ಬೆಂಗಳೂರು ಟ್ರಾಫಿಕ್: ಒಂದೇ ದಿನ ವಿಮಾನ ಮಿಸ್ ಮಾಡಿಕೊಂಡ 374 ಜನ- ಕಾರಣವೇನು?

ಬೆಂಗಳೂರು, ಏಪ್ರಿಲ್ 15: ಸಂಚಾರ ದಟ್ಟಣೆಯಲ್ಲಿ (Traffic Issue) ವಿಶ್ವದ ಎರಡನೇ ಬೃಹತ್ ನಗರವಾಗಿ ಗುರುತಿಸಿಕೊಂಡಿರುವ ಕರ್ನಾಟಕ ರಾಜಧಾನಿ ಬೆಂಗಳೂರಿನ ಸಮಸ್ಯೆ ಕುರಿತು ಕೇರಳ ಕಾಂಗ್ರೆಸ್ ಮಾತನಾಡಿದೆ. ಸಂಚಾರ ದಟ್ಟಣೆಯ ಸಮಸ್ಯೆಯಿಂದ ಬೆಂಗಳೂರು ಮತ್ತೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.

ಹೌದು, ಬೆಂಗಳೂರಿನಲ್ಲಿ ಅದರಲ್ಲೂ ಹೆಬ್ಬಾಳ ಜಂಕ್ಷನ್, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವರೆಗೆ ಅಲ್ಲಲ್ಲಿ ವ್ಯಾಪಕ ಟ್ರಾಫಿಕ್ ಸಮಸ್ಯೆ ಕಂಡು ಬರುತ್ತಿದೆ. ಧಾವಂತದ ಜನರಿಗೆ ಈ ವಾಹನಗಳ ದಟ್ಟಣೆ ನಿತ್ಯವು ಬ್ರೇಕ್ ಹಾಕಿ ಬಿಡುತ್ತದೆ.

374 People Missed Their Flights in Bengaluru Because of Heavy Traffic on Airport Road

ಸೂಕ್ತ ಸಮಯಕ್ಕೆ ಏರ್‌ಪೋರ್ಟ್ ತಲುಪಲು ಟ್ರಾಫಿಕ್ ಅಡ್ಡಿ

ಇದೀಗ ಇಂತದ್ದೇ ವಿಚಾರವಾಗಿ ಕೇರಳ ಕಾಂಗ್ರೆಸ್ ಟ್ವೀಟ್ ಮೂಲಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತನಾಡಿದೆ. ಇದರಿಂದ ಒಂದೇ ದಿನ 350ಕ್ಕೂ ಹೆಚ್ಚು ಮಂದಿ ನಿಗದಿತ ಸಮಯಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪದೇ ವಿಮಾನ ಮಿಸ್ ಮಾಡಿಕೊಂಡಿದ್ದರ ಬಗ್ಗೆ ಟ್ರಾಫಿಕ್ ಮ್ಯಾಪ್ ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದೆ.

ನಿಲ್ದಾಣಕ್ಕೆ ನಡೆದುಕೊಂಡು ಹೋಗಬೇಕಿತ್ತಾ?

ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 374 ಜನರು ತಮ್ಮ ವಿಮಾನಯಾವನ್ನು ಮಿಸ್ ಮಾಡಿಕೊಂಡಿದ್ದಾರೆ. ಅನೇಕರು ವಿಮಾನ ನಿಲ್ದಾಣಕ್ಕೆ ನಡೆದುಕೊಂಡು ಹೋಗಬೇಕಾಗಿತ್ತು ಎಂದು ನೀವು ಕೇಳಿದ್ದೀರಾ? ಎಂದು ಕೇರಳ ಕಾಂಗ್ರೆಸ್ ವ್ಯಂಗ್ಯವಾಡಿದೆ.

