• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್‌ಬಿಐ

|
Google Oneindia Kannada News

ಮುಂಬೈ, ಮೇ 27: ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಆದಂತೆ ಆರ್‌ಬಿಐನಿಂದ ಡಿಜಿಟಲ್ ಕರೆನ್ಸಿ (CBDC- Central Bank Digital Currency) ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಡಿಜಿಟಲ್ ಕರೆನ್ಸಿಯ ಭವಿಷ್ಯವೇನು, ಅದರ ಸಾಧಕ ಬಾಧಕಗಳೇನು ಎಂಬುದು ಇನ್ನೂ ನಿಖರವಾಗಿ ಗೊತ್ತಿಲ್ಲದೇ ಇರುವುದರಿಂದ ಎಚ್ಚರಿಕೆಯಿಂದ ಆರ್‌ಬಿಐ ಹೆಜ್ಜೆ ಇಡಲಿದೆ ಎಂಬ ವಿಚಾರ ತಿಳಿದುಬಂದಿದೆ. ಮೂಲಗಳ ಪ್ರಕಾರ, ಡಿಜಿಟಲ್ ಕರೆನ್ಸಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಚಾಲನೆಗೆ ಕಾನೂನು ಚೌಕಟ್ಟು (Legal Framework) ಒದಗಿಸಲು ಅನುವಾಗುವಂತೆ ಹಣಕಾಸು ಮಸೂದೆಗೆ ರೂಪಿಸಲಾಗಿದೆ. 1934ರ ಆರ್‌ಬಿಐ ಕಾಯ್ದೆಗೆ ಸೂಕ್ತ ತಿದ್ದುಪಡಿ ಕೂಡ ಮಾಡಿ ಅದನ್ನು 2022ರ ಹಣಕಾಸು ಮಸೂದೆಗಯಲ್ಲಿ ಒಳಗೊಳ್ಳಲಾಗಿದೆ. ಈಗ ಈ ಮಸೂದೆಗೆ ಅಂಗೀಕಾರ ಸಿಕ್ಕಿದ್ದು, ಅದನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ ಸಿಬಿಡಿಸಿಯನ್ನು ಕಾನೂನಿನ ಚೌಕಟ್ಟಿನೊಳಗೆಯೇ ಬಿಡುಗಡೆ ಮಾಡಬಹುದಾಗಿದೆ.

ಬಿಪಿಸಿಎಲ್ ಮಾರಾಟ ಪ್ರಯತ್ನ ವಿಫಲ; ಸರಕಾರದ ಮುಂದಿನ ಆಯ್ಕೆ?ಬಿಪಿಸಿಎಲ್ ಮಾರಾಟ ಪ್ರಯತ್ನ ವಿಫಲ; ಸರಕಾರದ ಮುಂದಿನ ಆಯ್ಕೆ?

"ಭಾರತದಲ್ಲಿ ಡಿಜಿಟಲ್ ಕರೆನ್ಸಿ ತರಲು ರಿಸರ್ವ್ ಬ್ಯಾಂಕ್ ನಿರತವಾಗಿದೆ. ಹಣಕಾಸು ನೀತಿಯ ಉದ್ದೇಶ, ಹಣಕಾಸು ಸ್ಥಿರತೆ ಮತ್ತು ಕರೆನ್ಸಿ ಹಾಗು ಪಾವತಿ ವ್ಯವಸ್ಥೆಯ ಸಮರ್ಪಕ ಕಾರ್ಯಾಚರಣೆಗೆ ಹೊಂದಿಕೆಯಾಗುವಂತೆ ಸಿಬಿಡಿಸಿಯ ಸ್ವರೂಪ ಇರಬೇಕಾಗುತ್ತದೆ" ಎಂದು ಆರ್‌ಬಿಐ ಶುಕ್ರವಾರ ಬಿಡುಗಡೆ ಮಾಡಿದ ತನ್ನ 2021-22ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಸಾಧಕ ಬಾಧಕಗಳು:
ಭಾರತೀಯ ಡಿಜಿಟಲ್ ಕರೆನ್ಸಿಯನ್ನು ತರುವಲ್ಲಿನ ಸಾಧಕ ಮತ್ತು ಬಾಧಕಗಳೇನು ಎಂಬುದರತ್ತ ಆರ್‌ಬಿಐ ಗಮನ ನೆಟ್ಟಿದೆ. ಹಂತ ಹಂತವಾಗಿ ಪರೀಕ್ಷಿಸಿ, ಪ್ರತೀ ಹಂತದಲ್ಲೂ ಸಾಧಕ ಬಾಧಕಗಳನ್ನು ಅವಲೋಕಿಸಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಲು ಆರ್‌ಬಿಐ ನಿರ್ಧರಿಸಿದೆ.

