ಕೇರಳ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗ: ಶಾಲೆಗೆ ಬಂದ್ರು ಎಐ ರೋಬೋಟ್ ಟೀಚರ್
ತಿರುವನಂತಪುರಂ, ಮಾರ್ಚ್ 07: ಶಿಕ್ಷಣದಲ್ಲಿ ದಾಪುಗಾಲು ಇಟ್ಟಿರುವ ಕೇರಳ ರಾಜ್ಯ, ತನ್ನ ಮೊದಲ ಎಐ ಟೀಚರ್ 'ಐರಿಸ್' ಅವರನ್ನು ಪರಿಚಯಿಸಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ವಿನೂತನ ಹೆಜ್ಜೆ ಇಟ್ಟಿದೆ. ಮೇಕರ್‌ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಎಐ ಟೀಚರ್ 'ಐರಿಸ್' ಅನ್ನು ಅಭಿವೃದ್ಧಿಪಡಿಸಲಾಗಿದೆ.
ತಿರುವನಂತಪುರಂನಲ್ಲಿರುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಾಠ ಮಾಡಲು ಶುರು ಮಾಡಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ 'ಐರಿಸ್' ಟೀಚರ್, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಅನುಭವ ನೀಡಲಿದೆ ಎನ್ನಲಾಗಿದೆ. ಶಿಕ್ಷಣದಲ್ಲಿ ಗಡಿಗಳನ್ನು ಮುರಿಯುವುದು ಈ ಹೊಸ ಪ್ರಯೋಗದ ಗುರಿಯಾಗಿದೆ.

ಶಾಲೆಗೆ ಬಂದ್ರು ಎಐ ಟೀಚರ್ ಐರಿಸ್
ಐರಿಸ್ ಎಂಬ ಹೆಸರಿನ ಈ ಹುಮನಾಯ್ಡ್ ಅನ್ನು ಕಳೆದ ತಿಂಗಳು ತಿರುವನಂತಪುರಂನ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೇಕರ್‌ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಅನಾವರಣಗೊಳಿಸಲಾಗಿದೆ. ಮೇಕರ್‌ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್ ಪ್ರಕಾರ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿಸಲು 2021 ರ ನೀತಿ ಆಯೋಗ ಯೋಜನೆಯಾದ ಅಟಲ್ ಟಿಂಕರಿಂಗ್ ಲ್ಯಾಬ್ (ATL) ನ ಭಾಗವಾಗಿ ಐರಿಸ್ ಅನ್ನು ನಿರ್ಮಿಸಲಾಗಿದೆ.
ಐರಿಸ್ ಮೂರು ಭಾಷೆಗಳನ್ನು ಮಾತನಾಡಬಲ್ಲದು ಮತ್ತು ಧ್ವನಿ ಸಹಾಯಕ, ಸಂವಾದಾತ್ಮಕ ಕಲಿಕೆ, ಕುಶಲ ಸಾಮರ್ಥ್ಯಗಳು ಮತ್ತು ಚಲನಶೀಲತೆ ಸೇರಿದಂತೆ ವೈಶಿಷ್ಟ್ಯಗಳೊಂದಿಗೆ ಕಷ್ಟಕರವಾದ ಪ್ರಶ್ನೆಗಳಿಗೆ ಉತ್ತರಿಸಬಹುದು ಎಂದು ಮೇಕರ್‌ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್ ಮಾಹಿತಿ ಹಂಚಿಕೊಂಡಿದೆ.
"ಶಿಕ್ಷಣದಲ್ಲಿ ಗಡಿಗಳನ್ನು ಮುರಿಯುವುದು: ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಭಾರತದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಿಕ್ಷಕಿ ರೋಬೋಟ್ ಐರೀಸ್ (IRIS) ಅನ್ನು ಪರಿಚಯಿಸಲಾಗುತ್ತಿದೆ. AI ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ನಾವು ಶಿಕ್ಷಣದಲ್ಲಿ ಕ್ರಾಂತಿ ತರಲು ಹೊರಟಿದ್ದೇವೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಜೊತೆಗೆ ಶೀರ್ಷಿಕೆ ಹಂಚಿಕೊಳ್ಳಲಾಗಿದೆ.

