Bank Holidays in October 2023: ಅಕ್ಟೋಬರ್ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ- ಯಾವ ದಿನಗಳು ತಿಳಿಯಿರಿ

ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ ಇರಲಿದೆ. ಈ ಅವಧಿಯಲ್ಲಿ ಅನೇಕ ಹಬ್ಬಗಳು ಬರಲಿವೆ. ಪ್ರಮುಖ ಹಬ್ಬಗಳು ಬರುವುದರಿಂದ ಬ್ಯಾಂಕ್‌ಗಳಿಗೆ ಸರ್ಕಾರಿ ರಜೆಗಳು ಸಿಗಲಿವೆ. ಈ ಹಿನ್ನೆಲೆಯಲ್ಲಿ ಹಲವಾರು ಬ್ಯಾಂಕ್‌ಗಳಿಗೆ ಸಂಬಂಧಿಸಿದ ಗ್ರಾಹಕರ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ನೀವು ಸಹ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಮಾಡಬೇಕಾದರೆ, ಅದನ್ನು ಸಾಧ್ಯವಾದಷ್ಟು ಬೇಗ ಮಾಡಿ ಮುಗಿಸಬೇಕೆಂದು ವಿನಂತಿಸಿಕೊಳ್ಳಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆಗಳ ಪ್ರಕಾರ, ನಿರ್ದಿಷ್ಟ ರಾಜ್ಯಗಳಲ್ಲಿ ಅವಲಂಬಿಸಿ ಎಲ್ಲಾ ಸಾರ್ವಜನಿಕ ರಜಾದಿನಗಳು ಸಿಗಲಿವೆ. ಕೆಲವು ಪ್ರಾದೇಶಿಕ ರಜಾದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

bank-holidays-in-october-2023

ಪ್ರಾದೇಶಿಕ ರಜಾದಿನಗಳನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾ ದಿನಗಳ ಪಟ್ಟಿಯ ಪ್ರಕಾರ, ಮುಂದಿನ ತಿಂಗಳು ಒಟ್ಟು 15 ದಿನಗಳ ರಜೆ ಇರುತ್ತದೆ.

ಇದರಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳೂ ಸೇರಿವೆ. ಅಕ್ಟೋಬರ್ ತಿಂಗಳಲ್ಲಿ ಐದು ಭಾನುವಾರಗಳು ಬರುತ್ತವೆ. ಇದರೊಂದಿಗೆ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ರಜೆ ಇರುತ್ತವೆ. ಅಂದರೆ ಈ ಏಳು ರಜಾದಿನಗಳನ್ನು ಇಡೀ ದೇಶದಲ್ಲಿ ಇರಲಿವೆ.

bank-holidays-in-october-2023

ಅಕ್ಟೋಬರ್ ತಿಂಗಳು ರಜಾದಿನಗಳ ಪಟ್ಟಿ ತಿಳಿಯಿರಿ

*2 ಅಕ್ಟೋಬರ್ 2023, ಸೋಮವಾರ, ಮಹಾತ್ಮ ಗಾಂಧಿ ಜಯಂತಿ

*12 ಅಕ್ಟೋಬರ್ 2023, ಭಾನುವಾರ- ನರಕ ಚತುರ್ದಶಿ ( ಹಲವು ರಾಜ್ಯಗಳಲ್ಲಿ ಆಚರಿಸಲಾಗುತ್ತದೆ )

*14 ಅಕ್ಟೋಬರ್ 2023, ಎರಡನೇ ಶನಿವಾರ, ಮಹಾಲಯ ಅಮವಾಸೆ ( ಮುಖ್ಯವಾಗಿ ಕರ್ನಾಟಕ, ಒಡಿಶಾ, ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಇರಲಿದೆ )

*15 ಅಕ್ಟೋಬರ್ 2023, ಭಾನುವಾರ- ಘಟಸ್ಥಾಪನೆ ( ಹಲವು ರಾಜ್ಯಗಳಲ್ಲಿ ಆಚರಿಸಲಾಗುತ್ತದೆ )

*15 ಅಕ್ಟೋಬರ್ 2023, ಭಾನುವಾರ- ಮಹಾರಾಜ ಅಗ್ರಸೇನ್ ಜಯಂತಿ ( ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ )

*18 ಅಕ್ಟೋಬರ್ 2023, ಬುಧವಾರ- ಕಟಿ ಬಿಹು ( ಅಸ್ಸಾಂ )

*19 ಅಕ್ಟೋಬರ್ 2023, ಮಂಗಳವಾರ- ಸಂವತ್ಸರಿ ಉತ್ಸವ ( ಗುಜರಾತ್ )

*21 ಅಕ್ಟೋಬರ್ 2023, ಶನಿವಾರ- ದುರ್ಗಾ ಪೂಜೆ ( ಮಹಾ ಸಪ್ತಮಿ )

*22 ಅಕ್ಟೋಬರ್ 2023, ಭಾನುವಾರ- ಮಹಾ ಅಷ್ಟಮಿ ( ಭಾರತದಾದ್ಯಂತ ಅನೇಕ ರಾಜ್ಯಗಳು )

*23 ಅಕ್ಟೋಬರ್ 2023, ಸೋಮವಾರ- ಮಹಾ ನವಮಿ / ಆಯುಧ ಪೂಜೆ

*24 ಅಕ್ಟೋಬರ್ 2023, ಮಂಗಳವಾರ- ದಸರಾ / ವಿಜಯದಶಮಿ / ದುರ್ಗಾ ಪೂಜೆ

*25 ಅಕ್ಟೋಬರ್ 2023, ಬುಧವಾರ- ದುರ್ಗಾ ಪೂಜೆ ( ದಾಸಾಯಿ )

*26 ಅಕ್ಟೋಬರ್ 2023, ಗುರುವಾರ- ದುರ್ಗಾ ಪೂಜೆ ( ದಾಸಾಯಿ ) / ಪ್ರವೇಶ ದಿನ

*27 ಅಕ್ಟೋಬರ್ 2023, ಶುಕ್ರವಾರ- ದುರ್ಗಾ ಪೂಜೆ ( ದಾಸಾಯಿ )

*28 ಅಕ್ಟೋಬರ್ 2023- ನಾಲ್ಕನೇ ಶನಿವಾರ, ಲಕ್ಷ್ಮಿ ಪೂಜೆ, ಪರ್ಗಟ್ ದಿವಸ್

*31 ಅಕ್ಟೋಬರ್ 2023- ಮಂಗಳವಾರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ

ಕೆಲಸವನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು

ಬ್ಯಾಂಕುಗಳು ಮುಚ್ಚಲ್ಪಟ್ಟಿದ್ದರೂ, ಗ್ರಾಹಕರು ಡಿಜಿಟಲ್‌ ಮೂಲಕ ತಮ್ಮ ಸೇವೆಗಳನ್ನು ಪಡೆಯಬಹುದು. ಯುಪಿಎ, ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಸೇವೆಗಳ ಮೇಲೆ ಬ್ಯಾಂಕ್ ರಜಾದಿನಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+