Get Updates
Get notified of breaking news, exclusive insights, and must-see stories!

UPI Payment Limit Rise: ಆರ್‌ಬಿಐನಿಂದ ಯಪಿಐ ಪಾವತಿ ಮಿತಿ ಹೆಚ್ಚಳ, ಮಹತ್ವದ ನಿರ್ಧಾರ

ಬೆಂಗಳೂರು ಡಿಸೆಂಬರ್ 08: ಭಾರತೀಯ ರಿಸರ್ವ್ ಬ್ಯಾಂಕ್ (RBI) ಎರಡು ಕ್ಷೇತ್ರಗಳಿಗೆ ಸಿಮೀತವಾಗಿ ಯುಪಿಐ (UPI) ಪಾವತಿ ಮಿತಿಯನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಶುಕ್ರವಾರ ತಿಳಿಸಿದ್ದಾರೆ.

ಯುಪಿಐ ಮತ್ತು ಇ-ಮ್ಯಾಂಡೇಟ್ ಗಳ ಭಾಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಶೈಕ್ಷಣಿಕ ಮತ್ತು ಆರೋಗ್ಯ ಸೇವೆಗಳಲ್ಲಿ ಯುಪಿಐ ಆಧಾರಿತ ಪಾವತಿ ಮಿತಿಯನ್ನು ಏರಿಕೆ ಮಾಡಿದೆ. ಈ ಮೊದಲು 1 ಲಕ್ಷ ರೂಪಾಯಿ ಇದ್ದ ಮಿತಿಯನ್ನು ಇದೀಗ 05 ಲಕ್ಷ ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ.

RBI Increase UPI Payment Limit Rs 1 to 5 lakhs For Education and Hospital Services: Shaktikanta das

ಆಸ್ಪತ್ರೆ ಸೇರಿದಂತೆ ಮುಂತಾದ ಆರೋಗ್ಯ ರಕ್ಷಣಾ ಘಟಕಗಳಿಗೆ ಮತ್ತು ಶಾಲಾ-ಕಾಲೇಜುಗಳಂತಹ ಶೈಕ್ಷಣಿಕ ಸೇವೆಗಳನ್ನು ಪಡೆಯುವಾಗ ಈ ಗರಿಷ್ಠ ಮಿತಿಯಲ್ಲಿ ಯುಪಿಐ ಮೂಲಕ ಐದು ಲಕ್ಷವರೆಗೆ ಹಣ ಪಾವತಿಗೆ ಅನುಮೋದನೆ ನೀಡಲು ಆರ್‌ಬಿಐ ನಿರ್ಧರಿಸಿದೆ ಎಂದು ಅವರು ಹಣಕಾಸು ನೀತಿ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

ರೂ.1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ

ವಿವಿಧ ವರ್ಗಗಳ ಯುಪಿಐ ವಹಿವಾಟುಗಳ ಮಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುವ ಯುಪಿಐ ವಹಿವಾಟಿನ ಮಿತಿಯನ್ನು ಪ್ರತಿ ವಹಿವಾಟಿಗೆ 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲು ಈಗ ಪ್ರಸ್ತಾಪಿಸಲಾಗಿದೆ. ಇದು ಯುಪಿಐ ಗ್ರಾಹಕರಿಗೆ ಹೆಚ್ಚು ಸಹಾಯ ಮಾಡುತ್ತದೆ.

RBI Increase UPI Payment Limit Rs 1 to 5 lakhs For Education and Hospital Services: Shaktikanta das

ಮರುಪಾವತಿಗಳಿಗೆ RBI ಇ-ಆದೇಶದ ಹೊಸ ನಿಯಮ

ಆರ್‌ಬಿಐ ಇ ಆದೇಶದ ಹೊಸ ನಿಯಮಗಳ ಪ್ರಕಾರ, ಮ್ಯೂಚುವಲ್ ಫಂಡ್‌ಗಳ ಚಂದಾದಾರಿಕೆ, ವಿಮಾ ಪ್ರೀಮಿಯಂ ಚಂದಾದಾರಿಕೆಗಳು ಮತ್ತು ಕ್ರೆಡಿಟ್ ಕಾರ್ಡ್ ಮರುಪಾವತಿಗಳ ಮರುಪಾವತಿ ಮಿತಿ ಈ ಹಿಂದೆ ರೂ 15,000 ಇತ್ತು. ಇದೀಗ ಅದರ ನಿಯಮ ಬದಲಾಯಿತಿ ಮರುಪಾವತಿ ಮಿತಿಯನ್ನ 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಆರ್‌ಬಿಐನ ಇ-ಆದೇಶದಡಿಯಲ್ಲಿ 15,000 ರೂ.ಗಿಂತ ಹೆಚ್ಚು ಮರುಪಾವತಿಯ ವಹಿವಾಟುಗಳಿಗೆ ಪ್ರಸ್ತುತ ಹೆಚ್ಚುವರಿ ಅಂಶದ ಪ್ರಮಾಣೀಕರಣದ (AFA) ಅಗತ್ಯವಿದೆ. ಇದನ್ನು ಪ್ರತಿ ವಹಿವಾಟಿಗೆ ಮಿತಿಯಾಗಿ 1 ಲಕ್ಷ ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಅವರು ವಿವರಿಸಿದ್ದಾರೆ.

ಇನ್ನೂ ವಿತ್ತೀಯ ನೀತಿ ಸಮಿತಿಯು ಸತತ 5 ನೇ ಬಾರಿಗೆ ಪ್ರಮುಖ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+