2025ಕ್ಕೆ ಯುರೋಪ್, ಅಮೆರಿಕಾಕ್ಕೂ ವಂದೇ ಭಾರತ್ ಎಕ್ಸ್‌ಪ್ರೆಸ್ ರಫ್ತು
ಬೆಂಗಳೂರು, ನವೆಂಬರ್ 28: ಭಾರತದಲ್ಲಿ ಅಲ್ಪಕಾಲದಲ್ಲೇ ಜನಪ್ರಿಯತೆ ಪಡೆದುಕೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು 2025-26ರ ವೇಳೆಗೆ ಯುರೋಪ್, ದಕ್ಷಿಣ ಅಮೆರಿಕಾ ಮತ್ತು ಪೂರ್ವ ಏಷ್ಯಾದ ಮಾರುಕಟ್ಟೆಗಳಿಗೆ ರಫ್ತು ಮಾಡಲು ರೈಲ್ವೇ ಇಲಾಖೆ ಯೋಜಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2024 ರ ಮೊದಲ ತ್ರೈಮಾಸಿಕದ ವೇಳೆಗೆ ಸ್ಲೀಪರ್ ಕೋಚ್‌ಗಳೊಂದಿಗೆ ಸ್ಥಳೀಯ ರೈಲುಗಳ ಇತ್ತೀಚಿನ ವಂದೇ ಭಾರತ್ ಆವೃತ್ತಿಯು ಕಾರ್ಯನಿರ್ವಹಿಸಲಿದೆ. ಮುಂದಿನ ಕೆಲವು ವರ್ಷಗಳಲ್ಲಿ 75 ವಂದೇ ಭಾರತ್ ರೈಲುಗಳನ್ನು ವಿದೇಶಗಳಿಗೂ ರಫ್ತು ಮಾಡಲು ಸಿದ್ಧವಾಗಲು ರೈಲ್ವೆ ಯೋಜಿಸುತ್ತಿದೆ ಎಂದು ಅವರು ಹೇಳಿದರು.
ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ರೈಲುಗಳನ್ನು ರಫ್ತು ಮಾಡುವ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ನಾವು ಮುಂದಿನ ಮೂರು ವರ್ಷಗಳಲ್ಲಿ 475 ವಂದೇ ಭಾರತ್ ರೈಲುಗಳನ್ನು ತಯಾರಿಸುವ ತಯಾರಿಯಲ್ಲಿದ್ದೇವೆ. ಒಮ್ಮೆ ಅವು ಯಶಸ್ವಿಯಾಗಿ ಓಡಿದರೆ ನಮ್ಮ ಉತ್ಪನ್ನದ ಬಗ್ಗೆ ಜಾಗತಿಕ ಮಾರುಕಟ್ಟೆಗಳಲ್ಲಿ ವಿಶ್ವಾಸ ಮೂಡುತ್ತದೆ. ವಂದೇ ಭಾರತ್ ರೈಲುಗಳು ಕೂಡ ಎಲ್ಲಾ ಅಂತರಾಷ್ಟ್ರೀಯ ಮಾನದಂಡಗಳನ್ನು ಪೂರೈಸುತ್ತವೆ ಎಂದು ಅವರು ಹೇಳಿದರು.

ಸ್ಟ್ಯಾಂಡರ್ಡ್ ಗೇಜ್‌ಗಳಿಗೆ ಉನ್ನತೀಕರಣ
ಈ ರೈಲುಗಳ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಮೂರು ರೈಡರ್ ಇಂಡೆಕ್ಸ್ ಅನ್ನು ಹೊಂದಿವೆ. ಅಂದರೆ ಪ್ರಯಾಣಿಕರಿಗೆ ಯಾವುದೇ ಅಪಘಾತ ಸಂಭವನಿಯತೆ ಮತ್ತು 65 ಡೆಸಿಬಲ್ ಶಬ್ದದ ಮಟ್ಟವು ವಿಮಾನದಲ್ಲಿ ಉತ್ಪತ್ತಿಯಾಗುವ ಧ್ವನಿಗಿಂತ 100 ಪಟ್ಟು ಕಡಿಮೆಯಿರುತ್ತದೆ ಎಂದಿದ್ದಾರೆ. ಪ್ರಸ್ತುತ ವಂದೇ ಭಾರತ್ ರೈಲುಗಳು ಬ್ರಾಡ್ ಗೇಜ್‌ಗೆ ಹೊಂದಿಕೆಯಾಗಿದ್ದರೂ, ಭಾರತೀಯ ರೈಲ್ವೆಯ ಉತ್ಪಾದನಾ ಘಟಕಗಳು ವಿಶ್ವದ ಹಲವು ದೇಶಗಳು ಬಳಸುವ ಸ್ಟ್ಯಾಂಡರ್ಡ್ ಗೇಜ್‌ಗಳಲ್ಲಿ ರೈಲುಗಳನ್ನು ಓಡಿಸಲು ಕಸ್ಟಮೈಸ್ ಮಾಡಲಿವೆ ಎಂದು ಅವರು ಹೇಳಿದರು.

