Video: ರೈಲನ್ನೇ ಕಸದ ಬುಟ್ಟಿಯನ್ನಾಗಿಸಿದ ಮಹಿಳೆ! ವೈರಲ್ ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ
Railways Video Viral: ದೇಶಾದ್ಯಂತ ರೈಲ್ವೆ ಜಾಲ ಹೆಚ್ಚುತ್ತಿದೆ. ನಿತ್ಯ ರೈಲುಗಳಲ್ಲಿ ಪ್ರಯಾಣಿಸುವ ನಾವುಗಳು ಸ್ವಚ್ಛತೆ, ಸಾಮಾಜಿಕ ವರ್ತನೆ ಕುರಿತು ಜಾಗೃತಿ ಹೊಂದಿರಬೇಕಾಗುತ್ತದೆ. ರೈಲಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಮಾತಿಗೆ ಸರಿಹೊಂದುವ ಘಟನೆ ರೈಲಲ್ಲಿ ನಡೆದಿದೆ. ಮಹಿಳೆಯ ತಾನು ಚಲಿಸುತ್ತಿದ್ದ ರೈಲು ಬೋಗಿಯನ್ನು ಡಸ್ಟ್‌ಬಿನ್ ರೀತಿ ಮಾಡಿದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗಿದೆ.
ಎಂಟು ಗಂಟೆಗಳ ಕಾಲ ಸುದೀರ್ಘ ರೈಲು ಪ್ರಯಾಣದ ಅವಧಿಯಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ವಿವಿಧ ತಿಂಡಿ ತಿನಿಸುಗಳ ಪ್ಯಾಕೆಟ್‌ಗಳು ಮತ್ತು ಶೇಂಗಾ ತಿಂದ ಬಳಿಕ ಸಿಪ್ಪೆಗಳನ್ನು ಸೀಟಿನ ಕೆಳಗೆ ಬೇಕಾಬಿಟ್ಟಿಯಾಗಿ ಮಹಿಳೆ ಬಿಸಾಡಿದ್ದಾರೆ. ಸೀಟುಗಳ ಕೆಳಗೆ, ಕಾಲಡಿ ಕಸದ ರಾಶಿ ನಿರ್ಮಾಣವಾಗಿದ್ದು, ಸಾರ್ವಜನಿಕ ಆಸ್ತಿಯನ್ನು ನಾಗರಿಕ ಪ್ರಜ್ಞೆವುಳ್ಳ ಮನುಷ್ಯ ಹೇಗೆ ಬಳಸಿಕೊಳ್ಳುತ್ತಾನೆ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ರೈಲಿನಲ್ಲಿ ಸ್ವಚ್ಛತೆಗೆ ಸರ್ಕಾರ, ರೈಲ್ವೆ ಇಲಾಖೆ ಅಧಿಕಾರಿಗಳನ್ನು ದೂಷಿಸುವವರು ಈ ಮಹಿಳೆಯ ಕೆಲಸವನ್ನೊಮ್ಮೆ ನೋಡಿ ಎಂದು ನೆಟ್ಟಿಗರು ತಿಳಿಸಿದ್ದಾರೆ.

ರೈಲ್ವೆ ಇಲಾಖೆ, ಸಿಬ್ಬಂದಿ ದೂರುವುದು ಬಿಡಿ
ರೈಲ್ವೆ ಬೋಗಿಯಲ್ಲಿ ಸ್ವಚ್ಛತೆಗಾಗಿ ಕಸದ ಡಬ್ಬಿ ಅಳವಡಿಸಲಾಗಿರುತ್ತದೆ. ಆದರೂ, ಕೆಲವು ಪ್ರಯಾಣಿಕರು ಕಸವನ್ನು ಅದರಲ್ಲಿ ಸರಿಯಾಗಿ ವಿಲೇವಾರಿ ಮಾಡದೆ ಸೀಟಿನ ಅಡಿಯಲ್ಲೇ ನೂಕಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಪ್ರಯಾಣ ಮುಗಿದ ತಕ್ಷಣ ಅಲ್ಲಿಂದ ಏನೂ ಅರಿಯದವರಂತೆ ಎದ್ದು ಹೋಗುವ ಇಂತಹ ನಿರ್ಲಕ್ಷ್ಯದ ಪ್ರವೃತ್ತಿ, ತದನಂತರ ಅದೇ ಸೀಟಿನಲ್ಲಿ ಪ್ರಯಾಣಿಸುವ ಇತರ ಸಹ ಪ್ರಯಾಣಿಕರಿಗೆ ತೀವ್ರ ಕಿರಿಕಿರಿ ಮತ್ತು ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದೇ ರೀತಿ ಇಲ್ಲೊಬ್ಬ ಮಹಿಳೆ ಮಾಡಿದ್ದಾರೆ.
