Kannada: ಸಚಿವ ಕೃಷ್ಣಬೈರೇಗೌಡರಿಗೆ ಕನ್ನಡಿಗರಿಂದ ಕ್ಲಾಸ್, ನೀವು ಯುಪಿ ಸಚಿವರಲ್ಲ ಅಂದಿದ್ಯಾಕೆ ನೆಟ್ಟಿಗರು

Kannada: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಕನ್ನಡ ಭಾಷೆ ಹಾಗೂ ಪದ ಬಳಕೆಯಲ್ಲಿ ಆಗಿರುವ ಲೋಪದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ತಮಿಳು ಭಾಷಿಕರಿಗೆ ಇರುವ ಭಾಷಾಭಿಮಾನ ಕನ್ನಡಿಗರಿಗೆ ಇಲ್ಲವೇ, ಸಚಿವರೇ ಈ ರೀತಿ ತಪ್ಪು ಮಾಡಿದರೆ ಹೇಗೆ ಎಂದು ಕೆಲವರು ಪ್ರಶ್ನೆ ಮಾಡಿದರೆ. ಕೃಷ್ಣಬೈರೇಗೌಡ ಅವರು ಕರ್ನಾಟಕದ ಸಚಿವರೆ ಹೊರತು, ಉತ್ತರ ಪ್ರದೇಶದ ಸಚಿವರಲ್ಲ ಹಾಗೂ ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಿರ್ವಹಣೆ ಮಾಡುತ್ತಿರುವವರು ಯಾರು ಕನ್ನಡಿಗರೋ ಅಥವಾ ಕನ್ನಡೇತರರೋ ಎಂದು ಇನ್ನೂ ಕೆಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇಷ್ಟಕ್ಕೂ ಸಚಿವ ಕೃಷ್ಣಬೈರೇಗೌಡ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದೇನು, ಇದಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಸಚಿವ ಕೃಷ್ಣಬೈರೇಗೌಡ ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅತ್ಯುತ್ತಮ ರವಾ ಇಡ್ಲಿ! ಅತ್ಯುತ್ತಮ ಕಾಫಿ. ಬಹಳಷ್ಟು ಪ್ರೀತಿಯ ಬೆಂಗಳೂರಿಗರು! ಬೆಂಗಳೂರಿನ ಹೆಮ್ಮೆ - ನಮ್ಮದೇ ಆದ #MTR ಎಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಈ ಟ್ವೀಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವ ಕೃಷ್ಣಬೈರೇಗೌಡ ಅವರೇ ಅದು ರವಾ ಇಡ್ಲಿ ಅಲ್ಲ; ರವೆ ಇಡ್ಲಿ ಅಂತ ಪಾಠ ಮಾಡಿದ್ದಾರೆ.

Kannada

ಎಸ್ ಶ್ಯಾಮ್ ಪ್ರಸಾದ್ ಎನ್ನುವವರು, ಕನ್ನಡ ರಾಜಕಾರಣಿಗಳು "ರವಾ", "ದೋಸೆ", "ವಡಾ" ಮುಂತಾದ ವಲಸೆ ಭಾಷೆಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಕರ್ನಾಟಕದ ಆಹಾರಗಳು ತಮ್ಮದೇ ಆದ ವಿಶಿಷ್ಟ ಹೆಸರುಗಳು ಮತ್ತು ಗುರುತುಗಳನ್ನು ಹೊಂದಿವೆ. ನಮ್ಮ ದೋಸೆಯನ್ನು ಉತ್ತರ ಭಾರತೀಯರು ಡೋಸ್ ಆಗಿ ಪರಿವರ್ತಿಸಿದ್ದಾರೆ. ಆದರೆ ತಮಿಳರು ಹೆಮ್ಮೆಯಿಂದ ದೋಸೈ ಅಂತ ಉಳಿಸಿಕೊಂಡಿದ್ದಾರೆ. ನಾವು ನಮ್ಮದೇ ಆದ ಹೆಸರುಗಳನ್ನು ಬಳಸದಿದ್ದರೆ ಮತ್ತು ಸಂರಕ್ಷಿಸದಿದ್ದರೆ, ಯಾರು ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಇಂಗ್ಲಿಷ್‌ಗೆ ಕನ್ನಡ ಪದಗಳನ್ನು ಬಲವಂತವಾಗಿ ಹೊಂದಿಸುವ ಅಗತ್ಯವೇ ಇಲ್ಲ. ಮೊದಲು ಕನ್ನಡಿಗರು ಶುದ್ಧ ಕನ್ನಡ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಬೆಂಗಳೂರಿನಲ್ಲಿ ಇಂಗ್ಲಿಷ್ ಫಿಲ್ಲರ್ ಪದಗಳಿಲ್ಲದೆ ಕನ್ನಡ ಮಾತನಾಡಲು ಸಾಧ್ಯವಾಗದಿರುವುದೇ ದೊಡ್ಡ ಸಮಸ್ಯೆ ಎಂದು ಕೆಲವು ನೆಟ್ಟಿಗರು ಈ ಪೋಸ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅನೂಪ್ ಶರ್ಮಾ ಎನ್ನುವವರು, ಅದ್ಭುತವಾಗಿದೆ ಬ್ರೋ. ಸರ್ಕಾರದ ಪತ್ರ ವ್ಯವಹಾರದಲ್ಲಿ ಇನ್ನೂ ಖಾತೆ, ಖಾನೇಸುಮಾರಿ, ಪಹಣಿ, ಮುಜರಾಯಿ, ಇನಾಂ, ಬಿನ್‌ಗಳಲ್ಲಿ ಪರ್ಷಿಯನ್ ಮತ್ತು ಉರ್ದು ಹೆಸರುಗಳನ್ನು ಬದಲಾಯಿಸುವ ಕುರಿತು ನೀವು ಪೋಸ್ಟ್ ಮಾಡುವುದನ್ನು ನೋಡಲು ಇಷ್ಟಪಡುತ್ತೇನೆ ಎಂದೂ ಕೆಲವರು ದಿನ ನಿತ್ಯ ಕನ್ನಡೇತರ ಪದಗಳನ್ನು ಸರ್ಕಾರದ ಹಂತದಲ್ಲಿ ಬಳಸಲಾಗುತ್ತಿದೆ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉತ್ತರ ಭಾರತೀಯರಿಗೆ ಕರ್ನಾಟಕದ ಆಹಾರ ಪದಾರ್ಥಗಳನ್ನು ಸರಿಯಾಗಿ ಉಚ್ಚರಣೆ ಮಾಡುವುದು ಅಥವಾ ಬಳಸುವುದನ್ನು ನಾವು ಹೇಳಿಕೊಡಬೇಕು. ಆದರೆ ಕರ್ನಾಟಕದ ಸಚಿವರೇ ಈ ರೀತಿಯ ಪೋಸ್ಟ್‌ ಮಾಡಿದರೆ ಹೇಗೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+