ಗಿಲ್ಲಿ ಮೊದಲ ಸಿನಿಮಾಗೆ ₹1 ಕೋಟಿ ಸಂಭಾವನೆ ಪಡೆದ್ರಾ? ನಾಯಕಿಯಾಗಿ ಕಾವ್ಯ ಇರ್ತಾರಾ, ಚಿತ್ರತಂಡ ಹೇಳಿದ್ದಿಷ್ಟು

'ಬಿಗ್ ಬಾಸ್' ಸೀಸನ್ ಮುಗಿಸಿ ವಿನ್ನರ್ ಟ್ರೋಫಿ ಜೊತೆ ಹೊರಬಂದ ನಂತರ ಗಿಲ್ಲಿ ನಟನ ಜನಪ್ರಿಯತೆ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಆಫರ್‌ಗಳು ಹುಡುಕಿಕೊಂಡು ಬರುತ್ತಿದ್ದು, ಅವರ ಹುಟ್ಟುಹಬ್ಬದಂದೇ ಬಹುನಿರೀಕ್ಷಿತ ಸಿನಿಮಾ 'ಪಳಾರ್' ಅಧಿಕೃತವಾಗಿ ಅನೌನ್ಸ್ ಆಗಿದೆ. ಈ ಚಿತ್ರದ ಭರ್ಜರಿ ಮುಹೂರ್ತ ಸಮಾರಂಭ ಕೂಡ ನೆರವೇರಿದ್ದು, ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಕ್ಲಾಪ್ ಮಾಡಿ ಇಡೀ ಚಿತ್ರತಂಡಕ್ಕೆ ಹರಸಿದ್ದಾರೆ. ಆದರೆ, ಸಿನಿಮಾ ಮುಹೂರ್ತ ಮುಗಿಯುತ್ತಿದ್ದಂತೆ ಗಿಲ್ಲಿ ಸಂಭಾವನೆ ಬಗ್ಗೆ ಗಾಂಧಿನಗರದಲ್ಲಿ ಹೊಸದೊಂದು ಬಿಸಿ ಬಿಸಿ ಚರ್ಚೆಯೂ ಶುರುವಾಗಿದೆ.

ಮೊದಲ ಸಿನಿಮಾಗೇ ಬರೋಬ್ಬರಿ 1 ಕೋಟಿ ಸಂಭಾವನೆ?

ಬಿಗ್ ಬಾಸ್ ಗೆದ್ದ ಬೆನ್ನಲ್ಲೇ ಗಿಲ್ಲಿ ನಟನ ಡಿಮ್ಯಾಂಡ್ ಹೆಚ್ಚಾಗಿದ್ದು, 'ಪಳಾರ್' ಚಿತ್ರಕ್ಕಾಗಿ ಅವರು ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ರಿಯಾಲಿಟಿ ಶೋ ಮುಗಿಸಿ ಬರುತ್ತಿದ್ದಂತೆ ಹೊಸ ನಟನೊಬ್ಬನಿಗೆ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿರುವುದು ನಿಜವೇ ಎಂದು ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳು ಕೂಡ ಶಾಕ್‌ ಆಗಿದ್ದಾರೆ.

