ಜೆನ್‌ಜೀಗಿಂತ ಆಲ್ಫಾ ಮಕ್ಕಳು ಫಾಸ್ಟ್‌ - 6ನೇ ವಯಸ್ಸಲ್ಲೇ ಲವ್ ಲೆಟರ್, ನಾವೆಲ್ಲ ಬರೀ ಜನಗಣತಿಗೆ ಹುಟ್ಟಿದ್ದೀವಿ ಎಂದ 90 ಕಿಡ್ಸ್‌

ಏನ್ ಗುರು ಇದು ಜೆನ್‌ಜೀ ಜನರೇಷನೇ ಫಾಸ್ಟ್‌ ಆಗಿದೆ ಅಂದ್ಕೊಂಡ್ರೆ, ಈ ಆಲ್ಫಾ ಜನರೇಷನ್‌ನ ಮಕ್ಕಳು ಅವರಿಗಿಂತಲೂ ಜೋರಾಗಿದ್ದಾರೆ. ಇವರನ್ನೆಲ್ಲ ನೋಡಿದ್ರೆ ನಾವೆಲ್ಲರೂ ಬರೀ ಜನಗಣತಿಗೆ ಹುಟ್ಟಿದ್ದೀವಿ ಅನ್ಸುತ್ತೆ 😂 ಅಂತ ಕಮೆಂಟ್ ಮಾಡ್ತಾ ಇದ್ದಾರೆ. ಇದಕ್ಕೆಲ್ಲ ಕಾರಣವಾಗಿರೋದು ಆರು ವರ್ಷದ ಪುಟ್ಟ ಹುಡುಗಿಗೆ ಅದೇ ವಯಸ್ಸಿನ ಹುಡುಗನಿಂದ ಬಂದಿರುವ ಲವ್ ಲೆಟರ್! ನನ್ನ ಆರು ವರ್ಷದ ಮಗಳಿಗೆ ಮೊದಲ ಲವ್‌ಲೆಟರ್ ಬಂದಿದೆ ಅಂತ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಮುದ್ದಾದ ಮಗುವಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯದ ಹೊನಲನ್ನೇ ಹರಿಸಿದೆ. ಈ ವಿಡಿಯೋಗೆ ಬರುತ್ತಿರುವ ಕಮೆಂಟ್‌ಗಳು ಸಹ ನೆಟ್ಟಿಗರಲ್ಲಿ ಮಂದಹಾಸ ಮೂಡಿಸಿದೆ. ಇಷ್ಟಕ್ಕೂ ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ಈ ಲೇಖನದಲ್ಲಿದೆ.

ಆರು ವರ್ಷದ ಗಂಡು ಮಗು, ಅದೇ ವಯಸ್ಸಿನ ಮಗುವಿಗೆ ಸಣ್ಣ ಪೇಪರ್ ತುಂಡಿನ ಮೇಲೆ "ಐ ಲವ್‌ಯು" ಅಂತ ಬರೆದುಕೊಟ್ಟಿದ್ದಾನೆ. ಹೆಣ್ಣು ಮಗುವಿನ ತಾಯಿ ಇದನ್ನು ಯಾರು ಕೊಟ್ಟರು, ಯಾಕೆ ಕೊಟ್ಟರು ಅಂತ ಕೇಳಿದ್ದಾರೆ. ಅದಕ್ಕೆ ಮಗು ಮುಗ್ದವಾಗಿ ನಾನು ಇಷ್ಟ ಅಂತೆ ಅಂತ ಹೇಳಿದೆ. ಏನಕ್ಕೆ ಇಷ್ಟ ಅಂತೆ ಎನ್ನುವ ಪ್ರಶ್ನೆಗೆ ಗೊತ್ತಿಲ್ಲ ಅಂತ ಉತ್ತರಿಸಿದ್ದಾಳೆ.