ಶೇಂಗಾ ಇನ್ನಿತರ ತಿನಿಸುಗಗಳನ್ನು ತಿಂದು ಸಿಪ್ಪೆಯನ್ನು ಸೀಟಿನ ಕೆಳಗೆ ಹಾಕಿದ್ದಾರೆ. ಸಾಲದೆಂಬಂತೆ ನೀರಿನ ಬಾಟಲಿಯಿಂದ ಕೂತ ಸ್ಥಳದಲ್ಲೇ ಕೈ ತೊಳೆದುಕೊಳ್ಳುವ ದೃಶ್ಯದ ವಿಡಿಯೋ ವೈರಲ್ ಆಗಿದೆ. ಇದರಿಂದಲೇ ರೈಲುಗಳಲ್ಲಿ ಸ್ವಚ್ಛತೆ ಕುರಿತು ಸಾಕಷ್ಟು ಚರ್ಚೆ ಶುರುವಾಗಿದೆ. ನೆಟ್ಟಿಗರು ರೈಲ್ವೆ ಇಲಾಖೆ, ಸ್ವಚ್ಛತಾ ಸಿಬ್ಬಂದಿ ದೂರುವ ಮೊದಲು ಜನಸಾಮಾನ್ಯರು ತಮ್ಮ ಜವಾಬ್ದಾರಿ ಮೆರೆಯಬೇಕು. ಈ ಮಹಿಳೆಯ ವರ್ತನೆ ಸರಿಯಲ್ಲ ಎಂದು ಖಂಡಿಸಿದ್ದಾರೆ. ರೈಲು ಯಾರದ್ದೋ ವೈಯಕ್ತಿಕ ಕೊಠಡಿಯಲ್ಲ, ನಿಮ್ಮ ಮನೆಯಲ್ಲ. ಸಾರ್ವಜನಿಕ ಆಸ್ತಿ ಬಳಸುವಾಗ ಜವಾಬ್ದಾರಿ ವರ್ತನೆ ತೋರಬೇಕೆಂದು ನೆಟ್ಟಿಗರು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿನ ನಮ್ಮ ವರ್ತನೆ, ಸಾಂಸ್ಕೃತಿಕ ಹಿನ್ನೆಲೆ, ನಾಗರಿಕ ಪ್ರಜ್ಞೆ ಮತ್ತು ಸಮಾಜದ ಇತರರ ಮೇಲಿನ ಗೌರವವನ್ನು ನೇರವಾಗಿ ಪ್ರತಿಬಿಂಬಿಸುತ್ತದೆ. ಸದರಿ ರೈಲಿನಲ್ಲಿ ಮಹಿಳೆಯು ಬೋಗಿಗಳಲ್ಲಿ ಅತ್ಯಂತ ಸುಲಭವಾಗಿ ಕಣ್ಣಿಗೆ ಸಿಗುವಂತೆ ಕಸದ ಡಬ್ಬಿಗಳು ಇದ್ದಾಗಲೂ ಕುರುಡುತನ ಪ್ರದರ್ಶಿಸಿ ಕಸ ಬಿಸಾಡಿದ್ದಾರೆ. ಇದು ಬೇಜವಾಬ್ದಾರಿ ವರ್ತನೆ ಎಂದು ಸಾರ್ವಜನಿಕರು ದೂರಿದ್ದಾರೆ.
