ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೆಚ್ಚಿದ ಜನಪ್ರಿಯತೆ, ಪ್ರಯಾಣಕ್ಕೆ ಅಧಿಕ ಬೇಡಿಕೆ

|
Google Oneindia Kannada News

ಬೆಂಗಳೂರು, ನವೆಂಬರ್‌ 29: ನವೆಂಬರ್‌ 11ರಂದು ಚಾಲನೆಗೊಂಡ ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು ಮಾರ್ಗವಾಗಿ ಚೆನ್ನೈನಿಂದ ಮೈಸೂರಿಗೆ ಓಡಾಡುತ್ತಿದ್ದು, ಅಲ್ಪ ಕಾಲದಲ್ಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಸೆಮಿ ಹೈ ಸ್ಪೀಡ್ ವಂದೇ ಭಾರತ್ ರೈಲು ಬೆಂಗಳೂರಿನ ಮೂಲಕ ಮೈಸೂರು ಮತ್ತು ಚೆನ್ನೈ ನಡುವೆ ಪ್ರಯಾಣಿಕರಿಗೆ ನೀಡುವ 30 ನಿಮಿಷಗಳ ಸಮಯ ಉಳಿತಾಯವು ಹೆಚ್ಚು ಜನಪ್ರಿಯತೆಗೆ ಕಾರಣವಾಗಿದೆ. ನವೆಂಬರ್ 11ರಂದು ಪ್ರಾರಂಭವಾದಾಗಿನಿಂದ ವಂದೇ ಭಾರತ್ ಪ್ರತಿದಿನ ಸಂಪೂರ್ಣವಾಗಿ ಚಾಲನೆಯಲ್ಲಿದೆ.

2025ಕ್ಕೆ ಯುರೋಪ್‌, ಅಮೆರಿಕಾಕ್ಕೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರಫ್ತು2025ಕ್ಕೆ ಯುರೋಪ್‌, ಅಮೆರಿಕಾಕ್ಕೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರಫ್ತು

ನೈಋತ್ಯ ರೈಲ್ವೆ ವಲಯವು ನವೆಂಬರ್ 12ರಿಂದ ನವೆಂಬರ್ 22 ರವರೆಗೆ ಬಿಡುಗಡೆ ಮಾಡಿದ ಬುಕಿಂಗ್ ಅಂಕಿಅಂಶಗಳು ರೈಲಿನ ಅಗಾಧ ಬೇಡಿಕೆಯನ್ನು ಬಹಿರಂಗಪಡಿಸಿದೆ. ಇದು ಚೆನ್ನೈನಿಂದ ಮೈಸೂರಿಗೆ 390 ನಿಮಿಷಗಳು (6 ಗಂಟೆ 40 ನಿಮಿಷ) ಮತ್ತು ಹಿಂದಿರುಗುವ ದಿಕ್ಕಿನಲ್ಲಿ 385 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಶತಾಬ್ದಿ ಎರಡೂ ಕಡೆಯಿಂದ 30 ನಿಮಿಷಗಳನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತದೆ.

ಪ್ರತಿ ಟಿಕೆಟ್ ಬೆಲೆ 780 ರೂಪಾಯಿ

ಪ್ರತಿ ಟಿಕೆಟ್ ಬೆಲೆ 780 ರೂಪಾಯಿ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ 14 ಎಸಿ ಚೇರ್ ಕಾರ್‌ಗಳನ್ನು (ಸಿಸಿ) ಜೊತೆಗೆ ಎರಡು ಎಕ್ಸಿಕ್ಯುಟಿವ್ ಎಸಿ ಚೇರ್ ಕಾರ್‌ಗಳನ್ನು (ಇಸಿ) 112 ರಿವಾಲ್ವಿಂಗ್ ಸೀಟ್‌ಗಳನ್ನು ಹೊಂದಿದೆ. ಚೇರ್‌ ಕಾರ್‌ ವರ್ಗದಲ್ಲಿ 1,092 ಸೀಟುಗಳಿದ್ದು, ಪ್ರತಿ ಟಿಕೆಟ್ ಬೆಲೆ 780 ರೂ.ಗೆ ಹೋಲಿಸಿದರೆ ಎಕ್ಸಿಕ್ಯುಟಿವ್‌ ಟಿಕೆಟ್ ಬೆಲೆ 1,660 ರೂ. ಆಗಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಎಕ್ಸಿಕ್ಯುಟಿವ್ ಎಸಿ ಚೇರ್ ವರ್ಗವು ಸರಾಸರಿ 147% ಬುಕಿಂಗ್ ಹೊಂದಿದೆ,

ಮುಂದಿನ ಬಜೆಟ್‌ನಲ್ಲಿ 400 ಹೊಸ ವಂದೇ ಭಾರತ್ ರೈಲು ಘೋಷಣೆ ಸಾಧ್ಯತೆಮುಂದಿನ ಬಜೆಟ್‌ನಲ್ಲಿ 400 ಹೊಸ ವಂದೇ ಭಾರತ್ ರೈಲು ಘೋಷಣೆ ಸಾಧ್ಯತೆ