Gilli

ಈ ಕೋಟಿ ರೂಪಾಯಿ ರೆಮ್ಯುನರೇಷನ್ ಕುರಿತು ಮಾಧ್ಯಮಗಳು ನೇರವಾಗಿ ಪ್ರಶ್ನಿಸಿದಾಗ ಗಿಲ್ಲಿ ನಟ ಇದಕ್ಕೆ ಸಂಪೂರ್ಣ ಒಪ್ಪಿಗೆಯನ್ನೂ ನೀಡಲಿಲ್ಲ, ನಿರಾಕರಿಸಲೂ ಇಲ್ಲ. ಬದಲಿಗೆ, "ಸಂಭಾವನೆ ಬಗ್ಗೆ ಒಟ್ಟಿನಲ್ಲಿ ಮಾತನಾಡಿದ್ದೇವೆ ಅಷ್ಟೇ..." ಎಂದು ಹೇಳುವ ಮೂಲಕ ಸಸ್ಪೆನ್ಸ್‌ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಚಿತ್ರದ ಬೆನ್ನೆಲುಬಾಗಿ ನಿಂತಿರುವ ಪ್ರಖ್ಯಾತ ನಿರ್ಮಾಣ ಸಂಸ್ಥೆಯ ಬಗ್ಗೆ ಮಾತನಾಡಿದ ಅವರು, "ಕೆವಿಎನ್ (KVN Productions) ಸಂಸ್ಥೆ ನಮಗೆ ದೊಡ್ಡ ಶಕ್ತಿ. ಇಡೀ ಭಾರತಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಇಂದು ಚಿರಪರಿಚಿತ. ಅಂತಹ ದೊಡ್ಡ ಸಂಸ್ಥೆ ನನಗೆ ಇಷ್ಟೊಂದು ಬೆಂಬಲ ನೀಡುತ್ತಿರುವುದು ನನ್ನ ಪಾಲಿನ ದೊಡ್ಡ ಪ್ಲಸ್ ಪಾಯಿಂಟ್" ಎಂದು ಸಂತಸ ಹಂಚಿಕೊಂಡಿದ್ದಾರೆ.

ಕಾವ್ಯ ಶೈವ ನಾಯಕಿನಾ? ಅಥವಾ ಶ್ರೀಲೀಲಾ?

ಸಿನಿಮಾದ ಸಂಭಾವನೆ ಒಂದೆಡೆಯಾದರೆ, ಚಿತ್ರದ ನಾಯಕಿ ಯಾರು ಎಂಬುದು ಮತ್ತೊಂದು ದೊಡ್ಡ ಸಸ್ಪೆನ್ಸ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿದ್ದ ಗಿಲ್ಲಿ ನಟನ ಆಪ್ತ ಗೆಳತಿ ಕಾವ್ಯ ಶೈವ ಅವರೇ ಈ ಚಿತ್ರಕ್ಕೆ ನಾಯಕಿಯಾಗಲಿದ್ದಾರಾ? ಎಂಬ ಚರ್ಚೆಗಳು ಜೋರಾಗಿವೆ. ಆದರೆ ಈ ಪ್ರಶ್ನೆಗೆ ಚಿತ್ರತಂಡ ಮಾತ್ರ ಸದ್ಯಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ. "ನಾಯಕಿಯ ಆಯ್ಕೆ ಸದ್ಯಕ್ಕೆ ಸಸ್ಪೆನ್ಸ್ ಆಗಿಯೇ ಇರಲಿ, ಮುಂದಿನ ದಿನಗಳಲ್ಲಿ ನಾವೇ ಅಧಿಕೃತವಾಗಿ ರಿವೀಲ್ ಮಾಡುತ್ತೇವೆ" ಎಂದು ಚಿತ್ರತಂಡ ಹೇಳಿದೆ.

Gilli

ಮತ್ತೊಂದೆಡೆ, ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಮತ್ತೊಂದು ಬಲವಾದ ಗಾಳಿ ಸುದ್ದಿಯ ಪ್ರಕಾರ, 'ಕಿಸ್' ಸಿನಿಮಾ ಖ್ಯಾತಿಯ ಹಾಗೂ ಸದ್ಯ ಟಾಲಿವುಡ್‌ನಲ್ಲಿ ಟಾಪ್ ನಾಯಕಿಯಾಗಿ ಮಿಂಚುತ್ತಿರುವ ಶ್ರೀಲೀಲಾ ಅವರು 'ಪಳಾರ್' ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಶ್ರೀಲೀಲಾ ಎಂಟ್ರಿಯಾದರೆ ಚಿತ್ರದ ತೂಕ ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಬಜೆಟ್, ಸಂಭಾವನೆ ಹಾಗೂ ನಾಯಕಿಯ ವಿಚಾರದಲ್ಲಿ 'ಪಳಾರ್' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕಂತೂ ಭಾರಿ ಚರ್ಚೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+