ಆಫೀಸ್‌ನಲ್ಲಿ ನಾನ್‌ವೆಜ್‌ ಊಟಕ್ಕೆ ನೋ ಎಂದ ಹೊಸ CEO: ಪೋಸ್ಟ್‌ ವೈರಲ್‌, ನೆಟ್ಟಿಗರಲ್ಲಿ ಹೆಚ್ಚಿದ ಆಕ್ರೋಶ

ಕಾರ್ಪೊರೇಟ್ ಜಗತ್ತಿನಲ್ಲಿ ನೌಕರರ ರಿಫ್ರೆಶ್‌ಮೆಂಟ್‌ಗಾಗಿ ಆಯೋಜಿಸುವ 'ಆಫ್‌ಸೈಟ್' ಕಾರ್ಯಕ್ರಮಗಳು ಸಾಮಾನ್ಯವಾಗಿ ಮೋಜು, ಮಸ್ತಿ ಹಾಗೂ ಊಟೋಪಚಾರಗಳಿಗೆ ಹೆಸರುವಾಸಿಯಾಗಿರುತ್ತವೆ. ಆದರೆ, ಭಾರತೀಯ ಕಂಪನಿಯೊಂದರ ಹೊಸ ಸಿಇಒ ತಮ್ಮ ಸಿಬ್ಬಂದಿಗೆ ಇಂತಹ ಕಾರ್ಯಕ್ರಮದಲ್ಲಿ ಕೇವಲ ಸಸ್ಯಾಹಾರಿ ಊಟವನ್ನು ಮಾತ್ರ ಬಡಿಸುವಂತೆ ಆದೇಶ ನೀಡುವ ಮೂಲಕ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.

ಈ ನಿರ್ಧಾರವು ಉದ್ಯೋಗಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು 'ಬೆದರಿಕೆ' ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಖ್ಯಾತ ಛಾಯಾಗ್ರಾಹಕ ಅತುಲ್ ಕಸ್ಬೇಕರ್ ಅವರು ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Indian CEO

ಕಾರ್ಪೊರೇಟ್ ಆಫ್‌ಸೈಟ್: ಕೇವಲ ಸಸ್ಯಾಹಾರಿ ಊಟಕ್ಕೆ ಆದೇಶ

ಭಾರತದ ಪ್ರಸಿದ್ಧ ಛಾಯಾಗ್ರಾಹಕ ಅತುಲ್ ಕಸ್ಬೇಕರ್ ಅವರು 'ಎಕ್ಸ್' ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಕಾರ್ಪೊರೇಟ್ ವಲಯದ ಈ ಹೊಸ ಬೆಳವಣಿಗೆಯನ್ನು ಬಹಿರಂಗಪಡಿಸಿದ್ದಾರೆ. ಅವರ ಪೋಸ್ಟ್‌ನ ಪ್ರಕಾರ, ಇತ್ತೀಚೆಗಷ್ಟೇ ಕಂಪನಿಯೊಂದಕ್ಕೆ ಹೊಸದಾಗಿ ನೇಮಕಗೊಂಡ ಸಿಇಒ , ಸುಮಾರು ಒಂದು ವಾರಗಳ ಕಾಲ ನಡೆದ ಕಾರ್ಪೊರೇಟ್ ಆಫ್‌ಸೈಟ್ ಕಾರ್ಯಕ್ರಮದಲ್ಲಿ ಕೇವಲ ಸಸ್ಯಾಹಾರಿ ಆಹಾರವನ್ನು ಮಾತ್ರ ಬಡಿಸಬೇಕು ಎಂದು ಕಟ್ಟುನಿಟ್ಟಾಗಿ ಪಟ್ಟುಹಿಡಿದಿದ್ದರು.

