ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್‌ ತಯಾರಿಸಲು 5 ಕಂಪೆನಿಗಳಿಂದ ಬಿಡ್‌

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 1: ಫ್ರೆಂಚ್ ರೈಲ್ವೇ ಕಂಪೆನಿ ಅಲ್‌ಸ್ಟಾಮ್, ರಷ್ಯಾದ ಟ್ರಾನ್ಮಾಶ್ಹೋಲ್ಡಿಂಗ್, ಮೇಧಾ ಸರ್ವೋ ಮತ್ತು ಸೀಮೆನ್ಸ್ ಸೇರಿದಂತೆ ಐದು ಪ್ರಮುಖ ಕಂಪೆನಿಗಳು ಮುಂದಿನ 200 ವಂದೇ ಭಾರತ್ ರೈಲುಗಳ ತಯಾರಿಕೆಗೆ ತಮ್ಮ ಬಿಡ್‌ಗಳನ್ನು ಹಾಕಿದ್ದಾರೆ.

ಈ ರೈಲು ಇದು ರಾತ್ರಿಯ ಪ್ರಯಾಣಕ್ಕಾಗಿಯೇ ವಿಶೇಷ ಸ್ಲೀಪರ್ ಕೋಚ್‌ಗಳನ್ನು ಸಹ ಹೊಂದಿರುತ್ತದೆ. ಈ ಪೈಕಿ 120 ರೈಲುಗಳನ್ನು ತಯಾರಿಸಲು ಕಡಿಮೆ ಬಿಡ್‌ದಾರರು ವರ್ಕ್ ಆರ್ಡರ್ ಪಡೆಯಲಿದ್ದು ಎರಡನೇ ಕಡಿಮೆ ಬಿಡ್‌ದಾರರು ಉಳಿದ 80 ರೈಲುಗಳನ್ನು ತಯಾರಿಸಲು ಆರ್ಡರ್ ಪಡೆಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೆಚ್ಚಿದ ಜನಪ್ರಿಯತೆ, ಪ್ರಯಾಣಕ್ಕೆ ಅಧಿಕ ಬೇಡಿಕೆವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೆಚ್ಚಿದ ಜನಪ್ರಿಯತೆ, ಪ್ರಯಾಣಕ್ಕೆ ಅಧಿಕ ಬೇಡಿಕೆ

ಅಂತಿಮ ಬಿಡ್ ಸಲ್ಲಿಕೆ ದಿನಾಂಕಗಳನ್ನು ಮೂರು ಬಾರಿ ವಿಸ್ತರಣೆ ಮಾಡಿದ ನಂತರ ಭಾರತೀಯ ರೈಲ್ವೆ ಬುಧವಾರ ತಾಂತ್ರಿಕ ಬಿಡ್‌ಗಳನ್ನು ತೆರೆಯಿತು. ಯೋಜನೆಯ ವೆಚ್ಚ ಸುಮಾರು 26,000 ಕೋಟಿ ರೂ. ಇದೆ. ಮೂಲಗಳು ಹೇಳುವಂತೆ ಅಲ್‌ಸ್ಟೋಮ್ ತನ್ನ ಬಿಡ್ ಅನ್ನು ಒಂದೇ ಘಟಕವಾಗಿ ಹಾಕಿದೆ. ಉಳಿದವರೆಲ್ಲರೂ ಒಕ್ಕೂಟಗಳನ್ನು ರಚಿಸಿ ನಂತರ ತಮ್ಮ ಟೆಂಡರ್‌ಗಳನ್ನು ಸಲ್ಲಿಸಿದ್ದಾರೆ. ವಂದೇ ಭಾರತ್ ರೈಲುಗಳ ತಯಾರಿಕೆಗಾಗಿ ಇದುವರೆಗೆ ಹೆಚ್ಚಿನ ಆರ್ಡರ್‌ಗಳನ್ನು ಪಡೆದಿರುವ ಮೇಧಾ, ಸ್ವಿಸ್ ರೈಲ್ವೇ ರೋಲಿಂಗ್ ಸ್ಟಾಕ್ ತಯಾರಕ ಸ್ಟಾಡ್ಲರ್ ರೈಲ್‌ನೊಂದಿಗೆ ಕೈಜೋಡಿಸಿದ್ದಾರೆ. ಬಿಎಚ್‌ಇಎಲ್‌ ಟಿಟ್ಟಾಗ್ರಾ ವ್ಯಾಗನ್ಸ್ ಜೊತೆ ಕೈಜೋಡಿಸಿದೆ.

