Power Cut in Bengaluru: ನಗರದ ಹಲವು ಬಡಾವಣೆಗಳಲ್ಲಿ ಜುಲೈ 9ರಂದು ವಿದ್ಯುತ್ ಕಡಿತ, ಎಲ್ಲೆಲ್ಲಿ?
ಬೆಂಗಳೂರು: ಮಳೆ ಚುರುಕಾದ ಬೆನ್ನಲ್ಲೆ ತುರ್ತು ನಿರ್ವಹಣೆ ಕಾಮಗಾರಿ ನಡೆಸುವ ಪ್ರಯುಕ್ತ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇದೇ ಜುಲೈ 8 ಮತ್ತು 9 ರಂದು ಎರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರಿನ ಹತ್ತಾರು ಬಡಾವಣೆಯಲ್ಲಿ ಗುರುವಾರ (ಜುಲೈ 9)ರಂದು ಬೆಳಗ್ಗೆಯಿಂದ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಹೆಣ್ಣೂರು ರಸ್ತೆ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಅಧಿಕಾರಿಗಳು ಕೋರಿದ್ದಾರೆ. ನಗರದ ಯಾವೆಲ್ಲ ಬಡಾವಣೆಗಳಲ್ಲಿ ವಿದ್ಯುತ್ ಎಂಬ ವಿವರ ಇಲ್ಲಿದೆ..

ವಿದ್ಯುತ್ ಕಡಿತವಾಗುವ ಪ್ರದೇಶಗಳ ವಿವರ
ನಗರದ ಗ್ರೇಸ್ ಗಾರ್ಡನ್, ಕೆ. ನಾರಾಯಣಪುರ, ಹೆಣ್ಣೂರು ಬಂಡೆ, ಸಮುದ್ರಿಕಾ ಎನ್‌ಕ್ಲೇವ್, ಆಶಾ ಟೌನ್‌ಶಿಪ್, ನಾಗರಗಿರಿ ಟೌನ್‌ಶಿಪ್, ಕೆ. ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಐಶ್ವರ್ಯ ಬಡಾವಣೆ, ಮಾರುತಿ ಟೌನ್‌ಶಿಪ್, ಎವರ್‌ಗ್ರೀನ್ ಲೇಔಟ್, ಕನಕಶ್ರೀ ಬಡಾವಣೆ, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈ ಕೇರ್ ಶಾಲೆ, ಬಿಎಚ್ ಕೆ ಇಂಡಸ್ಟ್ರೀಸ್, ಜಾನಕಿರಾಮ್ ಬಡಾವಣೆ, ಕೊತ್ತನೂರು, ಪಟೇಲ್ ರಾಮಯ್ಯ ಬಡಾವಣೆ, ಅಂಜನಪ್ಪ ಬಡಾವಣೆ, ಬೈರತಿ ಗ್ರಾಮ, ಸಿಎಸ್ ಐ ಗೇಟ್, ಬೈರತಿ ಕ್ರಾಸ್, ವಡ್ಡರಪಾಳ್ಯ, ಅನುಗ್ರಹ ಬಡಾವಣೆ, ಕಾವೇರಿ ಬಡಾವಣೆ, ಕುವೆಂಪು ಬಡಾವಣೆ, ಸಂಗಮ್ ಎನ್‌ಕ್ಲೇವ್, ಬೈರತಿ ಬಂಡೆ, ತಿಮ್ಮೇಗೌಡ ಬಡಾವಣೆ, ಆತ್ಮವಿದ್ಯಾ ನಗರ, KRC, ದೊಡ್ಡಗುಬ್ಬಿ ಕ್ರಾಸ್, ಆಂಧ್ರ ಕಾಲೋನಿ, ಮಂಜುನಾಥ ನಗರ, ಹೊರಮಾವು, ಅಗರ, ಪಾತಾಳಮ್ಮ ದೇವಸ್ಥಾನ, ಲಕ್ಕಮ್ಮ ಲೇಔಟ್, ಎಕೆಆರ್. ಶಾಲೆ, ನ್ಯೂ ಮಿಲೇನಿಯಂ ಶಾಲೆ, ಪ್ರಕಾಶ್ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಸ್ಕಾಂ ವ್ಯಾಪ್ತಿಯಲ್ಲಿ ಇಂದು ವಿದ್ಯುತ್ ಕಡಿತ
ಕುಮಟಾ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ ಅಗತ್ಯ ನಿರ್ವಹಣೆ ಸಂಬಂಧ ಕಾಮಗಾರಿ ನಡೆಸಲಾಗುತ್ತದೆ. ಈ ಕಾರಣಕ್ಕೆ ಜುಲೈ 8ರಂದು ಬುಧವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸುಮಾರು ಎರಡು ಗಂಟೆಗಳ ಕಾಲ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿಗೊಳಿಸಲಾಗುವುದು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಅಧಿಕಾರಿಗಳು ತಿಳಿಸಿದ್ದಾರೆ.
ಗೋಕರ್ಣ, ಬಿಜ್ಜೂರು, ತಡಡಿ, ಓಂ ಬೀಚ್ ಪ್ರದೇಶ, ಮಿರ್ಜಾನ್, ಕೋಡ್ಕಣಿ, ಕಂಡಗಾರ, ನಾಗೂರು, ಬಂಕಿಕೊಡ್ಲ್, ಕಲ್ಲಬ್ಬೆ, ಕೂಜಳ್ಳಿ, ಯಲವಳ್ಳಿ, ದೀವಳ್ಳಿ, ಬಗ್ಗೂಣ, ಕಂಬಾರಮಕ್ಕಿ, ಮಾದನಗೆರೆ ಸೇರಿದಂತೆ ಸುತ್ತಮುತ್ತಲಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಕೆಲವು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.













Click it and Unblock the Notifications