Daily Horoscope: ಈ ರಾಶಿಯವರಿಗೆ ಬುಧವಾರ ಅದೃಷ್ಟದ ದಿನ, ಕೈ ಹಾಕಿದ ಕೆಲಸಗಳಲ್ಲಿ ಸಿಗುವುದು ಯಶಸ್ಸು

Horoscope July 8: ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries)

ಇಂದು ನಿಮ್ಮ ದಿನವು ಸಂಭ್ರಮದಿಂದ ಕೂಡಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಜವಾಬ್ದಾರಿಗಳು ಹೆಚ್ಚಾಗಬಹುದು.ಹೊಸ ವ್ಯಾಪಾರವನ್ನು ಪ್ರಾರಂಭಿಸುವುದಕ್ಕೂ ಸುದಿನ. ಏನೇ ಕೆಲಸ ಆರಂಭಿಸಿದರೂ ಉತ್ತಮ ಯಶಸ್ಸು ಸಿಗುವ ಲಕ್ಷಣಗಳಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.

Horoscope July 8

ವೃಷಭ ರಾಶಿ (Taurus)

ಇಂದು ಅತ್ಯುತ್ತಮ ದಿನವಾಗಿರಲಿದೆ. ಸಕಾರಾತ್ಮಕ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಆರ್ಥಿಕ ಲಾಭದ ಪರಿಸ್ಥಿತಿ ನಿರ್ಮಾಣವಾಗಲಿದೆ. ತಾಳ್ಮೆ ಇರಲಿ. ಅನಾವಶ್ಯಕ ಜಗಳದಲ್ಲಿ ಭಾಗಿಯಾಗಬೇಡಿ.

ಮಿಥುನ ರಾಶಿ (Gemini)

ವ್ಯಾಪಾರದಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಬದಲು ಪ್ರಸ್ತುತ ಯೋಜನೆಗಳನ್ನು ಉತ್ತಮವಾಗಿ ನಿರ್ವಹಿಸುವುದು ಸೂಕ್ತ. ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಗೌರವ ಹೆಚ್ಚಾಗುವುದು. ವೇತನ ಹೆಚ್ಚಾಗುವ ಸಾಧ್ಯತೆ ಇದೆ.

ಕಟಕ ರಾಶಿ (Cancer)

ಕಚೇರಿ ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ಸಿಗುತ್ತದೆ. ಕೆಲಸದ ಒತ್ತಡ ಹೆಚ್ಚಾಗಬಹುದು. ಕಂಪ್ಯೂಟರ್, ಮಾಧ್ಯಮ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿರುವವರಿಗೆ ಹೊಸ ಅವಕಾಶಗಳು ಸಿಗಲಿವೆ. ಆರ್ಥಿಕವಾಗಿ ದಿನವು ಉತ್ತಮವಾಗಿರಲಿದೆ.

ಸಿಂಹ ರಾಶಿ (Leo)

ಹಲವು ಮೂಲಗಳಿಂದ ಹಣ ಬರುತ್ತದೆ. ವೈಯಕ್ತಿಕ ಜೀವನದಲ್ಲಿನ ಗೊಂದಲಗಳಿಗೆ ತೆರೆ ಬೀಳುವುದು. ಕೌಟುಂಬಿಕ ಜೀವನದಲ್ಲಿ ಸಂತೋಷ ನೆಲೆಸಲಿದೆ. ವಾದಗಳಿಂದ ದೂರವಿರಿ. ಆಸ್ತಿ ಖರೀದಿಸುವ ಬಗ್ಗೆ ಯೋಚಿಸಿ.

ಕನ್ಯಾ ರಾಶಿ (Virgo)

ಜೀವನದಲ್ಲಿ ಹೊಸ ಬದಲಾವಣೆ ತರುವ ದಿನ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗುವುದು. ಕಾರ್ಯಯೋಜನೆಗಳು ಯಶಸ್ವಿಯಾಗಲಿವೆ. ವ್ಯಾಪಾರದಲ್ಲಿ ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.

ತುಲಾ ರಾಶಿ (Libra)

ನಿಂತು ಹೋಗಿದ್ದ ಕೆಲಸ ಮತ್ತೆ ಚುರುಕು ಪಡೆಯುವುದು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮದುವೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಸಂಗಾತಿಯೊಂದಿಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.

ವೃಶ್ಚಿಕ ರಾಶಿ (Scorpio)

ಹೊಸ ಜನರ ಪರಿಚಯದಿಂದ ಲಾಭವಾಗುವುದು. ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಯಶಸ್ಸು ಸಿಗಲಿದೆ. ಮನೆ ಖರೀದಿ ಬಗ್ಗೆ ಯೋಚಿಸುವಿರಿ. ಹಠಾತ್ ಧನಲಾಭವಾಗುವ ಸಾಧ್ಯತೆ ಇದೆ. ಆದರೂ ಖರ್ಚು ಮಾಡುವಾಗ ಎಚ್ಚರಿಕೆ ಇರಲಿ.

ಧನು ರಾಶಿ (Sagittarius)

ಇಂದು ನಿಮಗೆ ಲಾಭದಾಯಕ ದಿನವಾಗಿರಲಿದೆ. ಉದ್ಯೋಗ ಬದಲಾಯಿಸಬೇಕು ಅಂದುಕೊಂಡವರಿಗೆ ಈ ದಿನ ಸೂಕ್ತವಾಗಿದೆ. ಈಂದು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಲಾಭ ನೀಡುವುದು. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.

ಮಕರ ರಾಶಿ (Capricorn)

ಕೌಟುಂಬಿಕ ಜೀವನದಲ್ಲಿ ಹೊಸ ಸಂತೋಷ ಮೂಡಲಿದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಸ್ನೇಹಿತರೊಂದಿಗೆ ಆನಂದದಿಂದ ದಿನ ಕಳೆಯುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಕುಂಭ ರಾಶಿ (Aquarius)

ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿರಲಿವೆ. ಕೆಲಸ ಕಾರ್ಯಗಳ್ಲಿ ಯಶಸ್ಸು ಸಿಗುವುದು. ಉಳಿತಾಯ ಯೋಜನೆಗಳು ಫಲಕಾರಿಯಾಗಲಿದೆ. ಕೆಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ. ತಾಯಿಯ ಬೆಂಬಲ ಇರುವುದು.

ಮೀನ ರಾಶಿ (Pisces)

ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ. ಹಳೆಯ ಸ್ನೇಹಿತರ ಭೇಟಿ ಖುಷಿ ನೀಡುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಉತ್ತಮ ಧನಲಾಭವಾಗುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+