₹2000 ನೋಟು ವಿನಿಮಯ: ಬ್ಯಾಂಕ್‌ಗಳ ಖಜಾನೆ ಸೇರಿದ ಶೇ.93ರಷ್ಟು ನೋಟು!
ಭಾರತದಲ್ಲಿ ಮತ್ತೊಂದು ವಿಧದ ನೋಟು ಮೂಲೆ ಸೇರುತ್ತಿದೆ. ₹2000 ನೋಟು ಇನ್ನೇನು ಇತಿಹಾಸ ಸೇರಲಿದೆ. ₹2000 ನೋಟು ವಿನಿಮಯಕ್ಕೆ ಅಂತಿಮ ದಿನ ಹತ್ತಿರವಾಗ್ತಿರುವ ಈ ಸಂದರ್ಭದಲ್ಲಿ ಪ್ರಶ್ನೆಯೊಂದು ಮೂಡಿತ್ತು. ಎಷ್ಟು ಪರ್ಸೆಂಟ್ ನೋಟು ವಾಪಸ್ ಬ್ಯಾಂಕ್ ಖಜಾನೆ ಸೇರಿದೆ? ಇದೀಗ ಬಾಕಿ ಉಳಿದಿರುವ ನೋಟುಗಳು ಎಷ್ಟು? ಅಂತಾ. ಈ ಪ್ರಶ್ನೆಗೆಲ್ಲ ಸಂಪೂರ್ಣ ಉತ್ತರ ಸಿಕ್ಕಿದ್ದು, ಆ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.
2016ರಲ್ಲಿ ನೋಟು ಅಮಾನ್ಯೀಕರಣ ಅಂದರೆ ಸಾಮಾನ್ಯ ಭಾಷೆಯಲ್ಲಿ ನೋಟ್ ಬ್ಯಾನ್‌ನ ಬಳಿಕ ಸಂಚಲನ ಸೃಷ್ಟಿಯಾಗಿತ್ತು. ಈ ಆದೇಶದ ಬಳಿಕ 1000 ಮತ್ತು 500 ಮುಖಬೆಲೆಯ ನೋಟು ಮಾಯವಾಗಿದ್ದವು. ಆಗ ಹುಟ್ಟಿಕೊಂಡಿದ್ದೇ ₹2000 ಮುಖಬೆಲೆ ನೋಟು. ಆದರೆ ಈಗ ₹2000 ನೋಟುಗಳಿಗೂ ಎಕ್ಸ್‌ಪೆರಿ ಡೇಟ್ ಹತ್ತಿರ ಬಂದಿದೆ. ಮೇ 19 ರಂದು ಆರ್‌ಬಿಐ 2,000 ರೂಪಾಯಿ ಕರೆನ್ಸಿ ನೋಟು ವಾಪಾಸ್ ಪಡೆಯುವ ಘೋಷಣೆಯನ್ನು ಹೊರಡಿಸಿತ್ತು. ಈ ಘೋಷಣೆ ಬಳಿಕ ಎಷ್ಟು ನೋಟು ಬ್ಯಾಂಕ್‌ಗಳ ಖಜಾನೆಗೆ ಬಂದಿದೆ ಗೊತ್ತಾ? ಇನ್ನು ಬಾಕಿ ಉಳಿದಿರುವ ಸಮಯ ಎಷ್ಟು ಗೊತ್ತಾ? ಮುಂದೆ ಓದಿ.

1.. 2.. 3.. ಟೈಂ ಹತ್ತಿರ ಬಂತು!
ಹೀಗೆ ₹2000 ನೋಟುಗಳನ್ನು ವಾಪಸ್ ಪಡೆಯುವ ಘೋಷಣೆ ಬಳಿಕ ಆಗಸ್ಟ್ 31 ರ ತನಕ ಒಟ್ಟು ಶೇಕಡ 93ರಷ್ಟು ನೋಟು ಮರಳಿ ಗೂಡು ಸೇರಿದೆ ಎಂಬ ಮಾಹಿತಿ ಸಿಕ್ಕಿದೆ. ಹಾಗೇ 3.32 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಈ ಮೂಲಕ ಬ್ಯಾಂಕ್‌ನ ಖಜಾನೆ ಸೇರಿದಂತೆ ಆಗಿದೆ. ಈ ಪೈಕಿ ಶೇಕಡಾ 87ರಷ್ಟು ₹2000 ನೋಟುಗಳು ಡೆಪಾಸಿಟ್ ಆಗಿದ್ರೆ, ಇನ್ನುಳಿದ ಶೇಕಡಾ 13ರಷ್ಟು ನೋಟುಗಳು ಎಕ್ಸ್‌ಚೇಂಜ್ ಅಂದರೆ ನೇರವಾಗಿಯೇ ಬ್ಯಾಂಕ್ ಮೂಲಕ ಬದಲಾಗಿವೆ. ಆದರೆ ಈಗ ಬಾಕಿ ಉಳಿದಿರುವ 2000 ನೋಟುಗಳನ್ನ ವಿನಿಮಯ ಮಾಡಿಕೊಳ್ಳಲು ಇರುವ ಸಮಯ ಇನ್ನು 29 ದಿನ ಮಾತ್ರ!
