ಮಹಾರಾಷ್ಟ್ರ–ಕರ್ನಾಟಕ ಪ್ರಯಾಣಿಕರಿಗೆ ಗುಡ್‌ನ್ಯೂಸ್! ಜಲ್ನಾ–ಯಲಹಂಕ ವಿಶೇಷ ರೈಲುಗಳ ಘೋಷಣೆ

ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕದ ನಡುವೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ದಕ್ಷಿಣ ಮಧ್ಯ ರೈಲ್ವೆ ಸಿಹಿಸುದ್ದಿ ನೀಡಿದೆ. ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ದೂರದ ಪ್ರಯಾಣವನ್ನು ಸರಳಗೊಳಿಸಲು ಜಲ್ನಾ-ಯಲಹಂಕ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಲಾಗಿದೆ. ಈ ರೈಲುಗಳು ಸಿಕಂದರಾಬಾದ್ ಮಾರ್ಗವಾಗಿ ಸಂಚರಿಸಲಿವೆ.

ಬೇಸಿಗೆಯ ರಜಾದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವುದರಿಂದ ರೈಲು ಟಿಕೆಟ್‌ಗಳಿಗಾಗಿ ಸೃಷ್ಟಿಯಾಗುವ 'ವೇಟಿಂಗ್ ಲಿಸ್ಟ್' ಸಮಸ್ಯೆಯನ್ನು ನಿವಾರಿಸಲು ರೈಲ್ವೆ ಇಲಾಖೆಯು ಈ ವಿಶೇಷ ರೈಲುಗಳನ್ನು ಪರಿಚಯಿಸಿದೆ. ಹಬ್ಬ ಹಾಗೂ ರಜೆಯ ದಿನಗಳಲ್ಲಿ ಸಾರ್ವಜನಿಕರು ಯಾವುದೇ ಗೊಂದಲವಿಲ್ಲದೆ ನಿರಾಳವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಡುವುದು ಇದರ ಮೂಲ ಉದ್ದೇಶವಾಗಿದೆ.

Indian Railways
ರೈಲು ಸಂಖ್ಯೆ ಮಾರ್ಗ ಸಂಚರಿಸುವ ದಿನ ಪ್ರಯಾಣದ ದಿನಾಂಕಗಳು ಒಟ್ಟು ಸೇವೆಗಳು
07601 ಜಲ್ನಾ → ಯಲಹಂಕ ಭಾನುವಾರ ಜೂನ್ 28, 2026 – ಜುಲೈ 27, 2026 5
07602 ಯಲಹಂಕ → ಜಲ್ನಾ ಸೋಮವಾರ ಜೂನ್ 29, 2026 – ಜುಲೈ 27, 2026 5

ರೈಲ್ವೆ ಅಲರ್ಟ್: ಭಾನುವಾರದಿಂದ ಜಲ್ನಾ-ಯಲಹಂಕ ಸ್ಪೆಷಲ್ ಟ್ರೈನ್!

ಜಲ್ನಾದಿಂದ ಬೆಂಗಳೂರಿನ ಯಲಹಂಕಕ್ಕೆ ಹೋಗುವವರಿಗಾಗಿ ಜೂನ್ 28 ರಿಂದ ಜುಲೈ 26 ರವರೆಗೆ ಪ್ರತಿ ಭಾನುವಾರ ವಿಶೇಷ ರೈಲು ರೈಲು ಸಂಖ್ಯೆ: 07601 ಸಂಚರಿಸಲಿದೆ. ಭಾನುವಾರ ಸಂಜೆ 7.20 ಕ್ಕೆ ಜಲ್ನಾದಿಂದ ಹೊರಡುವ ಈ ರೈಲು ಸೋಮವಾರ ರಾತ್ರಿ 9.30 ಕ್ಕೆ ಯಲಹಂಕಕ್ಕೆ ಬಂದು ಸೇರಲಿದ್ದು, ಒಟ್ಟು 5 ವಾರಗಳ ಕಾಲ ಈ ಸೌಲಭ್ಯ ಸಿಗಲಿದೆ.

ಬೆಂಗಳೂರು-ಭುವನೇಶ್ವರ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇದೇ ಜೂನ್ 25ರಿಂದ ವಿಶೇಷ ರೈಲು ಸೇವೆ ಆರಂಭ
ಬೆಂಗಳೂರು-ಭುವನೇಶ್ವರ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇದೇ ಜೂನ್ 25ರಿಂದ ವಿಶೇಷ ರೈಲು ಸೇವೆ ಆರಂಭ

ಜೂನ್ 29 ರಿಂದ ಯಲಹಂಕ-ಜಲ್ನಾ ವಿಶೇಷ ರೈಲು ಸಂಚಾರ ಆರಂಭ

ಯಲಹಂಕದಿಂದ ಜಲ್ನಾಕ್ಕೆ ಮರಳಿ ಪ್ರಯಾಣಿಸುವ ಭಕ್ತರು ಹಾಗೂ ಪ್ರಯಾಣಿಕರಿಗಾಗಿ ರೈಲ್ವೆ ಇಲಾಖೆಯು ವಿಶೇಷ ರೈಲು ಸಂಖ್ಯೆ: 07602 ಸೌಲಭ್ಯವನ್ನು ಪ್ರಕಟಿಸಿದೆ. ಈ ವಿಶೇಷ ರೈಲು ಜೂನ್ 29, 2026 ರಿಂದ ಜುಲೈ 27, 2026 ರವರೆಗಿನ ಅವಧಿಯಲ್ಲಿ ಪ್ರತಿ ಸೋಮವಾರ ಸಂಚರಿಸಲಿದೆ. ವೇಳಾಪಟ್ಟಿಯ ಪ್ರಕಾರ, ಯಲಹಂಕದಿಂದ ರಾತ್ರಿ 11.30 ಕ್ಕೆ ಹೊರಡುವ ಈ ರೈಲು ಬುಧವಾರ ಮುಂಜಾನೆ 1.00 ಗಂಟೆಗೆ ಜಲ್ನಾ ನಿಲ್ದಾಣವನ್ನು ತಲುಪಲಿದೆ. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಮಾರ್ಗದಲ್ಲೂ ಒಟ್ಟು 5 ವಿಶೇಷ ಸೇವೆಗಳನ್ನು ಒದಗಿಸಲಾಗುತ್ತಿದೆ.

