ಆಕ್ಸಿಸ್ ಬ್ಯಾಂಕ್‌ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
ಭಾರತ ಆರ್ಥಿಕವಾಗಿ ಮುನ್ನುಗ್ಗುತ್ತಿದ್ದು, ಹೀಗೆ ಭಾರತದ ಅರ್ಥ ವ್ಯವಸ್ಥೆಯ ಅಭಿವೃದ್ಧಿಗೆ ಬ್ಯಾಂಕಿಂಗ್ ವಲಯದ ಬೆಂಬಲ ಕೂಡ ದೊಡ್ಡದಾಗಿದೆ. ಅದರಲ್ಲೂ ಭಾರತದಲ್ಲಿ, ಖಾಸಗಿ ವಲಯದ ಬ್ಯಾಂಕ್‌ಗಳ ಪಾತ್ರ ದೊಡ್ಡದಾಗಿದೆ. ಯಾಕಪ್ಪಾ ಈ ವಿಚಾರ ಎಂದರೆ ಈ ಬಾರಿ ಭಾರತದ ಖಾಸಗಿ ಬ್ಯಾಂಕ್‌ಗಳು, ಪ್ರಸಕ್ತ ತ್ರೈಮಾಸಿಕದಲ್ಲಿ ದೊಡ್ಡ ಅಭಿವೃದ್ಧಿ ಸಾಧಿಸಿವೆ.
ಅಂದಹಾಗೆ ಯಾವುದೇ ಒಂದು ಆರ್ಥಿಕತೆಗೆ ಬ್ಯಾಂಕಿಂಗ್ ವಲಯದ ಅಭಿವೃದ್ಧಿ ಮುಖ್ಯವೇ ಆಗಿರುತ್ತದೆ. ಹಿಂದೆ ಕೇವಲ ಸರ್ಕಾರಿ ವಲಯದ ಬ್ಯಾಂಕ್‌ಗಳನ್ನು ಹೆಚ್ಚಾಗಿ ನೋಡುತ್ತಿದ್ದ, ಕಾಲಘಟ್ಟ ಇತ್ತು. ಆದರೆ ಇದೀಗ ಆಧುನಿಕ ಕಾಲಘಟ್ಟದಲ್ಲಿ ಖಾಸಗಿ ಬ್ಯಾಂಕ್‌ಗಳು ಕೂಡ ಬಲಾಢ್ಯವಾಗಿ ಬೆಳೆದು ನಿಂತಿವೆ. ಈ ಪೈಕಿ ಭಾರತದಲ್ಲಿ ದೊಡ್ಡ ದೊಡ್ಡ ಖಾಸಗಿ ಬ್ಯಾಂಕ್ ಸೇವೆ ಲಭ್ಯವಿದ್ದು, ಅದರಲ್ಲಿ ಆಕ್ಸಿಸ್ ಬ್ಯಾಂಕ್ ಕೂಡ ಒಂದಾಗಿದೆ. ಈಗ ಆಕ್ಸಿಸ್ ಬ್ಯಾಂಕ್ 2023 & 24ನೇ ಹಣಕಾಸು ವರ್ಷದ ಕೊನೇ ತ್ರೈಮಾಸಿಕದಲ್ಲಿ, ಭರ್ಜರಿಯಾಗಿ ಲಾಭ ಗಳಿಸಿದೆ. ಹಾಗಾದ್ರೆ ಆಕ್ಸಿಸ್ ಬ್ಯಾಂಕ್ ತನ್ನ ಹೊಸ ತ್ರೈಮಾಸಿಕದಲ್ಲಿ ಗಳಿಸಿದ ಲಾಭ ಎಷ್ಟು? ಮುಂದೆ ಓದಿ.

7,129 ಕೋಟಿ ರೂಪಾಯಿ ಲಾಭ!
ಭಾರತದ ಆರ್ಥಿಕ ವಲಯದಲ್ಲಿ ದೊಡ್ಡ ಪ್ರಮಾಣದ ಪಾಲನ್ನು ಖಾಸಗಿ ಬ್ಯಾಂಕ್‌ಗಳು ಈ ಮೂಲಕ ಪಡೆದಿವೆ. ಇದೀಗ ಆಕ್ಸಿಸ್ ಬ್ಯಾಂಕ್ 2023 & 24ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಭರ್ಜರಿಯಾಗಿ ಲಾಭ ಗಳಿಸಿದೆ. 7,129 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸುವ ಮೂಲಕ ದಾಖಲೆ ಬರೆದಿದೆ ಆಕ್ಸಿಸ್ ಬ್ಯಾಂಕ್. ಹಿಂದಿನ ವರ್ಷದ ಈ ತ್ರೈಮಾಸಿಕದಲ್ಲಿ ಒಟ್ಟು 5,728 ಕೋಟಿ ಲಾಭ ಗಳಿಸಿತ್ತು ಆಕ್ಸಿಸ್ ಬ್ಯಾಂಕ್.
ಆದಾಯದಲ್ಲಿ ಕೂಡ ಭಾರಿ ಏರಿಕೆ
ಆಕ್ಸಿಸ್ ಬ್ಯಾಂಕ್ ವರಮಾನ, 28,758 ಕೋಟಿ ರೂಪಾಯಿಂದ 35,990 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಮತ್ತೊಂದು ಕಡೆ ಆಕ್ಸಿಸ್ ಬ್ಯಾಂಕ್ ಬಡ್ಡಿ ವರಮಾನ, ಶೇಕಡಾ 11 ರಷ್ಟು ಏರಿಕೆ ಕಂಡಿದೆ. ಈ ಮೂಲಕವಾಗಿ ಭರ್ಜರಿ 13,089 ಕೋಟಿ ರೂಪಾಯಿಗೆ ತಲುಪಿದೆ. 2023 & 24ನೇ ಪೂರ್ಣ ಆರ್ಥಿಕ ವರ್ಷದಲ್ಲಿ 24,861 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಈ ಮೂಲಕ ಹೂಡಿಕೆದಾರರಿಗೆ ಕೂಡ ಸಿಹಿಸುದ್ದಿ ನೀಡಿದೆ.
ಹಿಂದಿನ ಅವಧಿಗೆ ಹೋಲಿಕೆ ಮಾಡಿದರೆ ಲಾಭದಲ್ಲಿಯೂ ಶೇಕಡಾ 160 ರಷ್ಟು ಹೆಚ್ಚಳ ಆಗಿದೆ. ಇನ್ನು ತನ್ನ ಕ್ರೆಡಿಟ್ ಕಾರ್ಡ್ ವಿತರಣೆ ವಿಭಾಗದಲ್ಲಿ ಕೂಡ, ಅಭಿವೃದ್ಧಿ ಕಾಣುತ್ತಿರುವ ಈ ಬ್ಯಾಂಕ್. ಮಾರ್ಚ್ ತ್ರೈಮಾಸಿಕದಲ್ಲಿ ಹೊಸದಾಗಿ ಒಟ್ಟು 12.40 ಲಕ್ಷ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಿದೆ. ಆಕ್ಸಿಸ್ ಬ್ಯಾಂಕ್‌ನ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ)ವು, ಶೇಕಡಾ 2.02 ರಿಂದ ಶೇಕಡಾ 1.43ಕ್ಕೆ ಇಳಿಕೆ ಕಂಡಿದೆ.












Click it and Unblock the Notifications