Daily Horoscope June 4: 12 ರಾಶಿಗಳ ದಿನ ಭವಿಷ್ಯ: ಈ ರಾಶಿಯವರ ಜೀವನದಲ್ಲಿ ನಿರೀಕ್ಷಿತ ಬದಲಾವಣೆ, ಹೊಸ ಅವಕಾಶ, ದುಡ್ಡಿನ ಲಾಭ
Daily Horoscope June 4: ಜೂನ್ 4ರ ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಗುರುವಾರದಂದು 12 ರಾಶಿಗಳ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎನ್ನುವ ನಿಖರವಾದ ವಿವರ ತಿಳಿಯಿರಿ.
ಮೇಷ ರಾಶಿ
ಇಂದು ನೀವು ಮಾಡುವ ಪ್ರತಿಯೊಂದು ಪ್ರಯತ್ನವು ಭವಿಷ್ಯದ ಸಾಧನೆಗಳಿಗೆ ಅಡಿಪಾಯ ಹಾಕುತ್ತದೆ. ನಿಮ್ಮ ಗುರಿಯತ್ತ ಗಮನ ಕೇಂದ್ರೀಕೃತವಾಗಿರಲಿ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಬಹಳ ಸಮಯದಿಂದ ಮಾಡಬೇಕು ಅಂದುಕೊಂಡಿರುವ ಕೆಲಸ ಇಂದು ಪೂರ್ಣವಾಗುವುದು.
ವೃಷಭ ರಾಶಿ
ನೀವು ಇಂದು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದ ದೃಷ್ಟಿಯಿಂದ ಮುಖ್ಯವಾಗಿರುತ್ತದೆ. ನೀವು ಮಾಡುವ ಕೆಲಸ ಕಾರ್ಯಗಳಿಗೆ ಮನೆಯವರ ಬೆಂಬಲ ಇರುವುದು. ಮಾತಿನ ಮೇಲೆ ಎಚ್ಚರ ಇರಲಿ. ತಾಳ್ಮೆಯಿಂದ ಮುಂದುವರೆಯಿರಿ. ಗೆಲುವು ನಿಮ್ಮದಾಗುವುದು.

ಮಿಥುನ ರಾಶಿ
ಆತ್ಮವಿಶ್ವಾಸದಿಂದಲೇ ದಿನದ ಆರಂಭವಾಗುವುದು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಂದುವರೆಯಿರಿ. ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಮೇಲಾಧಿಕಾರಿಯಿಂದ ಪ್ರಶಂಸೆ ಸಿಗುವುದು. ಹೊಸ ಆಶಾವಾದ ಮೂಡುವುದು. ಜೀವನಕ್ಕೆ ಹೊಸ ವ್ಯಕ್ತಿಯ ಪ್ರವೇಶವಾಗುವುದು.
ಕರ್ಕಾಟಕ ರಾಶಿ
ಇಂದು ಹೆಚ್ಚು ಭಾವನಾತ್ಮಕವಾಗಿ ಇರುವಿರಿ. ಮಾನಸಿಕ ಒತ್ತಡ ಹೆಚ್ಚಾಗುವುದು. ಕೆಲಸದ ಹೊರೆಯೂ ಅಧಿಕವಾಗಿರುವುದು. ಸಣ್ಣ ಪುಟ್ಟ ವಿಚಾರಗಳಿಗೂ ಕೋಪ ಮಾಡಿಕೊಳ್ಳುವಿರಿ. ತಾಳ್ಮೆಯಿರಲಿ. ಕೋಪದ ಕೈಗೆ ಬುದ್ದಿ ಕೊಡಬೇಡಿ. ಅನಾಹುತ ಸಂಭವಿಸಬಹುದು. ಹಣದ ವಿಚಾರದಲ್ಲಿಯೂ ಎಚ್ಚರ ಇರಲಿ.
ಸಿಂಹ ರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಆಸ್ತಿ ವಿವಾದ ಬಗೆಹರಿಯುವುದು. ಹೊಸ ವಿಚಾರಗಳನ್ನು ಕಲಿಯುವಿರಿ. ಜವಾಬ್ದಾರಿಗಳು ಹೆಚ್ಚಾಗುವುದು. ಕೆಲಸದ ಸ್ಥಳದಲ್ಲಿ ಸಣ್ಣ ಸಮಸ್ಯೆಗಳು ಎದುರಾಗುವುದು.
