Lok Sabha Election: ರಾಹುಲ್ ಗಾಂಧಿ ಕೇರಳದಲ್ಲಿ ಚುನಾವಣೆ ಸ್ಪರ್ಧಿಸುತ್ತಿರುವ ಕಾಣವನ್ನು ಬಹಿರಂಗ ಪಡಿಸಿದ ಡಿಕೆ ಶಿವಕುಮಾರ್
ದೇಶದಲ್ಲಿ ಚುನಾವಣೆಯ ಪ್ರಚಾರದ ಬಿಸಿ ಜೋರಾಗಿದೆ. ಎಲ್ಲ ಪಕ್ಷಗಳು ಪ್ರಚಾರ ಜೋರಾಗಿ ನಡೆಸಿವೆ. ಕಾಂಗ್ರೆಸ್ ಸಹ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕೇಂದ್ರದಲ್ಲಿ ದಶಕದಿಂದ ಅಧಿಕಾರ ಇಲ್ಲದೆ ಒದ್ದಾಡುತ್ತಿದೆ. ಈ ಬಾರಿ ಕಾಂಗ್ರೆಸ್ ಭಾರೀ ಹುಮ್ಮಸ್ಸಿನಿಂದ ಕಣಕ್ಕೆ ಇಳಿಯುತ್ತಿದೆ. ಅಲ್ಲದೆ ಕಾಂಗ್ರೆಸ್ ಹಲವು ಲೆಕ್ಕಾಚಾರಗಳಿಂದ ಅಭ್ಯರ್ಥಿಗಳನ್ನು ಸಹ ಘೋಷಣೆ ಮಾಡಿದೆ. ಆದರೆ ಹಲವರಲ್ಲಿ ಮೂಡಿರುವ ಹಲವು ಪ್ರಶ್ನೆಗಳಲ್ಲಿ ಒಂದು ರಾಹುಲ್ ಗಾಂಧಿ, ಕೇರಳದಿಂದ ಏಕೆ ನಿಲುತ್ತಿದ್ದಾರೆ ಎಂದು.
ಗಾಂಧಿ ಕುಟುಂಬ ಸಾಮಾನ್ಯವಾಗಿ ಉತ್ತರ ಪ್ರದೇಶ ಅಮೇಟಿ, ರಾಯಬರೇಲಿಯಲ್ಲಿ ಚುನಾವಣಾ ಅಖಾಡಕ್ಕೆ ಇಳಿಯುತ್ತಿತ್ತು. ಆದರೆ ಕಳೆದ ವರ್ಷದಿಂದ ರಾಹುಲ್ ಗಾಂಧಿ ಅವರು ಕೇರಳದತ್ತ ಮುಖ ಮಾಡಿದ್ದಾರೆ. ದೇಶದಲ್ಲಿ ಹಲವು ರಾಜ್ಯಗಳು ಇದ್ದರೂ ಸಹ, ಕಾಂಗ್ರೆಸ್ ಮುಖಂಡ ಕೇರಳವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿತ್ತು. ಈ ಪ್ರಶ್ನೆಗೆ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಚಾರದ ವೇಳೆ ಉತ್ತರ ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಅಲ್ಲದೆ ಬಿದ್ದ ಮತಗಳಲ್ಲಿ 64.7ರಷ್ಟು ಮತಗಳನ್ನು ಪಡೆದು ಜಯ ಸಾಧಿಸಿದ್ದರು. ಅಮೇಟಿಯಲ್ಲಿ ರಾಹುಲ್ ಗಾಂಧಿಯವರುನ್ನು 55120 ಮತಗಳ ಅಂತರದಿಂದ ಸ್ಮೃತಿ ಇರಾನಿ ಅವರು ಸೋಲಿಸಿದ್ದರು. ರಾಹುಲ್ ಗಾಂಧಿ ವಾಯನಾಡು ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ್ದರು. ವಾಯನಾಡು ಏಕೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡ್ ನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರು ಕೇರಳವನ್ನು ತನ್ನ ಚುನಾವಣಾ ಕಣವಾಗಿ ಏಕೆ ಆರಿಸಿಕೊಂಡರು? ಈ ಪ್ರಶ್ನೆಗೆ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉತ್ತರ ನೀಡಿದ್ದಾರೆ.

ಕೇರಳವೇ ಏಕೆ?