ಗರಿಷ್ಟ 220 ಕಿಲೋಮೀಟರ್ ವೇಗದಲ್ಲಿ ಓಡಾಟ
ವಾಸ್ತವವಾಗಿ ವಿವಿಧ ರೋಲಿಂಗ್ ಸ್ಟಾಕ್‌ಗಳ ಪರೀಕ್ಷೆಗಳು, ಪ್ರಾಯೋಗಿಕ ಪರೀಕ್ಷೆಗಳನ್ನು ಕೈಗೊಳ್ಳಲು ರೈಲ್ವೆ ಇಲಾಖೆ ಜೋಧ್‌ಪುರ ವಿಭಾಗದಲ್ಲಿ (ಜೈಪುರದಿಂದ ಸುಮಾರು 70 ಕಿಮೀ) ಗುಧಾ ಹಾಗೂ ಥಾಣೆ ಮಿತ್ರಿ ನಡುವೆ 59 ಕಿಮೀ ಪರೀಕ್ಷಾ ಮಾರ್ಗವನ್ನು ಮಾಡಲಿದೆ. ಈ ಮಾರ್ಗದಲ್ಲಿ ಗರಿಷ್ಟ 220 ಕಿಲೋಮೀಟರ್ ವೇಗದಲ್ಲಿ ಚಲಿಸುವ ರೈಲುಗಳನ್ನು ಪರೀಕ್ಷಿಸಬಹುದು. ಜನವರಿ 2024ರ ವೇಳೆಗೆ ಟ್ರ್ಯಾಕ್ ಸಿದ್ಧವಾಗಲಿದ್ದು, ರಫ್ತು ಮಾಡಲಾಗುವ ರೈಲುಗಳನ್ನು ನಿರೀಕ್ಷಿತ ದೇಶಗಳ ಗ್ರಾಹಕರಿಗಾಗಿ ಇಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ತಯಾರು
ಸ್ಲೀಪರ್ ಕೋಚ್ ಹೊಂದಿರುವ ವಂದೇ ಭಾರತ್ ರೈಲುಗಳು 2024ರ ಮೊದಲ ತ್ರೈಮಾಸಿಕದ ವೇಳೆಗೆ ಸಿದ್ಧವಾಗಲಿದೆ. ಇದು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ತಯಾರಿಸಲ್ಪಡುತ್ತದೆ. ಈ ರೈಲುಗಳು ದೆಹಲಿ ಹಾಗೂ ಮುಂಬೈ ನಡುವೆ, ದೆಹಲಿ ಮತ್ತು ಹೌರಾ ನಡುವೆ ಹಾಗೂ ಇತರ ಪ್ರಮುಖ ಮಾರ್ಗಗಳಲ್ಲಿ ಈಗಾಗಲೇ ಚಲಿಸುತ್ತಿರುವ ರಾಜಧಾನಿ ಮತ್ತು ದುರೊಂತೋ ರೈಲುಗಳನ್ನು ಬದಲಾಯಿಸಬೇಕೆ ಅಥವಾ ಅದರೊಂದಿಗೆ ಇವನ್ನೂ ಓಡಿಸಬೇಕೆ ಎಂಬುದರ ಕುರಿತು ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಅವರು ಹೇಳಿದರು.

ಮೋಟರ್‌ಬೈಕ್‌ನಂತೆ ಹೆಚ್ಚಿನ ವೇಗ
ಮತ್ತೊಂದು ಬೆಳವಣಿಗೆಯಲ್ಲಿ 2025-26ರ ವೇಳೆಗೆ ಭಾರತದಲ್ಲಿ ಮೊದಲ ಟಿಲ್ಟಿಂಗ್ ರೈಲುಗಳನ್ನು ಓಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು 100 ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುತ್ತದೆ. ಈ ರೈಲುಗಳು ಅಂಕುಡೊಂಕಾದ ಮಾರ್ಗದಲ್ಲೂ ಮೋಟರ್‌ಬೈಕ್‌ನಂತೆ ಹೆಚ್ಚಿನ ವೇಗದಲ್ಲಿ ವಕ್ರಾಕೃತಿಗಳನ್ನು ಪಡೆದುಕೊಂಡು ಚಲಿಸಲು ಅನುವು ಮಾಡಿಕೊಡುತ್ತದೆ. 2025 ರ ವೇಳೆಗೆ ತಯಾರಿಸಲಾಗುವ 400 ವಂದೇ ಭಾರತ್ ರೈಲುಗಳಲ್ಲಿ 100 ಈ ತಂತ್ರಜ್ಞಾನವನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.












Click it and Unblock the Notifications