ಕೋಳಿ ಮಾಂಸ ಪ್ರಸಾದ ನೀಡುವ ಈ ದೇವಾಲಯಕ್ಕೆ ಯಡಿಯೂರಪ್ಪ ಸೇರಿ ಅನೇಕ ಬಿಜೆಪಿ ನಾಯಕರು ಭಕ್ತರು!

ಕಣ್ಣೂರು, ಏಪ್ರಿಲ್. 22: ಹಿಂದೂಗಳ ಪವಿತ್ರ ಮಾಸದಲ್ಲಿ ಮಾಂಸಾಹಾರ ಸೇವಿಸುವ ಮೂಲಕ ಕೆಲವು ವಿರೋಧ ಪಕ್ಷದ ನಾಯಕರು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದರು. ಆದರೆ, ಕೇರಳದ ಈ ದೇವಸ್ಥಾನದ ಭಕ್ತರಿಗೆ ಇಷ್ಟವಾಗುವುದಿಲ್ಲ ಏಕೆಂದರೆ, ಈ ದೇವಾಲಯದಲ್ಲಿ ಭಕ್ತರಿಗೆ 'ಪ್ರಸಾದ'ವಾಗಿ ನೋಡುವುದು ಚಿಕನ್.

ಹೌದು.. ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯ ಮಡಾಯಿ ಎಂಬಲ್ಲಿ ನೆಲೆಸಿರುವ ಮಡಾಯಿ ಕಾವು ದೇವಸ್ಥಾನ ಎಂದು ಪ್ರಸಿದ್ಧವಾಗಿರುವ ಶ್ರೀ ತಿರುವರ್ಕ್ಕಟ್ಟು ಕಾವು ಭಗವತಿ ದೇವಸ್ಥಾನವು ಭಕ್ತರಿಗೆ ಕೋಳಿಯಿಂದ ಮಾಡಿದ ತಿನಿಸುಗಳನ್ನು 'ಪ್ರಸಾದ'ವಾಗಿ ನೀಡುತ್ತದೆ. ಈ ದೇವಸ್ಥಾನದ ಭಕ್ತರಲ್ಲಿ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಸೇರಿದ್ದಾರೆ.

Madayi Kavu temple serves chicken as prasad top BJP leaders including BS Yediyurappa among devotees

ಮಡಾಯಿ ದೇವಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಕೂಡ ಭಕ್ತರು

2016ರಲ್ಲಿ ಕೊನೆಯ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೇವಸ್ಥಾನಕ್ಕೆ ಭೋಜನಶಾಲೆಯನ್ನೂ ಕೊಡುಗೆಯಾಗಿ ನೀಡಿದ್ದಾರೆ. 2009ರ ಡಿಸೆಂಬರ್ 26ರಂದು 'ಅಮೃತದಯಾನಿ ಊಟುಪುರ' (Amrithadayani Ootupura) ಎಂಬ ಭೋಜನಶಾಲೆಯನ್ನು ಉದ್ಘಾಟಿಸಿದ್ದರು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಗಣ್ಯರು, ರಾಜಕಾರಣಿಗಳಲ್ಲದೆ ಬಿಜೆಪಿ ರಾಜ್ಯ ನಾಯಕರು ಕೂಡ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಾಲಯಗಳ ತಾಯಿ ಎಂದು ಪರಿಗಣಿಸಲ್ಪಟ್ಟಿರುವ ದೇವಾಲಯದ ಪ್ರಮುಖ ಭಕ್ತರು ಕನ್ನಡಿಗರು. ಕನ್ನಡಿಗರು ಹೆಚ್ಚಾಗಿ ಹೋಗುವ ಈ ದೇವಾಲಯದಲ್ಲಿ ಕೋಳಿ ತಿಂಡಿಯೇ ಪ್ರಸಾದ.

