DCET ಅಭ್ಯರ್ಥಿಗಳೇ ಗಮನಿಸಿ; ಜುಲೈ 15ರಿಂದ ದಾಖಲೆಗಳ ಪರಿಶೀಲನೆ, ಸ್ಲಾಟ್ ಬುಕ್ಕಿಂಗ್ ಕಡ್ಡಾಯ: KEA

ಬೆಂಗಳೂರು: ಡಿಪ್ಲೋಮಾ ಸಾಮಾನ್ಯ ಪ್ರವೇಶ ಪರೀಕ್ಷೆ (DCET) 2026 ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸುದ್ದಿ ನೀಡಿದೆ. ಅರ್ಜಿ ಸಲ್ಲಿಸಿರುವ ಡಿಸಿಇಟಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯು ಇದೇ ಜುಲೈ 15ರಿಂದ 17ರವರೆಗೆ ಮಲ್ಲೇಶ್ವರಂನಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ. ಆಗಮಿಸುವ ಅಭ್ಯರ್ಥಿಗಳು ಈ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.

'ಬಿ'ಯಿಂದ 'ಒ'ವರೆಗಿನ ಕಂಡಿಕೆಗಳಡಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು, ಅರ್ಹತಾ ಕಂಡಿಕೆ 'ಎ'ಯನ್ನು ಕ್ಲೇಮ್ ಮಾಡಿ ಡಿಪ್ಲೊಮಾ ಪರೀಕ್ಷೆಯನ್ನು ಹೊರ ರಾಜ್ಯಗಳ ಬೋರ್ಡುಗಳಿಂದ ತೇರ್ಗಡೆಯಾದವರು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ, ಜಿಟಿಟಿಸಿ, ಸಿಪಿಐಟಿ, ಜವಳಿ ಕೈಗಾರಿಕಾ ಇಲಾಖೆಗಳ ಬೋರ್ಡ್ ಹೊರತುಪಡಿಸಿ ಇತರೆ ಯಾವುದೇ ಬೋರ್ಡ್ ನಿಂದ ಡಿಪ್ಲೊಮಾ ತೇರ್ಗಡೆಯಾದವರ ದಾಖಲೆಗಳ ಪರಿಶೀಲನೆಯು ಬೆಂಗಳೂರಿನಲ್ಲಿ ನಡೆಯಲಿದೆ.

KEA DCET 2026

ಬೆಳಗ್ಗೆ 10.30ಕ್ಕೆ ಅಭ್ಯರ್ಥಿಗಳೇ ಹಾಜರಾಗಬೇಕು

ಜುಲೈ 15ರಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ದಾಖಲಾತಿ ಪರಿಶೀಲನೆ ವೇಳೆ ಅಭ್ಯರ್ಥಿಗಳು ಯಾವುದಾದರೊಂದು ದಿನಕ್ಕೆ ಸ್ಲಾಟ್ ಬುಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಬುಕ್ ಮಾಡಿಕೊಂಡ ದಿನದಂದು ಅಭ್ಯರ್ಥಿಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರೊಳಗಿನ ಸಮಯದಲ್ಲಿ ಕಚೇರಿಗೆ ಹಾಜರಾಗಬೇಕು. ಅಭ್ಯರ್ಥಿಯ ಪರವಾಗಿ ಬೇರೆ ಯಾರೂ ಹಾಜರಾಗಲು ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

UGCET 2026 ಅಭ್ಯರ್ಥಿಗಳೇ ಗಮನಿಸಿ; ಇಂದು ಅಣಕು ಫಲಿತಾಂಶ ಬಿಡುಗಡೆ, ಅಂತಿಮ ಫಲಿತಾಂಶ ಪ್ರಕಟ ಯಾವಾಗ?
UGCET 2026 ಅಭ್ಯರ್ಥಿಗಳೇ ಗಮನಿಸಿ; ಇಂದು ಅಣಕು ಫಲಿತಾಂಶ ಬಿಡುಗಡೆ, ಅಂತಿಮ ಫಲಿತಾಂಶ ಪ್ರಕಟ ಯಾವಾಗ?

ಅಭ್ಯರ್ಥಿಗಳು ತಾವು ಅರ್ಜಿಯಲ್ಲಿ ಕೋರಿರುವ ಕ್ಲೇಮುಗಳಿಗೆ ಪೂರಕವಾಗಿ ಎಲ್ಲ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ದೃಢೀಕರಣಗೊಂಡ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಪರಿಶೀಲನೆ ವೇಳೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಅದರಲ್ಲಿ ಅಂಕಪಟ್ಟಿ, ಪ್ರಮಾಣಪತ್ರ ಸೇರಿದಂತೆ ಯಾವುದೇ ದಾಖಲೆ ಹಾಜರುಪಡಿಸಲು ವಿಫಲವಾದವರ ದಾಖಲೆಗಳನ್ನು ಪರಿಶೀಲಿಸದೆ ನೋಂದಣಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗುತ್ತದೆ. ನಂತರ ಇಂಥವರನ್ನು ಆಪ್ಷನ್ ನಮೂದು ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ. ಆದ್ದರಿಂದ ಎಲ್ಲ ದಾಖಲಾತಿ ಸಮೇತ ನಿಗದಿತ ಸಮಯದಕ್ಕೆ ಹಾಜರಾಗುವಂತೆ ಎಚ್.ಪ್ರಸನ್ನ ಅವರು ಹೇಳಿದ್ದಾರೆ.

ಮಾಹಿತಿ ಇಲ್ಲಿ ಪ್ರಕಟ

ದಾಖಲಾತಿಗಳ ಪರಿಶೀಲನೆ ನಂತರ ಅರ್ಹರಾಗುವ ವಿದ್ಯಾರ್ಥಿಗಳನ್ನು ಮಾತ್ರವೇ ಅವರು ತಮ್ಮ ಆಯ್ಕೆ ನಮೂದಿಸಲು ಪರಿಗಣಿಸಲಾಗುತ್ತದೆ. ಇನ್ನೂ ದಾಖಲಾತಿ ಪರಿಶೀಲನೆ ವೇಳೆ ಸಲ್ಲಿಸಬೇಕಾದ ವಿವರಗಳನ್ನು ಡಿಸಿಇಟಿ 2026ರ ಇ-ಬ್ರೋಚರ್‍‌ನಲ್ಲಿ ಪ್ರಕಟಿಸಲಾಗಿದೆ. ಉಳಿದ ಎಲ್ಲ ಅಭ್ಯರ್ಥಿಗಳಿಗೆ ವೆರಿಫಿಕೇಶನ್ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಡಿಸಿಇಟಿ 2026ರ ಆನ್‌ಲೈನ್ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಕ್ರಮವನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಕಟಣೆಯಲ್ಲಿ ತಿಳಿಸಿದೆ.

ಯುಜಿಸಿಇಟಿ ಫಲಿತಾಂಶ ಬಿಡುಗಡೆ ಅಪ್ಡೇಟ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ಯುಜಿಇಸಿಟಿ ( UGCET-2026) ಎಂಜಿನಿಯರಿಂಗ್ ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಬಿಎಸ್ ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಸೇರಿದಂತೆ ವಿವಿಧ ಕೋರ್ಸಗಳ ಪ್ರವೇಶಕ್ಕೆ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದೇ ಜುಲೈ 15ರಂದು ಅಂತಿಮ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+