ಈ ನಿರ್ಧಾರದಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶೇಕಡಾ 70ಕ್ಕೂ ಹೆಚ್ಚು ಉದ್ಯೋಗಿಗಳು ತೀವ್ರ ಅಸಮಾಧಾನಗೊಂಡಿದ್ದರು. ಕಸ್ಬೇಕರ್ ಅವರು ಯಾವ ಕಂಪನಿ ಅಥವಾ ಯಾವ ಸಿಇಒ ಎಂಬುದನ್ನು ಬಹಿರಂಗಪಡಿಸಿಲ್ಲವಾದರೂ, ದೇಶದ ಮಾಂಸಾಹಾರಿ ಜನಸಂಖ್ಯೆಯ ಪ್ರಮಾಣವನ್ನು ಉಲ್ಲೇಖಿಸಿ ಈ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಬಿಸಿ ಬಿಸಿ ಬೋಂಡಾ, ಸಮೋಸಾವನ್ನು ಇನ್ಮುಂದೆ ನ್ಯೂಸ್ ಪೇಪರ್‌ನಲ್ಲಿ ಸುತ್ತಿ ಕೊಡುವಂತಿಲ್ಲ: FSSAI ಕಟ್ಟುನಿಟ್ಟಿನ ಆದೇಶ
ಬಿಸಿ ಬಿಸಿ ಬೋಂಡಾ, ಸಮೋಸಾವನ್ನು ಇನ್ಮುಂದೆ ನ್ಯೂಸ್ ಪೇಪರ್‌ನಲ್ಲಿ ಸುತ್ತಿ ಕೊಡುವಂತಿಲ್ಲ: FSSAI ಕಟ್ಟುನಿಟ್ಟಿನ ಆದೇಶ

ಅತುಲ್ ಕಸ್ಬೇಕರ್ ಪೋಸ್ಟ್‌ನಲ್ಲಿ ಏನಿದೆ?

ಅತುಲ್ ಕಸ್ಬೇಕರ್ ತಮ್ಮ ಪೋಸ್ಟ್‌ನಲ್ಲಿ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಈ ಕಂಪನಿ ಯಾವ ಕ್ಷೇತ್ರಕ್ಕೆ ಸೇರಿದ್ದು, ಉದ್ಯೋಗಿಗಳು ಈ ಬಗ್ಗೆ ಆಡಳಿತ ಮಂಡಳಿಗೆ ನೇರವಾಗಿ ದೂರು ನೀಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದಲ್ಲದೆ, ಈ ಸಸ್ಯಾಹಾರಿ ಊಟದ ಆದೇಶವು ಆ ಕಾರ್ಯಕ್ರಮಕ್ಕಾಗಿ ರೂಪಿಸಿದ ಕಂಪನಿಯ ನೀತಿಯೇ ಅಥವಾ ಕೇವಲ ಸಿಇಒ ಅವರ ವೈಯಕ್ತಿಕ ಆದ್ಯತೆಯೇ ಎಂಬ ಬಗ್ಗೆಯೂ ನಿಖರವಾದ ಮಾಹಿತಿ ಲಭ್ಯವಿಲ್ಲ.

ಪೋಸ್ಟ್‌ನ ಕೊನೆಯಲ್ಲಿ ಕಸ್ಬೇಕರ್ ಅವರು, ಸಿಇಒ ತೆಗೆದುಕೊಂಡಿರುವ ಈ ನಿರ್ಧಾರ ಸರಿ ಇದೆಯೇ ಎಂದು ತಮ್ಮ ಫಾಲೋವರ್ಸ್‌ಗಳನ್ನು ಪ್ರಶ್ನಿಸಿದ್ದಾರೆ. ನಾಯಕರೊಬ್ಬರು ತಮ್ಮ ವೈಯಕ್ತಿಕ ಆಹಾರ ಪದ್ಧತಿಯನ್ನು ಸಿಬ್ಬಂದಿಯ ಮೇಲೆ ಹೇರುವುದು ಎಷ್ಟು ಸರಿ ಎಂಬ ಗಂಭೀರ ಚರ್ಚೆಗೆ ಇದು ನಾಂದಿ ಹಾಡಿದೆ.