ಎಕ್ಸಿಕ್ಯುಟಿವ್‌ ವರ್ಗದಲ್ಲಿ 125% ಬುಕಿಂಗ್

ಎಕ್ಸಿಕ್ಯುಟಿವ್‌ ವರ್ಗದಲ್ಲಿ 125% ಬುಕಿಂಗ್

ಚೇರ್‌ ಕಾರ್‌ ವರ್ಗವು ಚೆನ್ನೈನಿಂದ ಮೈಸೂರಿಗೆ 115% ಬುಕಿಂಗ್ ಆಗಿದೆ (ರೈಲು ಸಂಖ್ಯೆ. 20607). ಮೈಸೂರಿನಿಂದ ಚೆನ್ನೈಗೆ ಹೋಗುವ ಮಾರ್ಗದಲ್ಲಿ (ರೈಲು ಸಂಖ್ಯೆ. 20608), ಎಕ್ಸಿಕ್ಯುಟಿವ್‌ ವರ್ಗವು ಸರಾಸರಿ 125% ಬುಕಿಂಗ್ ಆಗಿದ್ದರೆ, ಸಿಸಿ ವರ್ಗವು 97% ಬುಕಿಂಗ್ ಆಗಿದೆ. ರೈಲಿನಲ್ಲಿ ಪ್ರಯಾಣಿಸಲು ಕಾಯುವ ಪಟ್ಟಿ ದೊಡ್ಡದಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ನೈರುತ್ಯ ರೈಲ್ವೆ) ಅನೀಶ್ ಹೆಗ್ಡೆ ಹೇಳಿದರು.

ವಿಮಾನ ಪ್ರಯಾಣದಂತಹ ಸೌಕರ್ಯ

ವಿಮಾನ ಪ್ರಯಾಣದಂತಹ ಸೌಕರ್ಯ

ಅಂಕಿಅಂಶಗಳ ಪ್ರಕಾರ, ಇದೇ ಅವಧಿಯಲ್ಲಿ ಶತಾಬ್ದಿಯು ಚೆನ್ನೈನಿಂದ ಮೈಸೂರಿಗೆ (ರೈಲು ಸಂಖ್ಯೆ. 12007) ಎಕ್ಸಿಕ್ಯುಟಿವ್ ಎಸಿ ಚೇರ್ ಕಾರ್‌ ಮತ್ತುಎಸಿ ಚೇರ್ ಕಾರ್‌ ವರ್ಗಗಳಿಗೆ ಕ್ರಮವಾಗಿ ಕೇವಲ 64% ಮತ್ತು 85% ಮತ್ತು ಹಿಂದಿರುಗುವ ದಿಕ್ಕಿನಲ್ಲಿ 75% ಮತ್ತು 98% (ರೈಲು ಸಂಖ್ಯೆ. . 12008). ಬುಕ್ಕಿಂಗ್‌ ಆಗಿದೆ. ವಂದೇ ಭಾರತ್‌ ಬೇಡಿಕೆ ವಿವರಿಸಿದ ಹೆಗ್ಡೆ ಅವರು, "ಹಳಿಗಳಲ್ಲಿ ವಿಮಾನಯಾನದಂತಹ ಪ್ರಯಾಣ ಸೌಕರ್ಯ ಒದಗಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶತಾಬ್ದಿಗಿಂತಲೂ ವೇಗವಾಗಿದೆ. ಮೈಸೂರು, ಬೆಂಗಳೂರು ಮತ್ತು ಚೆನ್ನೈ ನಡುವೆ ಪ್ರಯಾಣಿಸಲು ವ್ಯಾಪಾರಸ್ಥರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಹೆಚ್ಚು ಆದ್ಯತೆ ನೀಡುತ್ತಾರೆ. ಇದು ಮುಂದಿನ ಪೀಳಿಗೆಯ ಆಕಾಂಕ್ಷೆಯೊಂದಿಗೆ ಸಾಮ್ಯತೆ ಹೊಂದಿದೆ. ಅವರು ಕೇವಲ ಪ್ರಯಾಣಿಸಲು ಬಯಸುವುದಿಲ್ಲ, ಆದರೆ ಸ್ಮರಣೀಯ, ಆರಾಮದಾಯಕ ಮತ್ತು ಆನಂದದಾಯಕವಾದ ಅನುಭವ ಪಡೆಯುತ್ತಾರೆ ಎಂದರು.

2025-26 ಸಾಲಿಗೆ ವಂದೇ ಭಾರತ್‌ ರಫ್ತು

2025-26 ಸಾಲಿಗೆ ವಂದೇ ಭಾರತ್‌ ರಫ್ತು

ವಂದೇ ಭಾರತ್‌ ಬುಧವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 5.50ಕ್ಕೆ ಚೆನ್ನೈನಿಂದ ಹೊರಟು ಬೆಂಗಳೂರಿಗೆ 10.25ಕ್ಕೆ ಬರುತ್ತದೆ. ಇದು 12.30ಕ್ಕೆ ಮೈಸೂರು ತಲುಪುತ್ತದೆ. ಇದು ಮೈಸೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಟು ಮಧ್ಯಾಹ್ನ 2.55ಕ್ಕೆ ಕೆಎಸ್‌ಆರ್‌ ಬೆಂಗಳೂರು ಮತ್ತು ರಾತ್ರಿ 7.35ಕ್ಕೆ ಚೆನ್ನೈ ತಲುಪುತ್ತದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಜನಪ್ರಿಯತೆ ಪಡೆಯಲಿದೆ. 2025-26 ಸಾಲಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅನ್ನು ಯುರೋಪ್‌ ಮತ್ತು ಅಮೆರಿಕಾ ದೇಶಗಳಿಗೆ ರಫ್ತು ಮಾಡಲು ರೈಲ್ವೆ ಇಲಾಖೆ ತಯಾರಿ ನಡೆಸುತ್ತಿದೆ. ಮುಂದಿನ ಬಜೆಟ್‌ನಲ್ಲಿ ಸುಮಾರು 400 ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲನ್ನು ತಯಾರಿಸಲು ನಿಧಿ ಮೀಸಲಿಡಲಿದೆ ಎನ್ನಲಾಗಿದೆ.

English summary
South India's first Vande Bharat Express train running from Chennai to Mysore via Bangalore, which was launched on November 11, has become very popular in a short time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X