರುವುದಾಗಿ ತಿಳಿದುಬಂದಿತ್ತು.

ಕೇರಳದ ಆಲಪಿಯಲ್ಲಿ ಐಸಿಸ್ ನೊಂದಿಗೆ ನಂಟುಹೊಂದಿದ್ದ ಓರ್ವ ನನ್ನು ತನಿಖಾದಳದ ಅಧಿಕಾರಿಗಳು ಬಂಧಿಸಿದ್ದು, ಇನ್ನೋರ್ವನ ಬಗ್ಗೆ ಮಾಹಿತಿ ದೊರೆತಿಲ್ಲ. ಬಂಧಿತ ಆರೋಪಿಯ ಲ್ಯಾಪ್ ಟಾಪ್, ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications