NEET ಮರುಪರೀಕ್ಷೆ ಮುನ್ನ 'ಟೆಲಿಗ್ರಾಮ್' ಬ್ಯಾನ್, ಕೇಂದ್ರದ ವಿರುದ್ಧ ಕೋರ್ಟ್ ಮೊರೆಹೋದ ಕಂಪನಿ

ನವದೆಹಲಿ; ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಅಶ್ಲೀಲತೆ, ಸೈಬರ್ ದಾಳಿಯಂತಹ ಅನೇಕ ಕಾನೂನುಬಾಹಿರ ಅಪರಾಧ ಪ್ರಕರಣಗಳಿಗೆ ಟೆಲಿಗ್ರಾಮ್ ಆಪ್ (Telegram App) ಬಳಕೆ ಆಗುತ್ತದೆ. ಹೀಗೆಂದು ಆರೋಪಿಸಿರುವ ಕೇಂದ್ರ ಸರ್ಕಾರ ಟೆಲಿಗ್ರಾಮ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಸದ್ಯ ಈ ವಿಚಾರ ದೇಶವ್ಯಾಪಿ ಸುದ್ದಿಯಾಗಿದೆ. ಜನರು ಒಂದು ಆಪ್‌ನಿಂದ ದೈನಂದಿನ ಜೀವನದಲ್ಲಿ ಏನೆಲ್ಲ ತೊಂದರೆ, ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಯೋಚಿಸುತ್ತಿದ್ದಾರೆ. ಇನ್ನೊಂದೆಡೆ ಕೇಂದ್ರದ ಜೂನ್ 22ರವರೆಗಿನ ನಿಷೇಧ ನಿರ್ಧಾರ ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.

ಮೆಸೇಜಿಂಗ್, ಇನ್ನಿತರ ಲಿಂಕ್‌ಗಳನ್ನು ಹಂಚಿಕೊಳ್ಳಲಾಗುವ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್ ಸಂಸ್ಥೆ ವಿರುದ್ಧ ಕೇಂದ್ರ ಸರ್ಕಾರವು ಅನೇಕ ಗಂಭೀರ ಆರೋಪ ಮಾಡಿದೆ. ಸೈಬರ್ ದಾಳಿ ಹರಡಲು ಟೆಲಿಗ್ರಾಂ ಬಳಸಲಾಗುತ್ತದೆ. ಈ ಅಪ್ಲಿಕೇಶನ್ "ಹೊಸ ಡಾರ್ಕ್ ವೆಬ್" ಆಗಿ ಮಾರ್ಪಟ್ಟಿದೆ. ಅಪರಾಧಿಗಳು, ಸೈಬರ್ ವಂಚಕರು, ಭಯೋತ್ಪಾದಕ ಗುಂಪು, ಕಾನೂನಿನಿಂದ ತಪ್ಪಿಸಿಕೊಳ್ಳಲು ಈ ಟೆಲಿಗ್ರಾಮ್ ಹೆಚ್ಚು ಬಳಕೆ ಆಗುತ್ತದೆ ಎಂದೆಲ್ಲ ಕೇಂದ್ರ ದೂರಿದೆ. ಹೀಗಾಗಿ ನಿಷೇಧಿಸಿರುವ ಬಗ್ಗೆ ತನ್ನ ನಡೆ ಸಮರ್ಥಿಸಿಕೊಂಡಿದೆ.

Telegram Ban

ಅಪರಾಧ ಚಟುವಟಿಕೆಗಳಿಗೆ ಟೆಲಿಗ್ರಾಮ್ ವೇದಿಕೆ

ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಮುಖ ವೇದಿಕೆ ಆಗಿರುವ ಕಾರಣವನ್ನು ಕೇಂದ್ರ ಪ್ರಮುಖವಾಗಿ ಉಲ್ಲೇಖಿಸಿದೆ. ಇತ್ತೀಚೆಗೆ ದೇಶದಲ್ಲಿ ಸಂಚಲನ ಮೂಡಿಸಿದ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಇದೇ ಟೆಲಿಗ್ರಾಮ್ ಬಳಸಲಾಗಿತ್ತು ಎನ್ನಲಾಗಿದೆ. ಇನ್ನೂ ಸೈಬರ್ ವಂಚನೆ, ಭಯೋತ್ಪಾದನೆಗೆ ಸಂಬಂಧಿಸಿದ ಪ್ರಚಾರ, ಮಕ್ಕಳ ಲೈಂಗಿಕ ಶೋಷಣೆ ಇನ್ನಿತರ ಆರ್ಥಿಕ ಅಪರಾಧಕ್ಕೆ ಮೂಲಕ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಕಾನೂನುಬಾಹಿರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಎಂದು ಕೇಂದ್ರ ತಿಳಿಸಿದೆ.