ಟೆನ್ಷನ್ ತಪ್ಪಿಸಲು ಸಮಯ ಸಿಕ್ಕಿತ್ತು!
2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡಿರಲಿಲ್ಲ ಆರ್‌ಬಿಐ. ಜನರಿಗೆ ಅನುಕೂಲ ಆಗಲಿ ಎಂದು ಬರೋಬ್ಬರಿ 4 ತಿಂಗಳ ಅವಕಾಶ ಕಲ್ಪಿಸಿತ್ತು. ಜನರಿಗೆ ಕೂಡ 2000 ಮುಖಬೆಲೆ ನೋಟ್‌ಗಳನ್ನು ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವೂ ಇತ್ತು. ಅಕ್ಟೋಬರ್ 1ರಿಂದ 2000 ನೋಟ್ ಚಲಾವಣೆ ಸಂಪೂರ್ಣ ಬ್ಯಾನ್ ಮಾಡಲಾಗುತ್ತೆ ಎಂದು ಆರ್‌ಬಿಐ ತಿಳಿಸಿತ್ತು. ಹೀಗಾಗಿಯೇ ಟೆನ್ಷನ್ ಮಾಡಿಕೊಳ್ಳದೆ ಜನರು ಕೂಡ ಹತ್ತಿರದಲ್ಲಿ ಇದ್ದ ಬ್ಯಾಂಕ್‌ಗಳಲ್ಲಿ 2000 ರೂ. ಮುಖಬೆಲೆ ನೋಟ್‌ಗಳನ್ನು ಎಕ್ಸ್‌ಚೇಂಜ್ ಮಾಡಿದ್ದರು.
ದೇಶದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1 ವಾರದಲ್ಲೇ 2000 ರೂಪಾಯಿ ಮುಖಬೆಲೆಯ ಒಟ್ಟು 14,000 ಕೋಟಿ ರೂಪಾಯಿಯನ್ನು ಡೆಪಾಸಿಟ್ ಮಾಡಲಾಗಿದೆ. ಇನ್ನು 3,000 ಕೋಟಿ ರೂಪಾಯಿಯಷ್ಟು 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡಲಾಗಿದೆ. ಇದೇ ರೀತಿ ಬೇರೆ ಬೇರೆ ಬ್ಯಾಂಕ್‌ಗಳಲ್ಲೂ ಭಾರಿ ಪ್ರಮಾಣದಲ್ಲಿ ನೋಟು ವಿನಿಯಮ ನಡೆದಿದೆ.
2016ರಲ್ಲಿ 500 & 1000ರ ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ (Note Ban) ಬಳಿಕ 2000 ಮುಖಬೆಲೆ ನೋಟ್ ಚಲಾವಣೆಗೆ ಬಂತು. ಆದರೆ ಆರ್‌ಬಿಐ ಈಗ ದೇಶದಲ್ಲಿ ಚಲಾವಣೆ ಆಗುತ್ತಿದ್ದ 2000 ರೂಪಾಯಿ ನೋಟುಗಳ ಚಲಾವಣೆಯನ್ನ ಸ್ಥಗಿತಗೊಳಿಸಿದೆ (2000 Note). ವಾಪಸ್ ಪಡೆಯಲು ಬ್ಯಾಂಕ್‌ಗಳಿಗೆ ಆರ್‌ಬಿಐ ಆದೇಶ ನೀಡಿತ್ತು. ಇದೀಗ ಆರ್‌ಬಿಐ ನೀಡಿದ್ದ ಗಡುವು ಇನ್ನೇನು ಇದೇ ತಿಂಗಳು ಮುಗಿಯಲಿದ್ದು, ಭಾಗಶಃ ಎಲ್ಲಾ ನೋಟುಗಳು ಬ್ಯಾಂಕ್ ಖಜಾನೆ ಸೇರಿದಂತೆ ಆಗಿವೆ. ಬಾಕಿ ಉಳಿದ ನೋಟುಗಳು ಕೂಡ ಬ್ಯಾಂಕ್‌ಗೆ ಬರುವ ನಿರೀಕ್ಷೆ ಇದೆ.












Click it and Unblock the Notifications