ಯಾವೆಲ್ಲ ನಿಲ್ದಾಣಗಳಲ್ಲಿ ನಿಲುಗಡೆ?

ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳ ಪ್ರಯಾಣದಲ್ಲಿ ಈ ಕೆಳಗಿನ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲುಗಡೆ (Stoppages) ಹೊಂದಿರಲಿವೆ:

ಕರ್ನಾಟಕ ಮತ್ತು ಆಂಧ್ರ/ತೆಲಂಗಾಣ ಗಡಿ ಭಾಗದ ನಿಲ್ದಾಣಗಳು: ಯಾದಗಿರಿ, ರಾಯಚೂರು, ಮಂತ್ರಾಲಯಂ, ಅದೋನಿ, ಗುಂತಕಲ್, ಗೂಟಿ, ಅನಂತಪುರ, ಧರ್ಮಾವರಂ ಮತ್ತು ಹಿಂದೂಪುರ.

ತೆಲಂಗಾಣದ ಪ್ರಮುಖ ನಿಲ್ದಾಣಗಳು: ಸಿಕಂದರಾಬಾದ್, ಬೇಗಂಪೇಟ್, ಲಿಂಗಂಪಳ್ಳಿ, ವಿಕಾರಾಬಾದ್, ತಂದೂರ್, ಕಾಮಾರೆಡ್ಡಿ, ಮೆಡ್ಚಲ್, ಬೋಲಾರಂ, ನಿಜಾಮಾಬಾದ್ ಮತ್ತು ಬಸರ್.

ಮಹಾರಾಷ್ಟ್ರದ ಪ್ರಮುಖ ನಿಲ್ದಾಣಗಳು: ಪರ್ತೂರ್, ಸೇಲು, ಪರಭಣಿ, ಪೂರ್ಣಾ, ನಾಂದೇಡ್, ಮುದ್ಖೇಡ್ ಮತ್ತು ಧರ್ಮಾಬಾದ್.

'ಗೋಲ್ ಗುಂಬಜ್' ಎಕ್ಸ್‌ಪ್ರೆಸ್‌ಗೆ ಹೊಸ ಮಾರ್ಗ: ಹುಬ್ಬಳ್ಳಿ-ಗದಗ ನಿಲ್ದಾಣಗಳಿಗೆ ಗುಡ್‌ಬೈ, ಪ್ರಯಾಣಿಕರ ಆಕ್ರೋಶ
'ಗೋಲ್ ಗುಂಬಜ್' ಎಕ್ಸ್‌ಪ್ರೆಸ್‌ಗೆ ಹೊಸ ಮಾರ್ಗ: ಹುಬ್ಬಳ್ಳಿ-ಗದಗ ನಿಲ್ದಾಣಗಳಿಗೆ ಗುಡ್‌ಬೈ, ಪ್ರಯಾಣಿಕರ ಆಕ್ರೋಶ

ಕರ್ನಾಟಕ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ

ಕರ್ನಾಟಕದ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುತ್ತಿದ್ದು, ಇದು ಬೆಂಗಳೂರಿನ ಯಲಹಂಕ ಹಾಗೂ ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜನರಿಗೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ನೆರವಾಗಲಿದೆ. ಹಬ್ಬಗಳ ಸೀಸನ್, ಶಾಲಾ-ಕಾಲೇಜು ರಜೆಗಳು ಮತ್ತು ವಾರಾಂತ್ಯದ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಭಾರಿ ರಶ್ ಅನ್ನು ನಿಯಂತ್ರಿಸಲು ಹಾಗೂ ಪ್ರಯಾಣಿಕರಿಗೆ ಒತ್ತಡರಹಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಈ ವಿಶೇಷ ರೈಲುಗಳು ಸಹಕಾರಿಯಾಗಲಿವೆ.

3 ರಾಜ್ಯಗಳ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಿಶೇಷ ರೈಲು ಸಂಚಾರ ಆರಂಭ!

ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಎಸಿ ತ್ರಿ-ಟಿಯರ್, ಸ್ಲೀಪರ್ ಹಾಗೂ ಜನರಲ್ ಬೋಗಿಗಳನ್ನು ಒಳಗೊಂಡ ವಿಶೇಷ ರೈಲು ಸೇವೆಗಳನ್ನು ದಕ್ಷಿಣ ಮಧ್ಯ ರೈಲ್ವೆ ಆರಂಭಿಸಿದೆ. ಕರ್ನಾಟಕ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಪರ್ಕ ಕೊಂಡಿಯನ್ನು ಬಲಪಡಿಸುವ ಉದ್ದೇಶದಿಂದ ಈ ರೈಲುಗಳನ್ನು ಓಡಿಸಲಾಗುತ್ತಿದ್ದು, ಇನ್ಮುಂದೆ ದೂರದ ಪ್ರಯಾಣ ಬೆಳೆಸುವ ಭಕ್ತರು ಹಾಗೂ ಸಾರ್ವಜನಿಕರಿಗೆ ಅತ್ಯಂತ ಸುಲಭ ಮತ್ತು ಸುಗಮ ಪ್ರಯಾಣದ ಸೌಲಭ್ಯ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+