ರೈಲಿನ ಒಳಗೆ ಕಸ ಚೆಲ್ಲುವ ಜನರಿಗೆ ಭಾರೀ ಪ್ರಮಾಣದ ದಂಡ ವಿಧಿಸಬೇಕೇ ಎಂಬ ಚರ್ಚೆ ಈಗ ಜೋರಾಗಿದೆ. ಕಠಿಣ ದಂಡದಿಂದಲೇ ಇದೆಲ್ಲ ನಿಯಂತ್ರಣ ಸಾಧ್ಯತೆ. ಭವಿಷ್ಯದಲ್ಲಿ ಇಂತಹ ತಪ್ಪು ವರ್ತನೆಗಳು ಮರುಕಳಿಸದಂತೆ ತಡೆಯಲು ಇತರರಿಗೆ ಎಚ್ಚರಿಕೆಯ ಪಾಠವಾಗಬಹುದು. ಸ್ವಚ್ಛ ಭಾರತ ಮತ್ತು ಸ್ವಚ್ಛ ರೈಲು ಪ್ರಯಾಣದ ಕನಸು ನಮ್ಮ ವೈಯಕ್ತಿಕ ಬದಲಾವಣೆಯಿಂದಲೇ ಆರಂಭವಾಗಬೇಕಿದೆ ಎಂದು ಕೆಲವರು ಒತ್ತಾಯಿಸಿದ್ದಾರೆ.
बड़ी बुआ बन के जा रही है
— Rahul Singh Parihar🇮🇳 (@RAHULPARIHAR11) June 28, 2026
अभी इनसे झाड़ू लगाने का बोलो तो कमर दर्द शुरू हो जाएगा
सिविक सेंस सिखाना बहुत जरूरी है देश में लोगों को
वरना जानवरों वाला जीवन ही जीते रहेंगे pic.twitter.com/DpPTsWvhC3
ಪ್ರಯಾಣಿಕರಲ್ಲಿ ಸ್ವಯಂ ಜಾಗೃತಿ ಮುಖ್ಯ
ಸಾರ್ವಜನಿಕ ಸಾರಿಗೆ ಬಳಲುವ ಪ್ರಯಾಣಿಕರಲ್ಲಿ ಸ್ವಯಂ ಸ್ವಚ್ಛತಾ ಜಾಗೃತಿ ಅಗತ್ಯವಾಗಿರಬೇಕು. ಆದರೆ ವಿಪರ್ಯಾಸವೆಂದರೆ, ಹೋದ ಕಡೆಯಲ್ಲೆಲ್ಲಾ ಕಸದ ರಾಶಿಯನ್ನು ಸೃಷ್ಟಿಸುವ ಪ್ರಯಾಣಿಕರಿಗೇನು ಕಡಿಮೆ ಇಲ್ಲ. ರೈಲ್ವೆ ಇಲಾಖೆ, ಅಧಿಕಾರಿಗಳಿಗೆ ರೈಲುಗಳಲ್ಲಿನ ಸ್ವಚ್ಛತೆ ಬಗ್ಗೆ ಚಿಂತೆ ಇಲ್ಲ ಎಂದು ಅನೇಕರು ದೂರುತ್ತಾರೆ. ಸಾರ್ವಜನಿಕ ಸ್ವಚ್ಛತೆಯು ಕೇವಲ ಸರ್ಕಾರದ ಅಥವಾ ರೈಲ್ವೆ ಸಿಬ್ಬಂದಿಯ ಹೊಣೆಯಲ್ಲ; ಅದು ನಮ್ಮ ವೈಯಕ್ತಿಕ ಜವಾಬ್ದಾರಿಯೂ ಹೌದು. ರೈಲ್ವೆಯ ಸ್ವಚ್ಛತಾ ಕಾರ್ಮಿಕರು ಎಷ್ಟೇ ನಿರಂತರವಾಗಿ ಶ್ರಮಿಸಿದರೂ, ಸ್ವತಃ ಪ್ರಯಾಣಿಕರೇ ಸಹಕರಿಸದಿದ್ದರೆ ರೈಲುಗಳನ್ನು ಎಂದಿಗೂ ಶುಚಿಯಾಗಿ ಇರಿಸಲು ಸಾಧ್ಯವಿಲ್ಲ. ಇದರಂತೆ ಇತರ ಪ್ರಯಾಣಿಕರಿಗೂ ತೊಂದರೆ ಆಗುತ್ತದೆ. ಕಡಿಮೆ ಬೆಲೆ ಮತ್ತು ಉತ್ತಮ ಸೇವೆಯನ್ನು ಪಡೆಯಲು ಅರ್ಹರು. ಹಾಗಾಗಿ ನಮ್ಮ ಪ್ರಯಾಣದ ಸ್ಥಳದಲ್ಲಿ ನಾವು ಸ್ವಚ್ಛತೆಗೆ ಸ್ವಯಂ ಆಗಿ ಆದ್ಯತೆ ನೀಡಬೇಕಿದೆ.













Click it and Unblock the Notifications