ಸೀಮೆನ್ಸ್ ಬಿಇಎಂಎಲ್ ಜೊತೆಗೆ ಬಿಡ್‌

ಸೀಮೆನ್ಸ್ ಬಿಇಎಂಎಲ್ ಜೊತೆಗೆ ಬಿಡ್‌

ರಷ್ಯಾದ ರೈಲ್ವೇ ದಿಗ್ಗಜ ಟ್ರಾನ್ಮಾಶ್ಹೋಲ್ಡಿಂಗ್ ಸಹ ಈ ಯೋಜನೆಗೆ ಭಾರತೀಯ ಸಂಸ್ಥೆಯೊಂದಿಗೆ ಜಂಟಿ ಉದ್ಯಮವಾಗಿ ಬಿಡ್ ಮಾಡಿದೆ. ಸೀಮೆನ್ಸ್ ಸಹ ಬಿಇಎಂಎಲ್ ಜೊತೆಗೆ ಸೇರಿ ಬಿಡ್ ಮಾಡಿದೆ. ಟೆಂಡರ್‌ನಲ್ಲಿರುವ ದಾಖಲೆಯ ಪ್ರಕಾರ, ಬಿಡ್‌ದಾರರು ಈ ಮುಂದಿನ ಪೀಳಿಗೆಯ ರೈಲಿನ ಮಾದರಿಯನ್ನು 24 ತಿಂಗಳೊಳಗೆ ತಯಾರಿಸಬೇಕಾಗುತ್ತದೆ. ಇತ್ತೀಚೆಗಷ್ಟೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಏಪ್ರಿಲ್ 2024ರ ವೇಳೆಗೆ ಸ್ಲೀಪರ್ ಕೋಚ್‌ಗಳೊಂದಿಗೆ ಮೊದಲ ವಂದೇ ಭಾರತ್ ರೈಲನ್ನು ಪಡೆಯುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದರು.

2025ಕ್ಕೆ ಯುರೋಪ್‌, ಅಮೆರಿಕಾಕ್ಕೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರಫ್ತು2025ಕ್ಕೆ ಯುರೋಪ್‌, ಅಮೆರಿಕಾಕ್ಕೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರಫ್ತು

45 ದಿನಗಳ ಬಿಡ್‌ ಪ್ರಕ್ರಿಯೆ ಆಹ್ವಾನ

45 ದಿನಗಳ ಬಿಡ್‌ ಪ್ರಕ್ರಿಯೆ ಆಹ್ವಾನ

ಈಗ ತಾಂತ್ರಿಕ ಬಿಡ್‌ಗಳು ಬಂದಿರುವುದರಿಂದ ಟೆಂಡರ್ ಸಮಿತಿಯು ಪ್ರತಿ ಬಿಡ್‌ನ ತಾಂತ್ರಿಕ ಮೌಲ್ಯಮಾಪನವನ್ನು ಪೂರ್ಣಗೊಳಿಸುತ್ತದೆ. ನಂತರ ಹಣಕಾಸು ಬಿಡ್‌ಗಳನ್ನು ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕ್ರಿಯೆಯು ಸುಮಾರು 45 ದಿನಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲಿಯವರೆಗೆ ಭಾರತೀಯ ರೈಲ್ವೇ ಕೇವಲ ಚೇರ್ ಕಾರ್ ಹೊಂದಿರುವ 102 ವಂದೇ ಭಾರತ್ ರೈಲುಗಳ ತಯಾರಿಕೆಗೆ ಗುತ್ತಿಗೆ ನೀಡಿದೆ. ಆದರೆ ಈ ಜಾಗತಿಕ ಟೆಂಡರ್‌ನಲ್ಲಿ ತಯಾರಕರಿಗೆ ಆಸನ ಅಥವಾ ಸ್ಲೀಪರ್ ಸೌಲಭ್ಯಗಳೊಂದಿಗೆ ವಂದೇ ಭಾರತ್ ರೈಲುಗಳನ್ನು ತಯಾರು ಮಾಡಲು ಆಯ್ಕೆಗಳನ್ನು ನೀಡಲಾಗುತ್ತಿದೆ.

