Padmaja Venugopal: ಕಾಂಗ್ರೆಸ್ ಮಾಜಿ ಸಿಎಂ ಪುತ್ರಿ ಬಿಜೆಪಿ ಸೇರ್ಪಡೆ

ನವದೆಹಲಿ, ಮಾರ್ಚ್ 07: ಲೋಕಸಭಾ ಚುನಾವಣೆ ಕಾವು ದಿನೇ ದಿನೆ ಹೆಚ್ಚಾಗುತ್ತಿದೆ. ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆ ಆಗುವುದು ಬಾಕಿ ಇರುವಾಗಲೇ ಕಾಂಗ್ರೆಸ್ (Congress) ಪಕ್ಷದ ಮಾಜಿ ಮುಖ್ಯಮಂತ್ರಿಯ ಪುತ್ರಿಯೊಬ್ಬರು ಗುರುವಾರ ಭಾರತೀಯ ಜನತಾ ಪಾರ್ಟಿ (BJP) ಸೇರಿದ್ದಾರೆ.

ಹೌದು, ಕಾಂಗ್ರೆಸ್ ಪಕ್ಷದ ದಿ.ನಾಯಕ ಮತ್ತು ಕೇರಳ ರಾಜ್ಯದ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ (K.Karunakaran) ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ (Padmaja Venugopal) ಅವರು ಗುರುವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

Padmaja Venugopal Daughter of Kerala Ex CM K Karunakaran Joined BJP

ಪದ್ಮಜಾ ವೇಣುಗೋಪಾಲ್ ಅವರು ಬಿಜೆಪಿ ಸೇರುವ ಮುನ್ನ ಪದ್ಮಜಾ ವೇಣುಗೋಪಾಲ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ಬಿಜೆಪಿಗೆ ಸೇರಿ ಪದ್ಮಜಾ ಹೇಳಿದ್ದೇನು?

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಪದ್ಮಜಾ ವೇಣುಗೋಪಾಲ್ ಅವರು, ನಾನು ಇಷ್ಟು ವರ್ಷ ಕಾಂಗ್ರೆಸ್‌ನಲ್ಲಿ ನೆಮ್ಮದಿ ಇರಲಿಲ್ಲ. ಹೈಕಮಾಂಡ್‌ಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ನನ್ನ ತಂದೆಯವರೂ ಅದೇ ರೀತಿ ಆಗಿತ್ತು. ತಂದೆಯವರು ಅಸಮಾಧಾನಗೊಂಡಿದ್ದರು. ಇದೆಲ್ಲ ಕಾರಣದಿಂದ ನಾನು ಪಕ್ಷ ಬಿಡುವ ತೀರ್ಮಾನ ಮಾಡಬೇಕಾಯಿತು ಎಂದು ಅವರು ತಿಳಿಸಿದರು.

ಫೇಸ್‌ಬುಕ್ ಪೋಸ್ಟ್ ಡಿಲೀಟ್

ಕೆಲವು ಸಮಯದ ಹಿಂದೆ ಕೇರಳದ ಮಾಜಿ ಸಿಎಂ ಪುತ್ರ ಪದ್ಮಜಾ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳೀ ಬಂದಿದ್ದವು. ಈ ವರದಿಗಳನ್ನು ತಳ್ಳಿ ಹಾಕಿದ್ದ ಅವರು ಫೇಸ್‌ಬುಕ್ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಬಿಜೆಪಿ ಸೇರ್ಪಡೆ ಅಧಿಕೃತವಾಗುವ ಮೊದಲೇ ಅವರು ಫೇಸ್‌ಬುಕ್‌ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

Padmaja Venugopal Daughter of Kerala Ex CM K Karunakaran Joined BJP

ಸೇರ್ಪಡೆಗೆ ಸಹೋದರನ ಪ್ರತಿಕ್ರಿಯೆ

ಸಹೋದರಿಯ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಪದ್ಮಜಾ ಅವರ ಸಹೋದರ ಮತ್ತು ಪಕ್ಷದ ಸಂಸದ ಕೆ.ಮುರಳೀಧರನ್ ಅವರು, ಈ ನಿರ್ಧಾರದ ಮೂಲಕ ಪದ್ಮಜಾ ಅವರು ದ್ರೋಹ ಮಾಡಿದ್ದಾರೆ. ಅವರ ಸೇರ್ಪಡೆಯಿಂದ ಬಿಜೆಪಿಗೆ ಏನು ಪ್ರಯೋಜನವಿಲ್ಲ ಎಂದು ತಿಳಿಸಿದರು.

ನಮ್ಮ ತಂದೆ ಕರುಣಾಕರನ್ ಅವರು ಎಂದಿಗೂ ಕೋಮುವಾದದೊಂದಿಗೆ ರಾಜಿ ಮಾಡಿಕೊಂಡಿಲ್ಲ. ಜಾತ್ಯತೀತ ಮನೋಭಾವವುಳ್ಳ ಜನರು ಅವರ ಕುಟುಂಬದ ಸದಸ್ಯ ಬಿಜೆಪಿಗೆ ಸೇರಿರುವುದು ದುಃಖಕರ ಎಂದು ಸಹೋದರಿಯ ಬಿಜೆಪಿ ಸೇರ್ಪಡೆಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಲೋಕಸಭಾ ಚುನಾವಣೆ ಮೊದಲು ಕಾಂಗ್ರೆಸ್ ಸೇರಿದಂತೆ ಬೇರೆ ಬೇರೆ ಪಕ್ಷಗಳ ನಾಯಕರು ಬಿಜೆಪಿ ಸೇರಿವುದರಿಂದ ವಿಪಕ್ಷಗಳಲ್ಲಿ ಸಣ್ಣ ಮಟ್ಟಿನ ಗೊಂದಲ, ಧೈರ್ಯಗುಂದುವ ಸಾಧ್ಯತೆ ಇರಲಿದೆ. ಇದು ಬಿಜೆಪಿಗೆ ವರದಾನವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+