Daily Horoscope: ಎರಡು ರಾಶಿಯವರಿಗೆ ಈ ದಿನ ಶುಭ, ಅಂದುಕೊಂಡ ಕೆಲಸದಲ್ಲಿ ಯಶಸ್ಸು, ಆದರೆ ಇವರು ಎಚ್ಚರಿಕೆಯಿಂದ ಇಡಬೇಕು ಹೆಜ್ಜೆ

Horoscope June 28: ಭಾನುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಭಾನುವಾರ ರಾಹುಕಾಲವು ಸಂಜೆ 4:30 ರಿಂದ ಸಂಜೆ 6:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries):

ಇಂದು ಮೇಷ ರಾಶಿಯವರಿಗೆ ಹೊಸ ಉತ್ಸಾಹದ ದಿನ. ಸಂಜೆ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಯೋಗವಿದೆ. ವಿದ್ಯಾರ್ಥಿಗಳು ತಮ್ಮ ದಿನಚರಿಯಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದಾರೆ. ಹಿರಿಯರಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

Horoscope June 28

ವೃಷಭ ರಾಶಿ (Taurus):

ವೃಷಭ ರಾಶಿಯವರಿಗೆ ಇಂದು ಅನುಕೂಲಕರ ದಿನ. ಹೊಸ ರೀತಿಯಲ್ಲಿ ಕೆಲಸಗಳನ್ನು ಕೈಗೊಳ್ಳಲು ಯೋಜನೆ ರೂಪಿಸುವಿರಿ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿದೆ.

ಮಿಥುನ ರಾಶಿ (Gemini):

ಮಿಥುನ ರಾಶಿಯವರಿಗೆ ಇಂದು ಉತ್ತಮ ದಿನ. ತಾಳ್ಮೆಯಿಂದ ವರ್ತಿಸಿದರೆ ಸಮಸ್ಯೆಗಳು ಶೀಘ್ರವೇ ಬಗೆಹರಿಯಲಿವೆ. ವಿರೋಧಿಗಳು ಅಪಪ್ರಚಾರ ಮಾಡಬಹುದು, ಆದರೆ ಅವುಗಳನ್ನು ಕಡೆಗಣಿಸಿ ಮುನ್ನಡೆಯಿರಿ. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.

ಕಟಕ ರಾಶಿ (Cancer):

ಕಟಕ ರಾಶಿಯವರಿಗೆ ಇಂದು ಅದ್ಭುತ ದಿನ. ಕಚೇರಿಯ ಕೆಲಸದ ನಿಮಿತ್ತ ಅನಿರೀಕ್ಷಿತ ಪ್ರಯಾಣ ಮಾಡಬೇಕಾಗಬಹುದು. ಸಹೋದ್ಯೋಗಿಗಳ ಸಹಕಾರದಿಂದ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಉದ್ಯಮಿಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಲಾಭ ಸಿಗಲಿದೆ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.

ಸಿಂಹ ರಾಶಿ (Leo):

ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನ.ನಿಮ್ಮ ಕಾರ್ಯವೈಖರಿಗೆ ಗೌರವ ದೊರೆಯಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಮಕ್ಕಳಿಂದ ಸಂತೋಷದ ಸುದ್ದಿ ಸಿಗಲಿದೆ. ತಂದೆಯಿಂದ ಹಣಕಾಸಿನ ಸಹಾಯವಾಗುವುದು.

ಕನ್ಯಾ ರಾಶಿ (Virgo):

ಕನ್ಯಾ ರಾಶಿಯವರಿಗೆ ಇಂದು ಸಂತೋಷದ ದಿನ. ಕುಟುಂಬದೊಂದಿಗೆ ಕಾಲ ಕಳೆಯುವಿರಿ. ಆರೋಗ್ಯ ಉತ್ತಮವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳುವಿರಿ. ಆರೋಗ್ಯದ ಬಗ್ಗೆ ಎಚ್ಚರ ಇರಲಿ.

ತುಲಾ ರಾಶಿ (Libra):

ತುಲಾ ರಾಶಿಯವರು ಪ್ರಮುಖ ವಿಷಯಗಳಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಸ್ನೇಹಿತರು ಅಥವಾ ಸಂಬಂಧಿಕರ ಬೆಂಬಲ ಸಿಗಲಿದೆ. ವೈವಾಹಿಕ ಜೀವನ ಸುಖಕರವಾಗಿರುವುದು.

ವೃಶ್ಚಿಕ ರಾಶಿ (Scorpio):

ನಿಮ್ಮ ಕೆಲಸಗಳ ಮೇಲಷ್ಟೇ ಗಮನ ಹರಿಸಿ. ಬೇರೆಯವರ ವಿಚಾರದಲ್ಲಿ ತಲೆ ಹಾಕಬೇಡಿ. ಮಕ್ಕಳ ಕಡೆಯಿಂದ ಸಿಹಿ ಸುದ್ದಿ ಕೇಳಿಬರಲಿದೆ. ವ್ಯಾಪಾರ ಸಂಬಂಧಿತ ಯೋಜನೆಗಳನ್ನು ಅಪರಿಚಿತರ ಮುಂದೆ ಬಹಿರಂಗಪಡಿಸಬೇಡಿ. ಯಾವುದೇ ವಿಚಾರದಲ್ಲಿ ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ.

ಧನು ರಾಶಿ (Sagitarius):

ಕುಟುಂಬ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಇರಲಿ. ವೃತ್ತಿಯಲ್ಲಿರುವವರಿಗೆ ನಿರೀಕ್ಷಿತ ಲಾಭ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಮನೆ ಖರೀದಿಸುವ ಬಗ್ಗೆ ಯೋಚಿಸುವಿರಿ. ಮಾತಿನ ಮೇಲೆ ನಿಯಂತ್ರಣವಿರಲಿ.

ಮಕರ ರಾಶಿ (Capricorn):

ಮಕರ ರಾಶಿಯವರಿಗೆ ಇಂದು ಅನುಕೂಲಕರ ದಿನ. ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವ್ಯಾಪಾರವನ್ನು ವಿಸ್ತರಿಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವಿರಿ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಕುಂಭ ರಾಶಿ (Aquarius):

ಶ್ರಮಕ್ಕೆ ತಕ್ಕ ಪರಿಹಾರ ಸಿಗುವುದು. ತಾಳ್ಮೆಯಿಂದ ಕೆಲಸ ನಿರ್ವಹಿಸಿ. ಯಶಸ್ಸಿನ ಹೊಸ ಹಾದಿಗಳು ತೆರೆದುಕೊಳ್ಳಲಿವೆ. ಕಷ್ಟಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯದಿಂದಲೇ ನಿಮಗೆ ಹೆಸರು ಬರಲಿದೆ. ಅನಿರೀಕ್ಷಿತ ಧನ ಲಾಭದಿಂದ ಸಂತೋಷವಾಗಲಿದೆ.

ಮೀನ ರಾಶಿ (Pisces):

ವ್ಯವಹಾರದಲ್ಲಿ ಅಭಿವೃದ್ಧಿಯಾಗುವುದು. ಸರಿಯಾದ ತಂತ್ರಗಾರಿಕೆಯಿಂದ ಯಶಸ್ಸು ಗಳಿಸುತ್ತೀರಿ. ಗೊಂದಲಗಳು ದೂರವಾಗಲಿವೆ. ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ದೀರ್ಘಕಾಲದ ಸಮಸ್ಯೆಗಳು ಬಗೆಹರಿಯಲಿದ್ದು, ಹಣದ ಹೊಸ ಮೂಲಗಳು ಗೋಚರಿಸಲಿವೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+