'NEET ಪೇಪರ್ ಲೀಕ್'ಗೆ ಬಲಿಯಾಯ್ತು 12 ಜೀವಗಳು: ಕರ್ನಾಟಕದ ಭಾಗ್ಯಶ್ರೀ, ಯೋಧನ ಪುತ್ರಿ ರಿಯಾ ಸೇರಿ ಹಲವರ ಆತ್ಮ*ಹತ್ಯೆ
'NEET ಪೇಪರ್ ಲೀಕ್'ಗೆ ಬಲಿಯಾಯ್ತು 12 ಜೀವಗಳು: ಕರ್ನಾಟಕದ ಭಾಗ್ಯಶ್ರೀ, ಯೋಧನ ಪುತ್ರಿ ರಿಯಾ ಸೇರಿ ಹಲವರ ಆತ್ಮ*ಹತ್ಯೆ

ಟೆಲಿಗ್ರಾಮ್ ಆಪ್ ದುರುಪಯೋಗ

ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಮಕ್ಕಳ ಲೈಂಗಿಕ ಶೋಷಣೆ ಮಾಡಲಾಗುತ್ತದೆ. ಆನ್‌ಲೈನ್ ಪ್ಲಾಟ್‌ಫಾರ್ಮ್ ಕುರಿತು ಸದಾ ನಿಗಾ ಇಡುವ ಮೇಲ್ವಿಚಾರಣೆ ಸಂಸ್ಥೆಗಳಿಗೆ ಟೆಲಿಗಾಮ್ ಕಾರ್ಯ ನಿರ್ವಹಣೆ ಕುರಿತು ಕಳವಳ ವ್ಯಕ್ತಪಡಿಸಿವೆ. ಇದರ ದುರುಪಯೋಗ ದೃಢಪಟ್ಟಿದೆ ಎಂದು ದೂರುಗಳಲ್ಲಿ ಸರ್ಕಾರಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಮುಖ್ಯವಾಗಿ ಚಲನಚಿತ್ರ, ಕಂಟೆಂಟ್ ಕ್ರಿಯೇಟರ್‍‌ ನಿರ್ಮಾಪಕರು, ನಿರ್ದೇಶಕರಿಗೂ ತೊಂದರೆ ನೀಡುತ್ತದೆ. ಅಂದರೆ ಹೊಸ ಸಿನಿಮಾಗಳ ಲಿಂಕ್ ಹರಡಿ, ಮೊಬೈಲ್‌ನಲ್ಲೇ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ಸಿನಿಮಾ ಮಂದಿಗೆ ನಷ್ಟವಾಗುತ್ತಿದೆ.

ಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಂ ಸಂಸ್ಥೆ

ಕೇಂದ್ರ ಸರ್ಕಾರದ ಆರೋಪಗಳು ಹಾಗೂ ನಿಷೇಧದ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಮ್ ಆಪ್ ಸಂಸ್ಥೆ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದೆ. ನ್ಯಾಯಾಲಯ ಬುಧವಾರವೇ ತುರ್ತು ವಿಚಾರಣೆಗೆ ಅನುಮತಿಸಿ ವಿಚಾರಣೆ ನಡೆಸಿತ್ತು. ಜೂನ್ 21ರಂದು ಭಾನುವಾರ ನೀಟ್ ಮರು ಪರೀಕ್ಷೆಗೆ ಸಮಯ ನಿಗದಿ ಆಗಿದೆ. ಈ ಹಿನ್ನೆಲೆ ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ತಡೆದು ಮಕ್ಕಳ ಭವಿಷ್ಯಕ್ಕೆ ದಾರಿ ಮಾಡುವಂತೆ ಎನ್‌ಟಿಎ ಆಗ್ರಹಿಸಿತ್ತು. ಇದೇ ವಿಚಾರ ಸಂಬಂಧ ಕೇಂದ್ರ ಸರ್ಕಾರ ಇದೇ ಜೂನ್ 22ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿ ಆದೇಶಿಸಿದೆ. ನಿಷೇಧ ಆದೇಶ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೋವ್ ಸರಿಯಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+