ಇದು ವೃತ್ತಿಪರ ದಬ್ಬಾಳಿಕೆ: ನೆಟ್ಟಿಗರ ಆಕ್ರೋಶ

ಈ ಎಕ್ಸ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಹಲವು ಬಳಕೆದಾರರು ಸಿಇಒನ ಈ ನಿಯಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಂಪನಿಯಿಂದ ಪ್ರಾಯೋಜಿತವಾದ ಕಾರ್ಯಕ್ರಮಗಳಲ್ಲಿ ಸಿಬ್ಬಂದಿಯ ಆದ್ಯತೆಗೆ ತಕ್ಕಂತೆ ಆಹಾರ ವ್ಯವಸ್ಥೆ ಇರಬೇಕೆ ಹೊರತು, ಕೇವಲ ಒಬ್ಬ ಅಧಿಕಾರಿಯ ವೈಯಕ್ತಿಕ ನಂಬಿಕೆಯನ್ನು ಎಲ್ಲರ ಮೇಲೆ ಹೇರುವಂತಿಲ್ಲ ಎಂದು ವಾದಿಸಿದ್ದಾರೆ.

"ಸಿಇಒ ತಾವೇ ಸ್ವಂತ ಹಣ ಖರ್ಚು ಮಾಡಿ ಆತಿಥ್ಯ ವಹಿಸುತ್ತಿದ್ದರೆ ಅವರ ಸಸ್ಯಾಹಾರಿ ನಿಯಮವನ್ನು ಜಾರಿಗೆ ತರಬಹುದು. ಆದರೆ, ಕಂಪನಿಯ ಹಣದಲ್ಲಿ ನಡೆಯುವಾಗ ಇದು ಎಲ್ಲರ ಸಾಮೂಹಿಕ ನಿರ್ಧಾರವಾಗಬೇಕು" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೆಲವರು ಈ ನಡೆಯನ್ನು 'ಬೆದರಿಕೆ' ಅಥವಾ ದಬ್ಬಾಳಿಕೆ ಎಂದು ಕರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ವ್ಯಂಗ್ಯವಾಗಿ, "ಟೀಮ್ ಬಿಲ್ಡಿಂಗ್ ಮಾಡುವುದು ಆ ಸಿಇಒ ಅವರ ಮುಖ್ಯ ಉದ್ದೇಶವಾಗಿತ್ತು. ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವ ಮೂಲಕ 70% ಸಿಬ್ಬಂದಿಯನ್ನು ಒಗ್ಗೂಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಎಂತಹ ಗ್ರೇಟ್ ಸಿಇಒ!" ಎಂದು ಟಾಂಗ್ ನೀಡಿದ್ದಾರೆ.

ಬೆಂಗಳೂರಿಗರಿಗೆ ಎಗ್ ಪಫ್‌ ಮೇಲೆ ಯಾಕಷ್ಟು ಕ್ರೇಜ್! ಎಗ್‌ ಪಫ್‌ ಕ್ರಾಲ್‌ ಬಗ್ಗೆ ನಿಮ್ಗೊತ್ತಾ?
ಬೆಂಗಳೂರಿಗರಿಗೆ ಎಗ್ ಪಫ್‌ ಮೇಲೆ ಯಾಕಷ್ಟು ಕ್ರೇಜ್! ಎಗ್‌ ಪಫ್‌ ಕ್ರಾಲ್‌ ಬಗ್ಗೆ ನಿಮ್ಗೊತ್ತಾ?

ಇನ್ನು ಕೆಲವರು ಮಾತ್ರ, ಇದು ದೊಡ್ಡ ವಿಷಯವೇನಲ್ಲ, ಅನೇಕ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮೊಟ್ಟೆ ಕೂಡ ನೀಡದ ಕೇವಲ ಸಸ್ಯಾಹಾರಿ ಆಹಾರ ಪದ್ಧತಿ ಸಾಮಾನ್ಯವಾಗಿದೆ ಎಂದು ಸಿಇಒ ಪರ ಬ್ಯಾಟ್ ಬೀಸಿದ್ದಾರೆ. ಒಟ್ಟಾರೆಯಾಗಿ, ವೃತ್ತಿಪರ ಜಾಗದಲ್ಲಿ ವೈಯಕ್ತಿಕ ಆಯ್ಕೆಗಳ ಹೇರಿಕೆ ಕುರಿತು ಈ ಘಟನೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+