₹2000 ನೋಟು ಇನ್ನೂ ನಿಮ್ಮ ಬಳಿ ಇದೆಯಾ? ಹಾಗಿದ್ರೆ ಇಲ್ಲದೆ ಬ್ರೇಕಿಂಗ್ ನ್ಯೂಸ್!
₹2000 ನೋಟುಗಳ ಕಥೆ ಇನ್ನು ಮುಗಿದ ಅಧ್ಯಾಯ, ಆರ್‌ಬಿಐ ಈ ಬಗ್ಗೆ ಪ್ರಮುಖ ನಿರ್ಧಾರ ಕೈಗೊಂಡು ₹2000 ನೋಟುಗಳನ್ನು ವಾಪಸ್ ಪಡೆಯಲು ಸೂಚಿಸಿತ್ತು. ಹೀಗಾಗಿ ಈಗಾಗಲೇ ಬಹುತೇಕ ₹2000 ಮುಖಬೆಲೆ ನೋಟುಗಳು ವಾಪಸ್ ಬ್ಯಾಂಕ್ ಬಾಗಿಲು ಬಡಿದಿವೆ. ಹಾಗಾದ್ರೆ ಈವರೆಗೂ ಎಷ್ಟು ನೋಟುಗಳು ವಾಪಸ್ ಬಂದಿವೆ? ಬನ್ನಿ ತಿಳಿಯೋಣ.
ಭಾರತದಲ್ಲಿ ಮತ್ತೊಂದು ವಿಧದ ನೋಟು ಮೂಲೆ ಸೇರಿದೆ ₹2000 ನೋಟು ಇನ್ನೇನು ಇತಿಹಾಸ ಸೇರಲಿದೆ. ₹2000 ನೋಟು ವಿನಿಮಯಕ್ಕೆ ಸಾಕಷ್ಟು ಸಮಯ ನೀಡಿದ್ದ ಆರ್‌ಬಿಐ, ಈ ಬಗ್ಗೆ ಇದೀಗ ಮಹತ್ವದ ಮಾಹಿತಿ ನೀಡಿದೆ. 2016ರಲ್ಲಿ ನೋಟು ಅಮಾನ್ಯೀಕರಣದ ಬಳಿಕ ಸಂಚಲನ ಸೃಷ್ಟಿಯಾಗಿತ್ತು. ಈ ಆದೇಶ ಬಳಿಕ 1000 & 500 ಮುಖಬೆಲೆ ನೋಟು ಮಾಯವಾಗಿದ್ದವು. ಆಗ ಹುಟ್ಟಿಕೊಂಡ ₹2000 ಮುಖಬೆಲೆ ನೋಟು ಕೂಡ ಈಗ ತೆರೆಮರೆಗೆ ಸರಿಯುತ್ತಿದೆ. ಈಗಾಗಲೇ ಭಾಗಶಃ ₹2000 ಮುಖಬೆಲೆಯ ನೋಟುಗಳು ವಾಪಸ್ ಬ್ಯಾಂಕ್‌ಗೆ ಬಂದಿವೆ ಎನ್ನಲಾಗಿದೆ.