ಪ್ರತಿ ವಿದ್ಯಾರ್ಥಿಯ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಹೊಂದಿಕೊಳ್ಳುವ ಮೂಲಕ, ಹಿಂದೆಂದಿಗಿಂತಲೂ ಹೆಚ್ಚಿಗೆ ತೊಡಗಿಸಿಕೊಳ್ಳುವ ಮತ್ತು ಪರಿಣಾಮಕಾರಿ ಪಾಠಗಳನ್ನು ನೀಡಲು ಈ ರೋಬೋಟ್ ಐರೀಸ್ ಶಿಕ್ಷಕರಿಗೆ ಅಧಿಕಾರ ನೀಡುತ್ತದೆ ಎಂದು ಮಾಹಿತಿ ನೀಡಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ, ಕೇರಳದ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರೋಬೋಟ್ ಅನ್ನು ವೇದಿಕೆಯಲ್ಲಿ ಅನಾವರಣಗೊಳಿಸುವುದನ್ನು ನೋಡಬಹುದು. ಇದು ರೋಬೋಟ್ ತರಗತಿಯೊಳಗೆ ಮಕ್ಕಳೊಂದಿಗೆ ಸಂವಹನ ನಡೆಸುವುದನ್ನು ತೋರಿಸಿಸುತ್ತದೆ.
ಐರಿಸ್ ಅನ್ನು ವಿಎಸ್‌ಎಸ್‌ಸಿಯ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯದ (ಎಸ್‌ಪಿಎಲ್) ನಿರ್ದೇಶಕ ಡಾ ಕೆ ರಾಜೀವ್ ಉದ್ಘಾಟಿಸಿದ್ದಾರೆ. ಎಐ ರೋಬೋಟ್ ಶಿಕ್ಷಕಿ ಕೇರಳದ KTCT ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ 'ಹತ್ತಿರದ ಸ್ನೇಹಿತೆ' ಆಗಿದ್ದಾರೆ ಎಂದು ಹೇಳಿದ್ದಾರೆ.
ಡಿಎನ್ಎ ವರದಿಯ ಪ್ರಕಾರ, ಈ ರೋಬೋಟ್ ಚಲಿಸಬಲ್ಲದು, ಸಂವಹನ ಮಾಡಬಹುದು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಬಹುದು. ರೋಬೋಟ್‌ನಿಂದ ವಿದ್ಯಾರ್ಥಿಗಳು ಎಷ್ಟು ಪ್ರಭಾವಿತರಾಗಿದ್ದಾರೆಂದರೆ, ಈ ಐರಿಸ್ ಟೀಚರ್ ಮಾಠ ಮಾಡಲು ಆರಂಬಿಸಿದ ನಂತರ ಶಾಲೆಯಲ್ಲಿ ವಿದ್ಯಾರ್ಥಿಗಳ ಗೈರುಹಾಜರಿ ಕಡಿಮೆಯಾಗಿದೆ.
ರೋಬೋಟ್ ನರ್ಸರಿಯಿಂದ 12 ನೇ ತರಗತಿಯವರೆಗಿನ ಎಲ್ಲಾ ತರಗತಿಗಳಿಗೆ ಪಾಠ ಮಾಡಬಲ್ಲದು. ಐರಿಸ್ ರೋಬೋಟ್ ಪ್ರಸ್ತುತ ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂ ಮೂರು ಭಾಷೆಗಳನ್ನು ಮಾತನಾಡುತ್ತದೆ. ಡೆವಲಪರ್‌ಗಳು ಇನ್ನು 20 ಭಾಷೆಗಳನ್ನು ಅಪ್‌ಡೇಟ್ ಮಾಡಲು ಯೋಚಿಸುತ್ತಿದ್ದಾರೆ.












Click it and Unblock the Notifications