Vaibhav Sooryavanshi: ಎಬಿ ಡಿವಿಲಿಯರ್ಸ್‌ ದಾಖಲೆ ಉಡೀಸ್.. ವಿಶ್ವದ ನಂಬರ್‌ 1 ಬ್ಯಾಟರ್ ಆದ 15 ವರ್ಷದ ಬಾಲಕ ವೈಭವ್

Vaibhav Sooryavanshi: ಶ್ರೀಲಂಕಾದ ದಂಬುಲ್ಲಾದಲ್ಲಿ ಭಾನುವಾರ (ಜೂನ್ 21) ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವೆ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ನಡೆಯುತ್ತಿದೆ. ಟಾಸ್ ಸೋತ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟ ಆಡಿ ವಿಶ್ವದಾಖಲೆ ಮಾಡಿದ್ದಾರೆ.

ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ ಸಾಧನೆ ಮಾಡಿದ್ದಾರೆ. ದಂಬುಲ್ಲಾದಲ್ಲಿ ನಡೆಯುತ್ತಿರುವ ಶ್ರೀಲಂಕಾ 'ಎ' ತಂಡದ ವಿರುದ್ಧದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ವೈಭವ್ ಅಬ್ಬರದ ಆಟ ಆಡಿದ್ದಾರೆ. ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

Vaibhav Sooryavanshi Creates History 11 Ball Fifty Breaks World Record in List A Cricket today

ಸಿಡಿಲಬ್ಬರದ ಆಟ ಆಡಿದ ವೈಭವ್

ಈ ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ 'ಎ' ತಂಡದ ನಾಯಕ ಸಹನ್ ಅರಚ್ಚಿಗೆ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಆದರೆ, ಅವರ ಈ ಲೆಕ್ಕಾಚಾರವನ್ನು ಭಾರತದ ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ್ ಆರ್ಯ ಸಂಪೂರ್ಣವಾಗಿ ತಲೆಕೆಳಗಾಗಿಸಿದರು. ಇನಿಂಗ್ಸ್‌ನ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ತಂಡಕ್ಕೆ ಅತ್ಯಂತ ಸ್ಫೋಟಕ ಆರಂಭವನ್ನು ಒದಗಿಸಿತು.

ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ವೈಭವ್ ಸೂರ್ಯವಂಶಿ ಲಂಕಾ ಬೌಲರ್‌ಗಳ ದಿಕ್ಕು ತಪ್ಪಿಸಿದರು. ಅವರು ಎದುರಿಸಿದ ಮೊದಲ 11 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್‌ ಹಾಗೂ 5 ಆಕರ್ಷಕ ಬೌಂಡರಿಗಳು ಮೂಡಿಬಂದವು. ಅಂದರೆ ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕವೇ ಅವರು 50 ರನ್ ಕಲೆಹಾಕಿದ್ದು ಈ ಇನಿಂಗ್ಸ್‌ನ ವಿಶೇಷವಾಗಿತ್ತು. ಈ ಮೂಲಕ ಲಿಸ್ಟ್ 'ಎ' ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ.

ವೈಭವ್ ಧೂಳೀಪಟ ಮಾಡಿದ ದಾಖಲೆಗಳು

ಈ ಸ್ಫೋಟಕ ಇನಿಂಗ್ಸ್‌ನೊಂದಿಗೆ ವೈಭವ್ ಸೂರ್ಯವಂಶಿ ಅವರು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕೌಶಲ್ಯ ವೀರರತ್ನೆ ಅವರ ಹೆಸರಲ್ಲಿದ್ದ ಸುದೀರ್ಘ ಅವಧಿಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಕೌಶಲ್ಯ ವೀರರತ್ನೆ ಅವರು 2005ರಲ್ಲಿ ಶ್ರೀಲಂಕಾದ ದೇಶೀಯ ಲಿಸ್ಟ್ 'ಎ' ಪಂದ್ಯವೊಂದರಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದಿದ್ದರು.

ಈಗ ಸರಿಸುಮಾರು ಎರಡು ದಶಕಗಳ ನಂತರ ಭಾರತದ ಯುವ ಬ್ಯಾಟರ್ ವೈಭವ್ ಕೇವಲ 11 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿ ಇತಿಹಾಸದ ಪುಟದಲ್ಲಿ ಸೇರಿಸಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆ ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟರ್ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು.

ಎಬಿ ಡಿವಿಲಿಯರ್ಸ್ ದಾಖಲೆ ಉಡೀಸ್

ಎಬಿ ಡಿವಿಲಿಯರ್ಸ್ ಅವರು 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಇತ್ತೀಚೆಗೆ ಅಂದರೆ 2025ರಲ್ಲಿ ಐರ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್‌ನ ಮ್ಯಾಥ್ಯೂ ಫೋರ್ಡ್ ಕೂಡ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಡಿವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದರು.

ODIನಲ್ಲಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದವರು

* ವೈಭವ್ ಸೂರ್ಯವಂಶಿ (ಭಾರತ): 11 ಎಸೆತ
* ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ): 16 ಎಸೆತ
* ಮ್ಯಾಥ್ಯೂ ಫೋರ್ಡ್ (ವೆಸ್ಟ್ ಇಂಡೀಸ್): 16 ಎಸೆತ
* ಸನತ್ ಜಯಸೂರ್ಯ (ಶ್ರೀಲಂಕಾ): 17 ಎಸೆತ
* ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 17 ಎಸೆತ
* ಕುಸಲ್ ಪೆರೆರಾ (ಶ್ರೀಲಂಕಾ): 17 ಎಸೆತ
* ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್): 17 ಎಸೆತ

ಪ್ರಸ್ತುತ ಭಾರತ 'ಎ', ಶ್ರೀಲಂಕಾ 'ಎ' ಮತ್ತು ಅಫ್ಘಾನಿಸ್ತಾನ್ 'ಎ' ತಂಡಗಳ ನಡುವೆ ನಡೆಯುತ್ತಿರುವ ಈ ಟೂರ್ನಿಯು ಬಹುರಾಷ್ಟ್ರೀಯ ಪಂದ್ಯಾವಳಿಯಾಗಿದೆ. ಈ ಸರಣಿಗಳ ಇತಿಹಾಸದಲ್ಲೂ ಎಬಿಡಿ ಮತ್ತು ಫೋರ್ಡ್ ಅವರ 16 ಎಸೆತಗಳ ದಾಖಲೆಯನ್ನು ಕೂಡ ವೈಭವ್ (11 ಎಸೆತಗಳು) ಇದೀಗ ಉಡೀಸ್ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲೂ ಸಹ ಭಾರತದ ಪರ ಯಾರೂ ಈ ದಾಖಲೆ ಮಾಡಿಲ್ಲ. ಯುವರಾಜ್ ಸಿಂಗ್ 12 ಎಸೆತಗಳಲ್ಲಿ ಈ ದಾಖಲೆ ಮಾಡಿದ್ದರು. ಈ ದಾಖಲೆಯೂ ಉಡೀಸ್ ಆದಂತಾಗಿದೆ. ಯುವ ಆಟಗಾರ ವೈಭಬ್ ಸೂರ್ಯವಂಶಿ ಅವರ ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಇಡೀ ಕ್ರಿಕೆಟ್ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ.

ಟಿ20 ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದವರು

* ದೀಪೇಂದ್ರ ಸಿಂಗ್ ಐರಿ (ನೇಪಾಳ): 9 ಎಸೆತ
* ಯುವರಾಜ್ ಸಿಂಗ್ (ಭಾರತ): 12 ಎಸೆತ
* ಮಿರ್ಜಾ ಅಹ್ಸಾನ್ (ಆಸ್ಟ್ರಿಯಾ): 13 ಎಸೆತ
* ಮುಹಮ್ಮದ್ ಫಹಾದ್ (ಟರ್ಕಿ): 13 ಎಸೆತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+