ಡಿಜಿಟಲ್ ಕರೆನ್ಸಿಯನ್ನು ವಾಸ್ತವವಾಗಿ ಆಚರಣೆಗೆ ತರಬಹುದಾ, ತಂದರೆ ಅದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿರುತ್ತದೆ, ಹೆಚ್ಚಿನ ತೊಂದರೆ ಆಗದ ರೀತಿಯಲ್ಲಿ ಡಿಜಿಟಲ್ ಕರೆನ್ಸಿಯನ್ನು ಹೇಗೆ ಜಾರಿಗೆ ತರಬಹುದು ಎಂಬಿತ್ಯಾದಿ ಅಂಶಗಳ ಬಗ್ಗೆ ಆರ್‌ಬಿಐ ಗಮನ ನೆಟ್ಟಿದೆ.

ಫೆಬ್ರವರಿ 1ರಂದು ಬಜೆಟ್‌ನಲ್ಲಿ ಡಿಜಿಟಲ್ ಕರೆನ್ಸಿ ಪ್ರಸ್ತಾವ ಆಯಿತಾದರೂ ನಂತರ ನಡೆದ ಆರ್‌ಬಿಐ ಸುದ್ದಿಗೋಷ್ಠಿಯಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಮಾತನಾಡಿ, ಡಿಜಿಟಲ್ ಕರೆನ್ಸಿಯನ್ನು ಆತುರಾತುರವಾಗಿ ಜಾರಿಗೆ ತರಲಾಗದು. ಎಲ್ಲಾ ದೃಷ್ಟಿಯಿಂದಲೂ ಎಲ್ಲಾ ಅಂಶಗಳನ್ನೂ ಅವಲೋಕಿಸಿದ ಬಳಿಕವಷ್ಟೇ ಅದನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

RBI digital Currency different from Bitcoin type cryptocurrencies

ಬಿಟ್‌ಕಾಯಿನ್ ಇತ್ಯಾದಿಯಂತೆ ಅಲ್ಲ:
"ಸಿಬಿಡಿಸಿ ಎಂಬುದು ಡಿಜಿಟಲ್ ಕರೆನ್ಸಿಯಾದರೂ ಈಗ ಎಲ್ಲೆಡೆ ಇರುವ ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಯೊಂದಿಗೆ ಇದನ್ನು ಹೋಲಿಸಲು ಸಾಧ್ಯವಿಲ್ಲ" ಎಂಬುದು ಆರ್‌ಬಿಐನ ವಾದ. ಈಗ ಇರುವ ರೂಪಾಯಿ ಕರೆನ್ಸಿಯ ಡಿಜಿಟಲ್ ರೂಪವೇ ಸಿಬಿಡಿಸಿ ಆಗಿರಲಿದೆ. ಎರಡನ್ನೂ ಪರಸ್ಪರ ಅದಲುಬದಲು ಮಾಡಿಕೊಳ್ಳಬಹುದು. ಆದರೂ ಹಲವು ಗೊಂದಲಗಳು ಆರ್‌ಬಿಐನ ಪ್ರಸ್ತಾವಿತ ಡಿಜಿಟಲ್ ಕರೆನ್ಸಿಯ ಬಗ್ಗೆ ಇದ್ದು, ಮುಂದಿನ ದಿನಗಳಲ್ಲಿ ಒಂದು ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ.

65 ಸಾವಿರ ಕೋಟಿ ಬಂಡವಾಳ ಹೂಡಲು ಹಲವು ಕಂಪನಿಗಳ ಆಸಕ್ತಿ: ಸಿಎಂ ಬೊಮ್ಮಾಯಿ65 ಸಾವಿರ ಕೋಟಿ ಬಂಡವಾಳ ಹೂಡಲು ಹಲವು ಕಂಪನಿಗಳ ಆಸಕ್ತಿ: ಸಿಎಂ ಬೊಮ್ಮಾಯಿ

ಬೆಂಗಳೂರಿನಲ್ಲಿ ಇನೊವೇಶನ್ ಹಬ್:
ಹೊಸತನದ ಪ್ರಯೋಗ ಮಾಡಲೆಂದು ಆರ್‌ಬಿಐ ಸಂಸ್ಥೆ ಬೆಂಗಳೂರಿನಲ್ಲಿ ಇನೋವೇಶನ್ ಹಬ್ ಸ್ಥಾಪಿಸಿದೆ. ಈ ಇನ್ನೋವೇಶನ್ ಹಬ್‌ನಲ್ಲಿ ಸ್ವತಂತ್ರ ಮಂಡಳಿಯೊಂದು ಇರಲಿದೆ. ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ಪರಿಣಿತರು ಮತ್ತು ಗಣ್ಯರು ಈ ಮಂಡಳಿಯ ಸದಸ್ಯರಾಗಿರಲಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
RBI said that it is looking at the pros and cons of introducing a virtual currency in the country. It will adopt a graded approach for launching digital currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X