ಈ ಪ್ರದೇಶದಲ್ಲಿ ಕನಿಷ್ಠ ಮೂರು ದೇವಾಲಯಗಳು ಕೋಳಿಯನ್ನು 'ಪ್ರಸಾದ'ವಾಗಿ ವಿತರಿಸುತ್ತವೆ. "ಈ ಹಿಂದೆ ದೇವಾಲಯದಲ್ಲಿ ಪ್ರಾಣಿ ಬಲಿ ನೀಡಲಾಗುತ್ತಿತ್ತು. ಪ್ರಾಣಿ ಬಲಿ ನಿಷೇಧದ ಕಾನೂನು ಬಂದ ಬಳಿಕ ನಿಲ್ಲಿಸಲಾಯಿತು. ಆದರೆ ಇಂದಿಗೂ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯವಾಗಿ ಕೋಳಿ ಮಾಂಸವನ್ನು ಬೇಯಿಸಲಾಗುತ್ತದೆ ಮತ್ತು ಅದನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ" ಎಂದು ದೇವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Madayi Kavu temple serves chicken as prasad top BJP leaders including BS Yediyurappa among devotees

ಈಗ ಮಲಬಾರ್ ದೇವಸ್ವಂ ನಿರ್ವಹಿಸುತ್ತಿರುವ ದೇವಾಲಯವು ಶತಮಾನಗಳಷ್ಟು ಹಳೆಯದು ಎನ್ನಲಾಗಿದೆ. ದೇವಾಲಯದ ಅರ್ಚಕರು ಹಲವಾರು ತಲೆಮಾರುಗಳ ಹಿಂದೆ ಬಂಗಾಳದ ಬ್ರಾಹ್ಮಣರೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆಂದು ನಂಬಲಾಗಿದೆ. ದೇವಾಲಯದ ಒಳಗೆ ಕೋಳಿ ಮಾಂಸವನ್ನು ಸ್ವತಃ ಅರ್ಚಕರು ದೇವರಿಗೆ ನೈವೇದ್ಯವಾಗಿ ಬೇಯಿಸುತ್ತಾರೆ. ಇದನ್ನು ಬೇಯಿಸಿದ ಹೆಸರುಕಾಳಿನೊಂದಿಗೆ ಭಕ್ತರಿಗೆ ವಿತರಿಸಲಾಗುತ್ತದೆ.

ಮೋದಿಯವರ ಹೇಳಿಕೆಯ ಗದ್ದಲದ ನಂತರ ಇತ್ತೀಚಿನ ದಿನಗಳಲ್ಲಿ ಕೋಳಿಯನ್ನು 'ಪ್ರಸಾದ'ವಾಗಿ ನೀಡುವ ದೇವಾಲಯದ ಸಂಪ್ರದಾಯ ಹೆಚ್ಚು ಗಮನ ಸೆಳೆಯುತ್ತಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕೂಡ ಮೋದಿ ಅವರನ್ನು ದೇವಸ್ಥಾನಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.

ಇದಲ್ಲದೇ, ರಾಜಕೀಯ ಕಾರಣಕ್ಕಾಗಿ ದೇವಾಲಯ ಸದ್ದಾಗುತ್ತಿದ್ದು, ದೇವಾಲಯದ ಅರ್ಚಕರು ಹೊಸ ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ರಾಜಕೀಯ ಬೆಳವಣಿಗೆಗಳು ಅನಾದಿ ಕಾಲದಿಂದಲೂ ಅನುಸರಿಸುತ್ತಿರುವ ಆಚರಣೆಗೆ ಏನಾದರೂ ಕಡಿವಾಣಕ್ಕೆ ಕಾರಣವಾಗಬಹುದೇ ಎಂಬ ಆತಂಕ ಹೊಂದಿದ್ದಾರೆ. ಏಕೆಂದರೆ ಹಲವು ಬಾರಿ ಚುನಾವಣೆ ಕಾರಣಕ್ಕೆ, ಇಲ್ಲ ತಾವು ಹೆಚ್ಚು ಅಧಿಕಾರ ಹೊಂದಿದ್ದೇವೆ ಎಂಬ ಕಾರಣಕ್ಕೂ ಕೂಡ ಅನೇಕ ಆಚರಣೆಗಳನ್ನು ನಿಷೇಧಿಸಲಾಗುತ್ತದೆ. ಇದೇ ಆತಂಕದಲ್ಲಿದ್ದಾರೆ ಇಲ್ಲಿನ ಅರ್ಚಕರು.

(ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+