ಚುನಾವಣಾ ಪ್ರಚಾರದಲ್ಲಿ ಈ ಬಗ್ಗೆ ಮತದಾರರ ಗಮನ ಸೆಳೆದ ಕರ್ನಾಟಕದ ಉಪ ಮುಖ್ಯಮಂತ್ರಿ ಶಿವಕುಮಾರ್ 'ಒಂದು ದಿನ ನಾನು ರಾಹುಲ್ ಗಾಂಧಿ ಅವರನ್ನು ಕೇರಳದಿಂದ ನೀವು ಏಕೆ ಸ್ಪರ್ಧಿಸುತ್ತಿದ್ದೀರಿ ಎಂದು ಕೇಳಿದ್ದೆ. ಅಲ್ಲದೆ ನೀವು ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸಬಹುದಿತ್ತು. ಅಥವಾ ನೀವು ದೇಶದ ಬೇರೆ ಬೇರೆ ಭಾಗಗಳಿಂದ ಚುನಾವಣೆಗೆ ಸ್ಪರ್ಧಿಸಬಹುದಿತ್ತು ಎಂದು ಪ್ರಶ್ನೆ ಕೇಳಿದ್ದೆ.
ರಾಹುಲ್ ಹೇಳಿದ್ದೇನು?
ಆಗ ರಾಹುಲ್ ಗಾಂಧಿ, ಕೇರಳ ಧೈರ್ಯದ ನಾಡು, ಕೇರಳ ಸೌಹಾರ್ದದ ನಾಡು, ಕೇರಳ ಶಾಂತಿಯ ನಾಡು, ಕೇರಳ ಬದ್ಧತೆಯ ನಾಡು, ಕೇರಳದ ಜನರು ಅತ್ಯಂತ ನಿಷ್ಠಾವಂತರು, ಹಾಗಾಗಿ ಕೇರಳವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಉತ್ತರ ನೀಡಿದ್ದರು.
#WATCH एर्नाकुलम, केरल: कर्नाटक के उपमुख्यमंत्री डी. के. शिवकुमार ने जनसभा को संबोधित करते हुए कहा, "एक दिन मैंने राहुल गांधी से पूछा कि आपने केरल को क्यों चुना, आप कर्नाटक में चुनाव लड़ सकते थे, आप देश के अन्य हिस्सों से चुनाव लड़ सकते थे। उन्होंने कहा कि केरल साहस की भूमि है,… pic.twitter.com/zlT3mvGzAs
— ANI_HindiNews (@AHindinews) April 7, 2024
ಯಾವ ಜಾತಿ ಸ್ಟ್ರಾಂಗ್
ವಯನಾಡಿನಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಶೇಕಡಾ 40 ರಿಂದ 45 ರಷ್ಟಿದ್ದಾರೆ. ಭಾರತದ ರಾಜ್ಯ ಚುನಾವಣಾ ಅಂಕಿಅಂಶಗಳ ಪ್ರಕಾರ, ವಯನಾಡ್ 40 ಪ್ರತಿಶತ ಮುಸ್ಲಿಮರು ಮತ್ತು 40 ಪ್ರತಿಶತ ಹಿಂದೂಗಳನ್ನು ಹೊಂದಿದೆ. ಮತ್ತು 20 ಪ್ರತಿಶತ ಜನರು ಕ್ರಿಶ್ಚಿಯನ್ನರು. ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರ ಪತ್ನಿ ಅನ್ನಿ ರಾಜಾ ಕ್ರಿಶ್ಚಿಯನ್ ಆಗಿರುವ ಕಾರಣ ರಾಹುಲ್ ಗೆ ಗೆಲುವಿನ ಹಾದಿ ಸುಲಭವಲ್ಲ. ಒಂದು ವೇಳೆ ಹಿಂದೂ-ಮುಸ್ಲಿಂ ಮತಗಳು ವಿಭಜನೆಯಾದರೂ ರಾಹುಲ್ ಗೆಲುವಿಗೆ ಹರಸಾಹಸ ಪಡಬೇಗುತ್ತದೆ.
ಈ ಬಾರಿ ವಯನಾಡಿನಲ್ಲಿ ರಾಹುಲ್ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಒಂದೆಡೆ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರ ಪತ್ನಿ ಅನ್ನಿ ರಾಜಾ ವಯನಾಡ್‌ನಿಂದ ಸ್ಪರ್ಧಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ. ಹೀಗಿರುವಾಗ ರಾಹುಲ್ ಗಾಂಧಿ ಈ ಸ್ಥಾನ ಗೆಲ್ಲುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications