ಚೊಂಬನ್ನು ಅರಗಿಸಿಕೊಳ್ಳಲಾಗದೇ ಬಿಜೆಪಿ ಪಿಕ್‌ಪಾಕೆಟ್ ಜಾಹೀರಾತು- ಡಿಕೆಶಿ ವಾಗ್ದಾಳಿ
ಬೆಂಗಳೂರು ಏಪ್ರಿಲ್ 23: ಚೊಂಬನ್ನು ಅರಗಿಸಿಕೊಳ್ಳಲಾಗದೇ ಬಿಜೆಪಿ ಪಿಕ್‌ಪಾಕೆಟ್ ಜಾಹೀರಾತು ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿದಾಳಿ ಮಾಡಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಜಾಹೀರಾತಿನ ವಿರುದ್ಧ ವಾಗ್ದಾಳಿ ಮಾಡಿದರು. ಚೊಂಬು ಜಾಹೀರಾತು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ವಿರುದ್ಧ ಜಾಹೀರಾತು ನೀಡಿದ್ದಾರೆ. ತಾವು ಮಾಡಿದ ಪಿಕ್‌ಪಾಕೆಟ್ ಅನ್ನು ನಮ್ಮ ಮೇಲೆ ಹಾಕ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ತಮಿಳುನಾಡಿನ ಸಂಸದ, ವಿಸಿಕೆ ಪಕ್ಷದ ಅಧ್ಯಕ್ಷ ಅತುಲ್ ತಿರುಮಲವರನ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ತಮಿಳುನಾಡಿನ ವಿಸಿಕೆ- ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದಿಂದ ಕಾಂಗ್ರೆಸ್ ಗೆ ಬೆಂಬಲ ದೊರೆತಿದೆ. ಕರ್ನಾಟಕ ಹಲವು ಕ್ಷೇತ್ರದಲ್ಲಿ ಸ್ವರ್ಧೆ ಮಾಡಿದ್ದ ವಿಸಿಕೆ ಪಕ್ಷದ ಅಭ್ಯರ್ಥಿಗಳಿಂದ ನಿವೃತ್ತಿ ಘೋಷಣೆ ಮಾಡಲಾಗಿದೆ. ಬರ ಪರಿಹಾರ ನೀಡುವುದಾಗಿ ಕೇಂದ್ರ ಹೇಳಿದೆ, ನಮಗೆ ಪರಿಹಾರ ಸಿಗುತ್ತೆ. ನಮಗೆ ನ್ಯಾಯ ಸಿಗುತ್ತೆ. ಸಾಂಕೇತಿಕವಾಗಿ ಹೋರಾಟ ಪ್ರಾರಂಭಿಸಿದ್ದೇವೆ ಎಂದರು.
ಇಂದು ಪತ್ರಿಕಾ ಜಾಹೀರಾತಿನಲ್ಲಿ ಬಿಜೆಪಿ ಮತ್ತೆ ಕಾಂಗ್ರೆಸ್ 'ಚೊಂಬು' ಜಾಹೀರಾತಿನ ವಿರುದ್ಧ ಮತ್ತೊಂದು ಜಾಹೀರಾತನ್ನು ನೀಡಿದೆ. ಜಾಹೀರಾತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡ ಬಿಜೆಪಿ 'ಕೊಟ್ಟಿದ್ದಕ್ಕಿಂತ ದೋಚಿದ್ದೇ ಜಾಸ್ತಿ ಕಾಂಗ್ರೆಸ್ ಡೇಂಜರ್' ಎಂದಿದೆ. ಹಾಗಾದರೆ ಇಂದು ಬಿಜೆಪಿ ನೀಡಿದ ಜಾಹೀರಾತಿನಲ್ಲಿ ಏನಿದೆ?
''ಕೊಟ್ಟಿದ್ದಕ್ಕಿಂತ ದೋಚಿದ್ದೇ ಜಾಸ್ತಿ
ಕಾಂಗ್ರೆಸ್ ಡೇಂಜರ್
*ವಿದ್ಯುತ್ ದರ ಹೆಚ್ಚಳ
*ಆಸ್ತಿ ತೆರಿಗೆ ದುಪ್ಪಟ್ಟು
*ವಿವಿಧ ಕಂದಾಯ ಪ್ರಮಾಣಪತ್ತೆ 100 ಪಟ್ಟು ಹೆಚ್ಚಳ
* ಕೃಷಿ ಸಮ್ಮಾನ್ ನಿಧಿ ವಾರ್ಷಿಕ 4000ಕಡಿತ
*ಹಾಲಿನ ದರ ಏರಿಕೆ
*ರೈತ ವಿದ್ಯಾನಿಧಿ ಸ್ಥಗಿತ
*ಮದ್ಯ ಅಬಕಾರಿ ದುಬಾರಿ
*ಭಾಗ್ಯಲಕ್ಷ್ಮಿ ಯೋಜನೆ ರದ್ದು
*ಸ್ಟ್ಯಾಂಪ್ ಡ್ಯೂಟಿ ಗಗನಕ್ಕೆ
* ಮಹಿಳಾ ಸ್ವಸಹಾಯ ಸಂಘಕ್ಕೆ ನೀಡುತ್ತಿದ್ದ ಐದು ಲಕ್ಷ ರದ್ದು
* ರೈತರ ಪಂಪ್ ಸೆಟ್‌ಗಳ ಸಂಪರ್ಕ ಶುಲ್ಕ 1.5 ಲಕ್ಷಕ್ಕೆ ಏರಿಕೆ
ರಾಜ್ಯದ ಜಖಾನೆ ಖಾಲಿ
ಅಭಿವೃದ್ಧಿಗೆ ತಿಲಾಂಜಲಿ
ಪ್ರತಿ ತಿಂಗಳು ನಿಮ್ಮನ್ನು ದೋಚುತ್ತಿರುವ ಕಾಂಗ್ರೆಸ್ ತಿರಸ್ಕರಿಸಿ
ಕಮಲದ ಬಟನ್ ಒತ್ತಿ ಬಿಜೆಪಿಯನ್ನು ಗೆಲ್ಲಿಸಿ'' ಎಂದು ಬಿಜೆಪಿ ಜಾಹೀರಾತು ನೀಡಿದೆ.