 ಪ್ರತಿ ಕೋಚ್‌ನಲ್ಲಿ ನಾಲ್ಕು ಶೌಚಾಲಯ

ಪ್ರತಿ ಕೋಚ್‌ನಲ್ಲಿ ನಾಲ್ಕು ಶೌಚಾಲಯ

ಸ್ಲೀಪರ್ ಕೋಚ್‌ಗಳ ವಿನ್ಯಾಸವು ಈಗ ಬರುತ್ತಿರುವ ವಂದೇ ಭಾರತ್ ರೈಲುಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಪ್ರತಿ ಕೋಚ್‌ನಲ್ಲಿ ನಾಲ್ಕು ಶೌಚಾಲಯಗಳು ಮತ್ತು ಸೀಟುಗಳ ಮಾದರಿಯನ್ನು ಸ್ಲೀಪರ್ ಕ್ಲಾಸ್‌ಗೆ ಕರ್ಟನ್‌ಗಳು, ಪ್ಯಾಂಟ್ರಿ ಕಾರ್‌ಗಳು ಮತ್ತು ಮ್ಯಾಚಿಂಗ್ ಲೈಟಿಂಗ್ ಸಿಸ್ಟಮ್‌ಗಳ ವ್ಯವಸ್ಥೆ ಮಾಡಲು ಬದಲಾಯಿಸಲಾಗುತ್ತದೆ.

ಸ್ಲೀಪರ್ ಕೋಚ್‌ ವಂದೇ ಭಾರತ್ ತಯಾರಿಸಲು ಸಿದ್ಧತೆ

ಸ್ಲೀಪರ್ ಕೋಚ್‌ ವಂದೇ ಭಾರತ್ ತಯಾರಿಸಲು ಸಿದ್ಧತೆ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು 2025-26ರ ವೇಳೆಗೆ ಯುರೋಪ್, ದಕ್ಷಿಣ ಅಮೆರಿಕಾ ಮತ್ತು ಪೂರ್ವ ಏಷ್ಯಾದ ಮಾರುಕಟ್ಟೆಗಳಿಗೆ ರಫ್ತು ಮಾಡಲು ರೈಲ್ವೇ ಇಲಾಖೆ ಯೋಜಿಸಲಾಗುತ್ತಿದೆ. 2024ರ ಮೊದಲ ತ್ರೈಮಾಸಿಕದ ವೇಳೆಗೆ ಸ್ಲೀಪರ್ ಕೋಚ್‌ಗಳೊಂದಿಗೆ ಸ್ಥಳೀಯ ರೈಲುಗಳ ಇತ್ತೀಚಿನ ವಂದೇ ಭಾರತ್‌ ಆವೃತ್ತಿಯು ಕಾರ್ಯನಿರ್ವಹಿಸಲಿದೆ. ಮುಂದಿನ ಕೆಲವು ವರ್ಷಗಳಲ್ಲಿ 75 ವಂದೇ ಭಾರತ್ ರೈಲುಗಳನ್ನು ವಿದೇಶಗಳಿಗೂ ರಫ್ತು ಮಾಡಲು ಸಿದ್ಧವಾಗಲು ರೈಲ್ವೆ ಯೋಜಿಸುತ್ತಿದೆ ಎಂದು ಮೊನ್ನೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.

English summary
Five major companies, including French railway company Alstom, Russia's Tranmashholding, Medha Servo and Siemens, have placed their bids for manufacturing the next 200 Vande Bharat trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X