2023ರಲ್ಲಿ ನೋಟ್ ವಾಪಸ್!
ಅಂದಹಾಗೆ ಕಳೆದ ವರ್ಷ ಅಂದರೆ, 2023ರ ಮೇ 19 ರಂದು ಆರ್‌ಬಿಐ ಮಹತ್ವದ ಘೋಷಣೆ ಹೊರಡಿಸಿತ್ತು. ಒಟ್ಟು ₹3.56 ಲಕ್ಷ ಕೋಟಿ ಮೌಲ್ಯದ ನೋಟು ಚಲಾವಣೆಯಿಂದ ಹಿಂಪಡೆದು ಬ್ಯಾಂಕ್‌ಗೆ ಸೇರಿಸಿಕೊಳ್ಳುವ ಬಗ್ಗೆ ಆದೇಶ ನೀಡಿತ್ತು. 2023ರ ಮೇ 19ರಂದು ಆರ್‌ಬಿಐ ಘೋಷಣೆ ಮಾಡಿದ್ದ ಪ್ರಕಾರ, 2,000 ರೂಪಾಯಿ ಕರೆನ್ಸಿ ನೋಟು ವಾಪಾಸ್ ಪಡೆಯಲಾಗುತ್ತಿದ್ದು. ಜನ ಕೂಡ ಮುಗಿಬಿದ್ದು ನೋಟನ್ನ ತಂದು, ಬ್ಯಾಂಕ್‌ಗೆ ಜಮೆ ಮಾಡುತ್ತಿದ್ದಾರೆ. ಈವರೆಗೆ ಸಾಕಷ್ಟು ಪ್ರಮಾಣದಲ್ಲಿ 2,000 ರೂಪಾಯಿ ಮುಖಬೆಲೆ ನೋಟುಗಳು ಬ್ಯಾಂಕ್ ಖಜಾನೆ ಸೇರಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಶೇ. 97.69 ನೋಟು ವಾಪಸ್ ಬಂದಿವೆ
₹2 ಸಾವಿರ ಮುಖಬೆಲೆಯ ಒಟ್ಟು ಶೇಕಡಾ 97.69 ರಷ್ಟು ನೋಟು ಬ್ಯಾಂಕ್‌ಗೆ ಮರಳಿ ಬಂದಿವೆ. ಇನ್ನೂ ₹8,202 ಕೋಟಿ ಮೌಲ್ಯದ ನೋಟುಗಳು ಜನರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. 2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡಿರಲಿಲ್ಲ ಆರ್‌ಬಿಐ. ಜನರಿಗೆ ಅನುಕೂಲ ಆಗಲಿ ಎಂದು ಸಾಕಷ್ಟು ಸಮಯವನ್ನು ಆರ್‌ಬಿಐ ನೀಡಿದೆ. ಇದೇ ಕಾರಣಕ್ಕೆ, ಜನರು ಕೂಡ ಸುಲಭವಾಗಿ 2,000 ರೂಪಾಯಿ ಮುಖಬೆಲೆ ನೋಟುಗಳ ವಾಪಸ್ ನೀಡಿದ್ದಾರೆ.

ಈಗಲೂ ಅವಕಾಶ ಸಿಕ್ಕಿದೆ ನೋಡಿ!
ಬಾಕಿ ಇರುವ ₹8,202 ಕೋಟಿ ಮೌಲ್ಯದ ನೋಟು ಹಿಂದಿರುಗಿಸಲು ಈಗ ಕೂಡ ಕಾಲಾವಕಾಶ ಇದೆ. ಆ ಪ್ರಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು & ಬೇರೆ ಮುಖಬೆಲೆಯ ನೋಟುಗಳ ಜೊತೆ ಬದಲಾಯಿಸಿಕೊಳ್ಳಲು ಸೂಕ್ತವಾದ ವ್ಯವಸ್ಥೆಯ ಮಾಡಿದೆ ಆರ್‌ಬಿಐ. ಇದಕ್ಕಾಗಿ ಆರ್‌ಬಿಐನ ಒಟ್ಟಾರೆ 19 ಪ್ರಾದೇಶಿಕ ಕಚೇರಿಗಳಲ್ಲಿ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಅಂಚೆ ಮೂಲಕವು ಕೂಡ ಪ್ರಾದೇಶಿಕ ಕಚೇರಿಗಳಿಗೆ ನೋಟು ಕಳುಹಿಸಿ ಬದಲಾವಣೆ ಮಾಡಿಕೊಳ್ಳಬಹುದು.
ಒಟ್ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ₹2 ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ ವಿಚಾರ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಈ ಮೂಲಕ, ಭಾರತದಲ್ಲಿ ಜಾರಿಗೆ ಬಂದ ವಿಶಿಷ್ಟ ನೋಟುಗಳು ಇನ್ನೇನು ಕೆಲವೇ ದಿನದಲ್ಲಿ ಇತಿಹಾಸದ ಪುಟ ಸೇರಲಿವೆ. ಈ ಬೆಳವಣಿಗೆ ಇದೀಗ ಸಾಕಷ್ಟು ಗಮನ ಕೂಡ ಸೆಳೆದಿದೆ.












Click it and Unblock the Notifications