ಬಿಜೆಪಿ ಜಾಹೀರಾತು vs ಕಾಂಗ್ರೆಸ್ ಜಾಹೀರಾತು:-
ಕೆಲ ದಿನಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಜಾಹೀರಾತು ದಾಳಿಗಿಳಿದಿವೆ. ಇದನ್ನು ಕಾಂಗ್ರೆಸ್ ಮೊದಲು ಆರಂಭಿಸಿತ್ತು. ಕಳೆದ ಶುಕ್ರವಾರ ಕಾಂಗ್ರೆಸ್ ಬಿಜೆಪಿ ವಿರುದ್ಧ ಜಾಹೀರಾತು ನೀಡುವ ಮೂಲಕ ಕಮಲವನ್ನು ಕೆಣಕಿತ್ತು. 'ಚೊಂಬು' ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್ ಬಿಜೆಪಿ ವಿರುದ್ಧ ನೇರದಾಳಿ ಆರಂಭಿಸಿತು. ಇದಕ್ಕೆ ಸಾಕಷ್ಟು ಕಮಲ ದಳಪತಿಗಳು ತಿರುಗೇಟು ನೀಡಿದರು.
ಆದರೆ ಕಾಂಗ್ರೆಸ್ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಭಾನುವಾರವೂ ಬಿಜೆಪಿ ವಿರುದ್ಧ ಜಾಹೀರಾತನ್ನು ಪ್ರಕಟಿಸಿದೆ. ಇದರಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ತೆರಿಗೆ ಹಣ ವಂಚನೆ ಮಾಡಿದೆ. ಚುನಾವಣೆಗೂ ಮುನ್ನ ನೀಡಿದ ಭರವಸೆಗಳಾದ ನಿರುದ್ಯೋಗ ಸಮಸ್ಯೆ, ರೈತರ ಖಾತೆಗೆ ಹಣ ಜಮಾವಣೆ ಆಗಿಲ್ಲ. ಈ ಮೂಲಕ ಮೋದಿ ಸರ್ಕಾರ ಅನ್ಯಾಯ ಮಾಡಿ 'ಚೊಂಬು' ನೀಡಿದೆ ಎಂದು ಜಾಹೀರಾತಿನಲ್ಲಿ ದಾಳಿ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯಾಗಿ ಸೋಮವಾರ ಬಿಜೆಪಿ ಪತ್ರಿಕೆ ಜಾಹೀರಾತು ನೀಡಿ 'ಡೇಂಜರ್ ಕಾಂಗ್ರೆಸ್' ಎಂದು ಕರೆದಿತ್ತು. ರಾಜ್ಯದಲ್ಲಿ ಆಗುವ ಬಾಂಬ್ ಸ್ಪೋಟಗಳಿಗೆ ಲವ್ ಜಿಹಾದ್ ಗೆ ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಬಿಜೆಪಿ ಜಾಹೀರಾತಿನಲ್ಲಿ ದೂರಿತ್ತು. ಇದರಿಂದ ಪಾರಾಗಲು ಬಿಜೆಪಿಯನ್ನು ಗೆಲ್ಲಿಸಿ ಎಂದು ಮತಯಾಚನೆ ಮಾಡಿತ್ತು.
ಇಂದೂ ಕೂಡ ಬಿಜೆಪಿ ಪತ್ರಿಕಾ ಜಾಹೀರಾತಿನಲ್ಲಿ ಕಾಂಗ್ರೆಸ್ ಅನ್ನು ಪಿಕ್‌ಪಾಕೆಟ್ ಎಂದು ಕರೆದಿದೆ. ಇದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿಗೆ ತಿರುಗೇಟು ನೀಡಿದರು. ಲೋಕಸಭಾ ಚುನಾವಣೆಗೆ ಮತದಾನ ಏಪ್ರಿಲ್ 26ರಂದು ನಡೆಯಲಿದ್ದು, ಈ ಪತ್ರಿಕಾ ಜಾಹೀರಾತು ಫೈಟ್ ಎಲ್ಲಿವರಿಗೆ ಮುಂದುವರೆಯುತ್ತದೆ ಎಂದು ಕಾದು ನೋಡಬೇಕಿದೆ.
-
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಬೆಂಗಳೂರು ನಾಗರಿಕರೇ ಗಮನಿಸಿ; ಪರಿಷ್ಕೃತ ಕರಡು ಮತದಾರರ ಪಟ್ಟಿ- ಅಹವಾಲು, ಆಕ್ಷೇಪಣೆ ಆಹ್ವಾನ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral












Click it and Unblock the Notifications