ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್, ಎಚ್‌ಡಿಕೆಯಿಂದಲೂ ಅಚ್ಚರಿಯ ಟ್ವೀಟ್

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ ಶಿವಕುಮಾರ್ ಅವರಿಗೆ ಹಲವು ಗಣ್ಯರು ಶುಭಕೋರಿದ್ದಾರೆ. ಇದರಲ್ಲಿ ನಟ ರಮೇಶ್ ಅರವಿಂದ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಶುಭಕೋರಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ರಮೇಶ್ ಅರವಿಂದ್ ಅವರು, ನಿಮಗೆ ಈಗ ಸಿಕ್ಕಿರುವ ಕರ್ನಾಟಕಕ್ಕಿಂತಲೂ ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ ಎಂದು ಹೇಳಿದ್ದಾರೆ. ರಮೇಶ್ ಅವರ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಅವರು ಹಲವು ಕನಸುಗಳನ್ನು ಹಂಚಿಕೊಂಡಿದ್ದರು. ಆ ಕನಸುಗಳು ನನಸಾಗಲಿ ಎಂದು ಆಶಿಸುತ್ತೇನೆ. ರಾಜನಿಗೆ ಸಮಸ್ಯೆಗಳಿಗೆ ಕೊನೆ ಎನ್ನುವುದೇ ಇಲ್ಲ, ಸಮಸ್ಯೆಗಳು ಬರುತ್ತಲ್ಲೇ ಇರುತ್ತವೆ ಅವುಗಳನ್ನು ಪರಿಹರಿಸುತ್ತಿರಬೇಕು ಎಂದು ಡಿಕೆಶಿ ಅವರು ಈ ಹಿಂದೆ ಹೇಳಿದ್ದರು. ಇತಿಹಾಸ ಮೆಚ್ಚುವಂತಹ ಸರ್ಕಾರವನ್ನು ಡಿ.ಕೆ ಶಿವಕುಮಾರ್ ಅವರು ಕೊಡಲಿ. ಈಗ ಇರುವ ಪೀಳಿಗೆಗೆ ಮಾತ್ರವಲ್ಲ, ಮುಂದಿನ ಪೀಳಿಗೆಯೂ ಸಹ ಡಿ.ಕೆ ಶಿವಕುಮಾರ್ ಹಾಗೂ ಅವರ ಸರ್ಕಾರ ಮಾಡಿರುವ ಸಾಧನೆಗಳ ಬಗ್ಗೆ ಮಾತನಾಡುವಂತಾಗಲಿ. ಎಲ್ಲರೂ ಸೇರಿ ಮಾಡಲಿ ಎಂದು ರಮೇಶ್ ಅರವಿಂದ್ ಅವರು ಶುಭಕೋರಿದ್ದಾರೆ.

Ramesh Aravind

ಡಿ.ಕೆ ಶಿವಕುಮಾರ್ ಅವರ ದೂರದೃಷ್ಟಿ ತುಂಬಾ ಚೆನ್ನಾಗಿದೆ. ನಾನು ಆಡಳಿತ ಚೆನ್ನಾಗಿ ಕೊಡಬೇಕು ಎನ್ನುವುದು ಡಿ.ಕೆ ಶಿವಕುಮಾರ್ ಅವರ ಕನಸು. ನಾನು ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು, ಬೆಂಗಳೂರಿಗೆ ಹೆಚ್ಚು ಜನ ವಲಸೆ ಬರುತ್ತಿದ್ದಾರೆ ಊರುಗಳಲ್ಲಿ ಶಿಕ್ಷಣ ಅಭಿವೃದ್ಧಿ ಆಗಬೇಕು ಎಂದು ಡಿಕೆಶಿ ಹೇಳಿದ್ದರು. ಇದೆಲ್ಲವೂ ಸಹಕಾರವಾಗಬೇಕು ಎನ್ನುವುದೇ ನಮ್ಮ ಕನಸು ಎಂದು ರಮೇಶ್ ಅವರು ಹೇಳಿದ್ದಾರೆ.

ಎಚ್.ಡಿ ಕುಮಾರಸ್ವಾಮಿ ಅಚ್ಚರಿಯ ಟ್ವೀಟ್

ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಸಹ ಶುಭಕೋರಿದ್ದಾರೆ. ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ತಮಗೆ ದೊರೆತಿರುವ ಈ ಅವಕಾಶವನ್ನು ಜನಪರ ಕೆಲಸಗಳಿಗೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಉಪಯೋಗ ಮಾಡಿಕೊಳ್ಳಿ ಎಂದು ಆಶಿಸುತ್ತೇನೆ ಎಂದು ಎಚ್‌.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+