BESCOM: OC ಇಲ್ಲದ ಮನೆಗಳಿಗೂ ವಿದ್ಯುತ್ ಸಂಪರ್ಕ; ಆಗಸ್ಟ್ 15ರವರೆಗೆ ಬೆಸ್ಕಾಂ ವಿಶೇಷ ಅವಕಾಶ

ಬೆಂಗಳೂರು: ಸ್ವಾಧೀನಾನುಭವ ಪತ್ರ (OC) ಇಲ್ಲದ್ದರಿಂದ ಈವರೆಗೆ ಯಾರೆಲ್ಲ ವಿದ್ಯುತ್ ಸಂಪರ್ಕ ಪಡೆಯಲು ಹರಸಾಹಸ ಪಡೆಯುತ್ತಿದ್ದರೋ ಅವರಿಗೆಲ್ಲ ಖುಷಿ ಸುದ್ದಿ ಸಿಕ್ಕಿದೆ. ಸ್ವಾಧೀನಾನುಭವ ಪತ್ರ (OC) ಸಲ್ಲಿಕೆಗೆ ಒಂದು ಬಾರಿ ವಿನಾಯಿತಿ ಪಡೆದು ವಿದ್ಯುತ್ ಸಂಪರ್ಕ ಪಡೆಯಲು ವಿಶೇಷ ಅವಕಾಶ ನೀಡಲಾಗಿದೆ. ಜೊತೆಗೆ ವಿದ್ಯುತ್ ಸಂಪರ್ಕ ಪಡೆಯುವ ಅವಕಾಶವನ್ನು ಮತ್ತೆ ಮುಂದಿನ ತಿಂಗಳ ಆಗಸ್ಟ್ 15ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಮಾಹಿತಿ ನೀಡಿದೆ.

ರಾಜ್ಯ ಸರ್ಕಾರ ಆದೇಶದಂತೆ ಷರತ್ತುಗಳ ಅನ್ವಯ ಸ್ವಾಧೀನಾನುಭವ ಪತ್ರ (OC) ಪಡೆದಿರಬೇಕು. ಅಂತಹ ಮನೆ ಮಾಲೀಕರು ಸುಲಭವಾಗಿ ಶಾಸ್ವತವಾಗಿ ಬೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ಪಡೆಯಬಹುದು. ಈ ಹಿಂದೆ ಜೂನ್ 22ರಿಂದ ಹದಿನೈದು ದಿನಗಳ ಕಾಲ ವಿಸ್ತರಣೆ ಆಗಿದ್ದ ಕಾಲ ಮಿತಿಯನ್ನು ಮತ್ತೆ ಆಗಸ್ಟ್ 15ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಒಸಿಗೆ ಅರ್ಜಿ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶ ನೀಡಲಾಗಿದೆ.

BESCOM

ಯಾವುದಕ್ಕೆ ಅನ್ವಯ?

2,400 ಚದರ ಅಡಿವರೆಗಿನ (ಶೇಕಡ 20ಕ್ಕೂ ಅಧಿಕ ಹೆಚ್ಚುವರಿ ವ್ಯತ್ಯಾಸ ಸಹಿತ), ನಿವೇಶನದಲ್ಲಿ ನಿರ್ಮಿಸಲಾಗಿರುವ ಜಿ+ 3 ಅಥವಾ ಸ್ಟಿಲ್ಟ್ + 4 ಮಹಡಿಗಳ ವಸತಿ ಕಟ್ಟಡಗಳಿಗೆ ಓಸಿ ಸಲ್ಲಿಸುವುದರಿಂದ ವಿನಾಯಿತಿ ಅನ್ವಯಿಸುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

BMTC: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಪ್ರಮುಖ ಮಾರ್ಗದಲ್ಲಿ 6 ಮೆಟ್ರೋ ಫೀಡರ್ ಬಸ್ ಸೇವೆ ಆರಂಭ
BMTC: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಪ್ರಮುಖ ಮಾರ್ಗದಲ್ಲಿ 6 ಮೆಟ್ರೋ ಫೀಡರ್ ಬಸ್ ಸೇವೆ ಆರಂಭ

ಅರ್ಹತೆ ಏನಿರಬೇಕು?

ದಿನಾಂಕ 31 ಮೇ 2026ರ ಒಳಗಾಗಿ ಶಾಶ್ವತ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಅಥವಾ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವ ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದೆ ಕಟ್ಟಡ ಪೂರ್ಣಗೊಂಡಿರುವ ಪ್ರಕರಣಗಳಿಗೆ ಮಾತ್ರ ಈ ಅವಕಾಶ ಲಭಿಸುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಸೇರಿದಂತೆ ಇಡೀ ರಾಜ್ಯಕ್ಕೆ ಅನ್ವಯಿಸಲಿದೆ. ಅರ್ಹ ಈ ವಿಸ್ತರಣಾ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮನೆ ಮನೆಗೆ ಎಸ್ಕಾಂ ಅಧಿಕಾರಿಗಳು ಭೇಟಿ

ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಯಾರೆಲ್ಲ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಅವರ ದಾಖಲಾತಿ ಪರಿಶೀಲನೆ ಆರಂಬವಾಗಿದೆ. ನಿಮ್ಮ ಜಿಲ್ಲೆಗಳ ವ್ಯಾಪ್ತಿ ಎಸ್ಕಾಂ ಅಧಿಕಾರಿಗಳು ನಿಮ್ಮ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಮನೆಗೆ ಬಂದಾಗ ರೇಷನ್ ಕಾರ್ಡ್, ವೋಟರ್ ಐಡಿ, ಅಗತ್ಯವಿದ್ದಲ್ಲಿ ಮನೆ ಬಾಡಿಗೆ ಪತ್ರ, ಭಾವಚಿತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ನೀಡುವಂತೆ ಕೇಳುತ್ತಾರೆ. ಯಾರೆಲ್ಲ ದಾಖಲೆ ಒದಗಿಸುತ್ತೀರಿ ಅವರ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಯಲಿದೆ ಎಂದು ಇತ್ತೀಚಿನ ಆದೇಶದಲ್ಲಿ ಸರ್ಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+