ನಗರದ ಪ್ರಮುಖ ಜಂಕ್ಷ ಆಗಿರುವ ಹೆಬ್ಬಾಳದಿಂದ ಎಂಜಿ ರಸ್ತೆ, ಏರ್‌ಪೋರ್ಟ್ ರಸ್ತೆಯಲ್ಲಿ 7 ಕಿಮೀ ವಿಪರೀತ ಸಂಚಾರ ದಟ್ಟಣೆ ಕಂಡು ಬರುತ್ತದೆ. ಇದನ್ನು ದಾಟಲು ಒಂದು ವಾಹನಕ್ಕೆ ಸುಮಾರು 45 ನಿಮಿಷದಿಂದ 1 ಗಂಟೆ ಬೇಕಾಗುತ್ತದೆ. ಬಹುತೇಕ ಸಮಯ ಇಲ್ಲಿಯೇ ಸವಾರರು, ಪ್ರಯಾಣಿಕರು ಕಳೆಯುತ್ತಿದ್ದಾರೆ.

ವಿಮಾನ ತಪ್ಪಿಸಿಕೊಂಡು ಪ್ರಯಾಣಿಕರ ಪರದಾಟ

ಹೀಗೆ ನಿಮಿಷ ಇಲ್ಲವೇ ಗಂಟೆಗಟ್ಟಲೆ ವಾಹನಗಳ ದಟ್ಟಣೆಯಲ್ಲಿ ಸಿಲುಕಿದ ಅನೇಕರು ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪುವಿಲ್ಲಿ ವಿಫಲವಾಗಿದ್ದಾರೆ. ಬೆಂಗಳೂರಿನಿಂದ ಬೇರೆಡೆ ತೆರಳಬೇಕಿದ್ದ ವಿಮಾನಗಳನ್ನು ತಪ್ಪಿಸಿಕೊಂಡಿದ್ದಾರೆ.

ಇತ್ತ ಇದೇ ಸಂಚಾರ ದಟ್ಟಣೆಯಿಂದಾಗಿ ನಿಗದಿ ಸಮಯಕ್ಕೆ ಆಸ್ಪತ್ರೆ ಸೇರದತೆ ತುರ್ತು ಪ್ರಕರಣಗಳಲ್ಲಿ ರೋಗಿಗಳು ಆಂಬುಲೆನ್ಸ್‌ನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಆಂಬುಲೆನ್ಸ್‌ ಬಂದರೆ ಬೇರೆ ವಾಹನಗಳು ಸರಿದು ಹೋಗಲು ಅವಕಾಶ ಮಾಡಿಕೊಡಲು ಆಗದಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಿರುತ್ತದೆ. ಬಲಿಯಾಗುವ ಜೀವಿಗಳಿಗೆ ಯಾರು ಹೊಣೆ? ನೂರಾರು ಪ್ರಯಾಣಿಕರ ವಿಮಾನ ತಪ್ಪಿಸಿಕೊಂಡು ಅತ್ತ ಹೋಗಲು ಆಗದೇ, ಮರಳಿ ಬಾರಲು ಆಗದೇ ಪರದಾಡುತ್ತಿದ್ದಾರೆ. ಆರ್ಥಿನ ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ ಎಂದು ಕೇರಳ ಕಾಂಗ್ರೆಸ್ ಪ್ರಶ್ನಿಸಿದೆ.

ಜಂಕ್ಷನ್ ಅಭಿವೃದ್ಧಿಗೆ ಮುಂದಾಗಿದ್ದ ಸರ್ಕಾರ

ಈ ಹಿಂದೆ ರಾಜ್ಯ ಸರ್ಕಾರ ಪೊಲೀಸರು, ಸ್ಥಳೀಯ ನಾಗರಿಕ ಸಂಸ್ಥೆಗಳ ಜೊತೆಗೆ ನಿರಂತರ ಸಭೆ ನಡೆಸಿತ್ತು. ಹೆಬ್ಬಾಳ, ಸಿಲ್ಕ್‌ಬೋರ್ಡ್ ಜಂಕ್ಷನ್ ಸೇರಿದಂತೆ ಪ್ರಮುಖ ರಸ್ತೆ ಜಂಕ್ಷನ್ ಗುರುತಿಸಿತ್ತು. ಇಲ್ಲಿ ಟ್ರಾಫಿಕ್ ಇಳಿಕೆಗೆ ಕ್ರಮ ಕೈಗೊಂಡಿತ್ತು. ಸಣ್ಣ ಪುಟ್ಟ ಕಾಮಗಾರಿ ಆರಂಭಿಸಿ ಸಂಚಾರ ಇಳಿಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಇತ್ತ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಜಂಕ್ಷಿನ್ ಗೆ ಭೇಟಿ ನೀಡಿ ಪರಿಶೀಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+