ಕನ್ಯಾ ರಾಶಿ
ಈ ದಿನ ಚಿಂತನಶೀಲ ನಿರ್ಧಾರ ತೆಗೆದುಕೊಳ್ಳುವಿರಿ. ಆತ್ಮವಿಶ್ವಾಸ ಹೆಚ್ಚುವುದು. ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವುದು.ಮನಸ್ಸಿನ ಮಾತನ್ನು ಆಲಿಸಿ ಮುನ್ನಡೆಯಿರಿ, ಗೆಲುವು ಸಿಗುವುದು. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ಮಾತೇ ನಿಮಗೆ ಮುಳ್ಳಾಗಬಹುದು. ಮಾತನಾಡುವ ಮುನ್ನ ಸರಿಯಾಗಿ ಯೋಚಿಸಿ.
ತುಲಾ ರಾಶಿ
ಬಾಕಿ ಉಳಿದಿರುವ ಕೆಲಸ ಪೂರ್ಣವಾಗುವುದು. ಹಣಕಾಸಿನ ಸ್ಥಿತಿ ಸ್ಥಿರವಾಗಿರುವುದು. ಭವಿಷ್ಯದ ಗುರಿಗಳನ್ನು ಸಂಘಟಿಸುವ ಅಗತ್ಯವಿದೆ. ಸಂಗಾತಿಯ ನೆರವು ಸಿಗುವುದು. ಮಕ್ಕಳಿಂದ ನೆಮ್ಮದಿ ಸಿಗುವುದು.
ವೃಶ್ಚಿಕ ರಾಶಿ
ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವುದರಿಂದ ಆರ್ಥಿಕವಾಗಿ ಕಷ್ಟವೆನಿಸಬಹುದು. ಆದರೆ ಕಷ್ಟದ ಸಮಯಗಳು ಶಾಶ್ವತವಲ್ಲ ಎನ್ನುವುದು ಕೂಡಾ ನೆನಪಿರಲಿ. ಪರಿಹಾರಗಳು ಕೂಡಾ ಜೊತೆಯಲ್ಲಿಯೇ ಬರುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಣಕಾಸಿನ ಸ್ಥಿತಿ ಸ್ಥಿರವಾಗಿರುವುದು.
ಧನು ರಾಶಿ
ಅವಕಾಶಗಳು ಅನಿರೀಕ್ಷಿತವಾಗಿ ಬರಬಹುದು. ಸಂದರ್ಭಗಳು ನಿರೀಕ್ಷೆಗಿಂತ ವೇಗವಾಗಿ ಸುಧಾರಿಸಬಹುದು. ಸಮಯ ಸಂದರ್ಭಗಳು ನಿಮ್ಮ ಪರವಾಗಿ ಇರುವುದು. ಅದೃಷ್ಟ ಹೆಚ್ಚಾಗುವುದು. ಹಣಕಾಸಿನ ಸ್ಥಿತಿ ಸುಧಾರಿಸುವುದು. ನೆಮ್ಮದಿ ಇರುವುದು.
ಮಕರ ರಾಶಿ
ಕಷ್ಟಪಟ್ಟು ಕೆಲಸ ಮಾಡಿದರೆ ಗೆಲುವು ನಿಮ್ಮದಾಗುವುದು. ಗುರಿ ಸಾಧಿಸುವತ್ತ ಗಮನ ಹರಿಸಿ. ಬೇರೆಯವರಿಗೆ ಸಹಾಯ ಮಾಡುವಾಗ ಎಚ್ಚರ ಇರಲಿ. ಸಾಲ ಕೊಟ್ಟ ಹಣ ಮರಳಿ ಬರುವುದು. ಇಂದು ಯಾರಿಗೂ ಸಾಲ ನೀಡಲು ಹೋಗಬೇಡಿ. ನಷ್ಟವನ್ನು ಎದುರಿಸಬೇಕಾದೀತು.
ಕುಂಭ ರಾಶಿ
ಚಿಂತೆ ಕಾಡುವುದು. ಮನಸ್ಸಿನ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಮಾನಸಿಕ ವಿಶ್ರಾಂತಿ ಅಗತ್ಯ. ಸ್ವ-ಆರೈಕೆ ಮತ್ತು ಭಾವನಾತ್ಮಕ ಸಮತೋಲನಕ್ಕೆ ಆದ್ಯತೆ ನೀಡಿದರೆ ಗಮನಾರ್ಹ ವ್ಯತ್ಯಾಸವನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರಲಿದೆ.
ಮೀನ ರಾಶಿ
ಒಂದು ಮಹತ್ವದ ತೀರ್ಮಾನ ತೆಗೆದುಕೊಳ್ಳುವಿರಿ. ಸುತ್ತಲೂ ನಡೆಯುತ್ತಿರುವ ಬದಲಾವಣೆಗಳನ್ನು ಗಮನಿಸಿ. ನಡೆದು ಹೋಗಿದ್ದರ ಬಗ್ಗೆ ಯೋಚಿಸುವ ಬದಲು ಭವಿಷ್ಯದ ಮೇಲೆ ಗಮನ ಹರಿಸಿ. ನೀವು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗಿರುತ್ತದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications