Karnataka MLC Election Winners: ಕಾಂಗ್ರೆಸ್ ದರ್ಬಾರ್; 5 ಸ್ಥಾನಗಳ ಗೆಲುವು, ಜೆಡಿಎಸ್‌ಗೆ ಭಾರೀ ಹಿನ್ನಡೆ, ಅಡ್ಡ ಮತದಾನ?
ಬೆಂಗಳೂರು: ಬಹುನಿರೀಕ್ಷೆಯ ಕರ್ನಾಟಕ ವಿಧಾನ ಪರಿಷತ್ 7 ಸ್ಥಾನಗಳಿಗೆ ಇಂದು ಗುರುವಾರ ಚುನಾವಣೆ ನಡೆಯಿತು. ಸಂಜೆ ಫಲಿತಾಂಶ ಪ್ರಕಟವಾಗಿದ್ದು, ಅಡ್ಡಮತದಾನ ಆರೋಪ ಮಧ್ಯಯೇ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳನ್ನು ಬಾಚಿಕೊಂಡಿದ್ದು, ಜೆಡಿಎಸ್‌ಗೆ ತೀವ್ರ ಸೋಲು ಅನುಭವಿಸಿದೆ. ಇಂದಿನ ಚುನಾವಣೆಯ ಒಟ್ಟು ವಿವರ ಇಲ್ಲಿದೆ.
ಎಂಎಲ್‌ಸಿ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಐದು ನಾಯಕರು, ಬಿಜೆಪಿ ಇಬ್ಬರು ನಾಯಕರು ಗೆದ್ದು ಬೀಗಿದ್ದಾರೆ. ಎನ್‌ಡಿಎ ಮೈತ್ರಿ ಪಕ್ಷ ಜೆಡಿಎಸ್‌ಗೆ ಸದರಿ ಚುನಾವಣೆಯಲ್ಲಿ ಭಾರೀ ಹಿನ್ನಡೆ ಆಗಿದೆ. ಜೆಡಿಎಸ್ ಓಬ್ಬ ಅಭ್ಯರ್ಥಿ ಸೋತ ಬೆನ್ನಲ್ಲೇ ಪಕ್ಷದ ನಾಯಕರು ಅಡ್ಡಮತದಾನ ಕುರಿತು ಆರೋಪಿಸಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯಿಂದ ನಡೆದ ಅಡ್ಡ ಮತದಾನದಿಂದಲೇ ಸೋಲಾಗಿದೆ ಎಂದು ದೂರಲಾಗಿದೆ.

ಪರಿಷತ್ ಚುನಾವಣೆ ಗೆದ್ದ ಅಭ್ಯರ್ಥಿಗಳು
ಬೆಳಗ್ಗೆ 9 ಗಂಟೆಯಿಂದ ವಿಧಾನಸೌಧದಲ್ಲಿ ಮತದಾನ ನಡೆಯಿತು. ಸಂಜೆ 4 ಗಂಟೆ ನಂತರ ಫಲಿತಾಂಶ ಪ್ರಕಟವಾಯಿತು. ಕಾಂಗ್ರೆಸ್ ಪಕ್ಷದಿಂದ ಬಿ.ಕೆ ಹರಿಪ್ರಸಾದ್ (30 ಮತಗಳು), ತಿಪ್ಪಣ್ಣಪ್ಪ ಕಾಮಕನೂರ್ (30 ಮತ), ಪಿ.ವಿ ಮೋಹನ್ (29 ಮತ), ವಿನಯ್ ಕಾರ್ತಿಕ್ (32 ಮತ), ಶಿವಣ್ಣ ಮಳವಳ್ಳಿ (30 ಮತ) ಸೇರಿ ಐವರು ಗೆದ್ದು ಪರಿಷತ್‌ಗೆ ಆಯ್ಕೆ ಆಗಿದ್ದಾರೆ. ಅವರೊಂದಿಗೆ ರಘು ಕೌಟಿಲ್ಯ (29 ಮತ) ಮತ್ತು ಲಿಂಗರಾಜ್ ಪಾಟೀಲ್ (27 ಮತ) ಅವರು ಬಿಜೆಪಿ ಪಕ್ಷದಿಂದ ಗೆದ್ದು ಪರಿಷತ್ ಪ್ರವೇಶಿಸಿದ್ದಾರೆ.
ಅಡ್ಡಮತದಾನದಿಂದಾಗಿ ಜೆಡಿಎಸ್ ಹಾಗೂ ಬಿಜೆಪಿ ಮತಗಳು ಕಾಂಗ್ರೆಸ್ ಪಾಲಾಗಿದ್ದರಿಂದಲೇ ನಾಲ್ಕು ಮಂದಿ ಗೆಲ್ಲುವ ಜಾಗದಲ್ಲಿ ಕಾಂಗ್ರೆಸ್‌ನಿಂದ ಐವರು ಗೆದ್ದಿದ್ದಾರೆ. 62 ಶಾಸಕರ ಬಿಜೆಪಿ ಬಲದಲ್ಲಿ ಇಬ್ಬರು ಅಭ್ಯರ್ಥಿಗಳಿಗೆ 30 ಸ್ಥಾನ ಹಂಚಿತ್ತು. ಉಳಿದವುಗಳನ್ನು ಜೆಡಿಎಸ್ ಅಭ್ಯರ್ಥಿಗೆ ಹಾಕುವಂತೆ ಸೂಚನೆ ನೀಡಲಾಗಿತ್ತು. ಇನ್ನೂ ಜೆಡಿಎಸ್‌ನಲ್ಲಿದ್ದ 18 ಸದಸ್ಯರಲ್ಲಿ ಕೆಲವರು ಅಡ್ಡಮತದಾನ ಮಾಡಿದ ಶಂಕೆ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಸೋತ ಜೆಡಿಎಸ್ ಈ ಬಗ್ಗೆ ಆರೋಪಿಸಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶ್ರೀ ಬಿ.ಕೆ. ಹರಿಪ್ರಸಾದ್, ಶ್ರೀ ತಿಪ್ಪಣ್ಣಪ್ಪ ಕಮಕನೂರ್, ಶ್ರೀ ಪಿ.ವಿ. ಮೋಹನ್, ಶ್ರೀ ಶಿವಣ್ಣ ಮಳವಳ್ಳಿ ಹಾಗೂ ಶ್ರೀ ವಿನಯ್ ಕಾರ್ತಿಕ್ ಅವರಿಗೆ ಹಾರ್ದಿಕ ಅಭಿನಂದನೆಗಳು.
— DK Shivakumar (@DKShivakumar) June 18, 2026
ನಿಮ್ಮ ಜನಸೇವೆ ನಿರಂತರವಾಗಿರಲಿ, ನಾಡಿನ ಅಭಿವೃದ್ಧಿಗೆ ನಿಮ್ಮ ಕೊಡುಗೆ… pic.twitter.com/RNp2YGSMdB
ಅಡ್ಡಮತದಾನ: ಜಿಟಿ ದೇವೇಗೌಡ ಹೇಳಿದ್ದಿಷ್ಟು?
ಜೆಡಿಎಸ್‌ಗೆ ಜಿಟಿ ದೇವೇಗೌಡ ಅವರು ಕೈ ಕೊಟ್ಟು ಅಡ್ಡ ಮತದಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಾನು ಆತ್ಮಸಾಕ್ಷಿಯಿಂದ ಮತದಾನ ಮಾಡಿದ್ದೇನೆ. ಯಾರು ಅಡ್ಡಮತದಾನ ಮಾಡಿದ್ದಾರೋ ಅವರು ಅದನ್ನು ಸಾಬೀತು ಮಾಡಲಿ ಎಂದು ತಮ್ಮ ಮೇಲಿನ ಆರೋಪ ನಿರಾಕರಿಸಿದರು. ಹೆಚ್.ಡಿ.ಕುಮಾರಸ್ವಾಮಿ ಸಂಪರ್ಕದಲ್ಲಿ ಇರಲಿಲ್ಲ. ಇನ್ನೂ ನನ್ನನ್ನೂ ಯಾರೂ ಸಂಪರ್ಕಿಸಿಲ್ಲ. ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಕುಮಾರಸ್ವಾಮಿಗೆ ಗೊತ್ತು ಎಂದರು. ನಮ್ಮ ಎಲ್ಲ ಶಾಸಕರು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದಾಗಿ ಅವರ ಪ್ರತಿಕ್ರಿಯಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶ್ರೀ ಬಿ.ಕೆ. ಹರಿಪ್ರಸಾದ್, ಶ್ರೀ ತಿಪ್ಪಣ್ಣಪ್ಪ ಕಮಕನೂರ್, ಶ್ರೀ ಪಿ.ವಿ. ಮೋಹನ್, ಶ್ರೀ ಶಿವಣ್ಣ ಮಳವಳ್ಳಿ ಹಾಗೂ ಶ್ರೀ ವಿನಯ್ ಕಾರ್ತಿಕ್ ಅವರಿಗೆ ಹಾರ್ದಿಕ ಅಭಿನಂದನೆಗಳು.
— DK Shivakumar (@DKShivakumar) June 18, 2026
ನಿಮ್ಮ ಜನಸೇವೆ ನಿರಂತರವಾಗಿರಲಿ, ನಾಡಿನ ಅಭಿವೃದ್ಧಿಗೆ ನಿಮ್ಮ ಕೊಡುಗೆ… pic.twitter.com/RNp2YGSMdB













Click it and Unblock the Notifications