ಅಗತ್ಯ ವಸ್ತುಗಳ ಬೆಲೆ ಏರಿಕೆ: ಆರ್‌ಬಿಐ ಗವರ್ನರ್ ಕೊಟ್ಟ ಭರವಸೆ ಏನು?
ನವದೆಹಲಿ, ಆಗಸ್ಟ್ 24: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರು ತಮ್ಮ ದೈನಂದಿನ ಖರ್ಚು ವೆಚ್ಚಗಳಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರ್‌ಬಿಐ ಜನರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ.
ಲಲಿತ್ ದೋಷಿ ಸ್ಮಾರಕ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು. ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಸೆಪ್ಟೆಂಬರ್‌ನಿಂದ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಲಿದೆ. ಹೆಚ್ಚಿನ ಹಣದುಬ್ಬರವನ್ನು ನಿಭಾಯಿಸುವ ಸವಾಲು ಇನ್ನೂ ಇದೆ ಎಂದು ಹೇಳಿದ್ದಾರೆ.

ಮಾರುಕಟ್ಟೆಗೆ ಟೊಮ್ಯಾಟೊ ಆಗಮನವಾಗಿದ್ದು, ಅಡುಗೆಮನೆಯ ಪ್ರಮುಖ ಆಹಾರ ಪದಾರ್ಥಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿದೆ. ಭಾರತದ ವಾರ್ಷಿಕ ಚಿಲ್ಲರೆ ಹಣದುಬ್ಬರ ಜುಲೈನಲ್ಲಿ ಶೇಕಡಾ 7.44 ರಷ್ಟು ಎಂದು ಕಂಡು ಬಂದಿದೆ. ಇದು ಹೆಚ್ಚುತ್ತಿರುವ ಏಕದಳ ಮತ್ತು ತರಕಾರಿ ಬೆಲೆಗಳಿಗೆ ದರ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.
ಹಣದುಬ್ಬರವನ್ನು ವಿತ್ತೀಯ ನೀತಿ ಸಮಿತಿಯ (MPC) ಕಡ್ಡಾಯವಾದ ಮಧ್ಯಮಾವಧಿಯ ಗುರಿಯಾದ ಶೇಕಡಾ 4 ಕ್ಕೆ ಕಾಪಾಡಿಕೊಳ್ಳಲು RBI ಬದ್ಧವಾಗಿದೆ ಎಂದು ಶಕ್ತಿಕಾಂತ ದಾಸ್ ಭರವಸೆ ನೀಡಿದರು. ಆಹಾರ ಬೆಲೆ ಏರಿಕೆಯಂತಹ ಪುನರಾವರ್ತಿತ ಘಟನೆಗಳು ಸೆಪ್ಟೆಂಬರ್ 2022 ರಿಂದ ಈಗಿರುವ ಹಣದುಬ್ಬರ ನಿರೀಕ್ಷೆಗಳ ಏರುವ ಅಪಾಯವನ್ನುಂಟುಮಾಡುತ್ತವೆ. ನಾವು ಇದನ್ನು ಗಮನಿಸುತ್ತೇವೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಅಕ್ಕಿ, ಟೊಮ್ಯಾಟೊ, ಈರುಳ್ಳಿ ಮತ್ತು ಧಾನ್ಯಗಳಂತಹ ಅಗತ್ಯ ವಸ್ತುಗಳ ಬೆಲೆಗಳನ್ನು ತಣ್ಣಗಾಗಲು ಭಾರತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರವು ನೇಪಾಳದಿಂದ ಟೊಮೆಟೊವನ್ನು ಆಮದು ಮಾಡಿಕೊಂಡಿತು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿಗೆ 50 ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಿತು. ಇದು ಈರುಳ್ಳಿ ಬಫರ್ ಸ್ಟಾಕ್ ಅನ್ನು 3 ಲಕ್ಷ ಮೆಟ್ರಿಕ್ ಟನ್ ನಿಂದ 5 ಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಿಸಿದೆ.
ಸರ್ಕಾರವು ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ಬಿಡುಗಡೆ ಮಾಡಲು ಪ್ರಾರಂಭಿಸಿತು ಮತ್ತು ಚಿಲ್ಲರೆ ಗ್ರಾಹಕರಿಗೆ ಎನ್‌ಸಿಸಿಎಫ್‌ನ ಚಿಲ್ಲರೆ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಪ್ರತಿ ಕೆಜಿಗೆ ರೂ 25 ರ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡಿತು. ಜುಲೈನಲ್ಲಿ, ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಕ್ಷಣವೇ ರಫ್ತು ಮಾಡುವುದನ್ನು ಸರ್ಕಾರ ನಿಷೇಧಿಸಿತು.












Click it and Unblock the Notifications