ಪೇಪರ್‌ನ ಮತ್ತೊಂದು ಕಡೆ "Mercy" (ಹೆಣ್ಣು ಮಗುವಿನ ಹೆಸರು) ಅಂತ ಬರೆದಿದ್ದಾನೆ. ಅದರಲ್ಲಿ ಸಣ್ಣಮಕ್ಕಳ ಚಿತ್ರವನ್ನ ಎರಡು ಕಡೆ ಬರೆಯಲಾಗಿದೆ. ಇದನ್ನ ಆ ಮಗು ಗಿಫ್ಟ್‌ ಅಂತ ಕೊಟ್ಟಿದ್ದಾನೆ ಅಂತ ಹೆಣ್ಣು ಮಗು ಅವರ ತಾಯಿಯ ಬಳಿ ಹೇಳಿದೆ. ಅವನು ಗುಡ್‌ಬಾಯ್ ಇಲ್ಲ ತೀಟೆ ಮಾಡ್ತಾನ ಎನ್ನುವ ಪ್ರಶ್ನೆಗೆ ಅವರು ಗುಡ್‌ಬಾಯ್ ಕೆಲವೊಂದು ಸಲ ಸ್ವಲ್ಪ ತೀಟೆ ಮಾಡ್ತಾನೆ. ಬಾಕಿ ಟೈಮ್‌ನಲ್ಲಿ ಗುಡ್‌ಬಾಯ್ ಅಂತ ಹೇಳಿರುವುದು ವೈರಲ್ ವಿಡಿಯೋದಲ್ಲಿ ಇದೆ.

Viral Video

ವೈರಲ್ ವಿಡಿಯೋಗೆ ನೆಟ್ಟಿಗರು ಹೇಳಿದ್ದೇನು

ಇನ್ನು ವೈರಲ್ ವಿಡಿಯೋಗೆ ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನ ನೋಡಿ 90 ಕಿಡ್ಸ್‌ ನಾವೆಲ್ಲರೂ ಬರೀ ಜನಗಣತಿಗೆ ಹುಟ್ಟಿದ್ದೀವಿ ಅನ್ಸುತ್ತೆ 😂 ಅಂತ ಕಮೆಂಟ್ ಮಾಡಿದ್ದಾರೆ. ಅಮ್ಮ, ಮಗಳು ಆರು ವರ್ಷ ಆಗಿರೋದಕ್ಕೆ ಶಾಂತರೀತಿಯಿಂದ ವರ್ತಿಸುತ್ತಾ ಇದಾರೆ. ಅದೇ ಹದಿನಾರೂ ವರ್ಷಕ್ಕೆ ಆಗಿದ್ರೇ ರಣಚಂಡಿ ಆಗಿರುತ್ತಿದ್ರು ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಏನ್ ಮೀಟ್ರೊ ಯಕ್ಷಿತ್ (ಗಂಡು ಮಗುವಿನ ಹೆಸರು) ನಿಮ್ಮ ವಯಸ್ಸಲ್ಲಿ, abcd ನೇ ಬರ್ತಿರ್ಲಿಲ್ಲ, ಒಳ್ಳೆ ಕೆಲಸ ಮಾಡಿದಿಯಾ ಕಣೊ ಯಕ್ಷಿತ್, ಮೊದಲೆ ಮದುವೆ ಆಗೋಕೆ ಹೆಣ್ಣು ಸಿಕ್ತಿಲ್ಲ, ಅಡ್ವಾನ್ಸ್ ಬುಕಿಂಗ್, ಸಿಸ್ (ಸಿಸ್ಟರ್) ಮಾತುಕತೆ ಮಾಡಿ ಮದುವೆ ಮಾಡ್ಸಿ, ಮದುವೆಗೆ ಕರೆಯಿರಿ 😂 ಅಂತ ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಯಕ್ಷಿತ್ ನಿನ್ ಪಾದ ಜೆರಾಕ್ಸು ಕೊಡಪ್ಪ, ನಿನ್ ವಯಸ್ಸಲ್ಲಿ ಎಂಟಾಣಿಗೋಸ್ಕರ ಗೊಳೋ ಅಂತಿದ್ದೋ. ನೀನ್ ಏನೋ ಏಜ್‌ಗೆ ಮೀರಿ ಕೈ ಹಾಕಿದಿಯ ಅಂತ ಹೇಳಿದ್ದಾರೆ. ನೋಡಕ್ ಆಗ್ದೆ ನಗಕ್ ಆಗ್ದೆ ಅಳಕಾಗ್ದೆ ಥೂ ನನ್ ಜನ್ಮಕ್ಕಿಷ್ಟು😢😢😢 ಅಂತ ದೇವರಾಜ್ ಅನ್ನೋರು ಕಮೆಂಟ್ ಮಾಡಿದ್ದಾರೆ. ಸಿಂಗಲ್ ಇರೋ ಹುಡುಗಗರಿಗೆ ಸೂರ್ಯವಂಶ ಗಸಗಸೆ ಪಾಯಸ ಕೋಟೆಲ್ಲ ಪಾ ಯಕ್ಷಿತ್ ಅಂತ ಕುಮಾರ್ ಅನ್ನೋರು ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+