Juice Jacking Scam: ಮೊಬೈಲ್ ಚಾರ್ಜಿಂಗ್‌ನಿಂದ ಹಣ-ಡೇಟಾ ಕಳವಾಗಬಹುದು ಎಚ್ಚರ, ರಕ್ಷಣೆಯ ಮಾರ್ಗಗಳೇನು?
ಬೆಂಗಳೂರು, ಜುಲೈ 26: ಸಾರ್ವಜನಿಕರ ವೈಯಕ್ತಿಕ ಡೇಟಾ, ಇನ್ನಿತರ ಅತ್ಯಮೂಲ್ಯ ಮಾಹಿತಿ ಜೊತೆಗೆ ಹಣವನ್ನು ಗೊತ್ತಾಗದಂತೆಯೇ ಅವರ ಡಿಜಿಟಲ್ ಡಿವೈಸ್‌ಗಳ ಮೂಲಕ ಖದಿಯುವ ಜಾಲ 'ಜ್ಯೂಸ್ ಜಾಕಿಂಗ್' ಸಕ್ರಿಯವಾಗಿದೆ ಎಂದು ವರದಿ ಆಗಿದೆ. ಹಾಗಿದ್ದರೆ ಇಂತವರ ಮೋಸ ಹೇಗೆ ನಡೆಯುತ್ತದೆ, ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಅಂಶಗಳನ್ನು ಇಲ್ಲಿ ತಿಳಿಯಿರಿ.
ಜನಸಾಮಾನ್ಯರು ಸಾಮಾನ್ಯವಾಗಿ ತಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಹಾಗೂ ಇತ್ಯಾದಿ ಡಿಜಿಟಲ್ ಸಾಧನೆಗಳ ಬ್ಯಾಟರಿ ಲೆವಲ್ ಕಡಿಮೆಯಾಗುತ್ತಿದ್ದಂತೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹುಡುಕುತ್ತಾರೆ. ಇಂತಹ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಅಥವಾ ಕೆಲವೊಮ್ಮೆ ನಿಮ್ಮ ಮನೆ ಅಥವಾ ಕಛೇರಿಯಲ್ಲಿ ನೀವು ಇಲ್ಲದಿರುವಾಗಿ ನಿಮ್ಮ ಡಿವೈಸ್‌ಗಳಿಂದಲೇ ಹಣ ಕಳ್ಳತನವಾಗಬಹುದು. ಇಲ್ಲವೇ ನಿಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆ ಆಗುವ ಸಾಧ್ಯತೆಯು ಹೆಚ್ಚಿರುತ್ತದೆ.

ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಇನ್ನಿತರ ಡಿವೈಸ್‌ಗಳನ್ನು ಚಾರ್ಜಿಗೆ ಹಾಕಿದಾಗ, ಯುಎಸ್‌ಬಿ ಪೋರ್ಟ್‌ಗಳು ಅಥವಾ ಚಾರ್ಜಿಂಗ್ ಕಿಯೋಸ್ಕ್‌ಗಳಂತಹ ಸಾಧನ ಮೂಲಕವೇ ನಿಮ್ಮ ಡಿವೈಸ್ ನಲ್ಲಿನ ಮಾಹಿತಿ, ಹಣ ಕಳೆದುಕೊಳ್ಳಬೇಆಗುತ್ತದೆ. ಹೀಗೆ ವಂಚಿಸುವುದನ್ನು 'ಜ್ಯೂಸ್ ಜಾಕಿಂಗ್' ಎಂದು ಕರೆಯಲಾಗುತ್ತದೆ. ಈ 'ಜ್ಯೂಸ್ ಜಾಕಿಂಗ್' ವಂಚಕರು ಇತ್ತೀಚೆಗೆ ಹಣಕಾಸು ಕ್ಷೇತ್ರದಲ್ಲಿ ನಿಧಾನವಾಗಿ ವಿಸ್ತರಿಸುತ್ತಿದ್ದಾರೆ ಎಂದು RBI ಮೂಲಗಳು ಮಾಹಿತಿ ನೀಡಿವೆ.
ಸಾರ್ವಜನಿಕ ಜಾರ್ಜಿಂಗ್ ಕೇಂದ್ರ ದುರ್ಬಳಕೆ?
ಜ್ಯೂಸ್ ಜಾಕಿಂಗ್ ದುರುದ್ದೇಶಪೂರಿತ ವ್ಯಕ್ತಿಗಳು ಯುಎಸ್‌ಬಿ ಪೋರ್ಟ್‌ಗಳು ಅಥವಾ ಚಾರ್ಜಿಂಗ್ ಕಿಯೋಸ್ಕ್‌ಗಳಂತಹ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಮಗೇ ತಿಳಿದಿರುವಂತೆ ಮೊಬೈಲ್‌ನ ಚಾರ್ಜಿಂಗ್ ಪೋರ್ಟ್ ಅನ್ನು ಫೋಟೊ, ವಿಡಿಯೋ ಹಾಗೂ ಇನ್ನಿತರ ಡೇಟಾ ವರ್ಗಾವಣೆಗೆ ಈಗಾಗಲೆ ಬಳಕೆ ಆಗುತ್ತಿದೆ ಎಂಬುದು ಗಮನಿಸಬೇಕಾದ ವಿಚಾರವಾಗಿದೆ.
ವಂಚಕರು ಸಂಪರ್ಕಗೊಂಡಿರುವ ಫೋನ್‌ಗಳಿಗೆ ಮಾಲ್‌ವೇರ್ ವರ್ಗಾಯಿಸಲು ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸುತ್ತಾರೆ. ಇದರಿಂದ ಮೊಬೈಲ್ ಫೋನ್ ನಲ್ಲಿರುವ ಇಮೇಲ್- SMS ಸಂದೇಶ, ಪಾಸ್‌ವರ್ಡ್ ನಂತರ ಸೂಕ್ಷ್ಮ ಡೇಟಾ ಕದಿಯುತ್ತಾರೆ. ಇದು ಕೇವಲ ಡೇಟಾ ಕಳ್ಳತನಕ್ಕೆ ಮಾತ್ರ ಸೀಮಿತವಾಗಿಲ್ಲ, ಆರ್ಥಿಕ ನಷ್ಟು ಉಂಟು ಮಾಡಲು ಬಳಕೆ ಆಗುತ್ತಿದೆ.

ಮಾಹಿತಿ ಕದ್ದು ನಿಮ್ಮನ್ನು ಆಟವಾಡಿಸಬಹುದು
ನಿಮ್ಮ ಆನ್‌ಲೈನ್ ಬ್ಯಾಂಕಿಂಗ್ ಅಥವಾ ಹಣಕಾಸು ಸಂಬಂಧಿತ ಖಾತೆಗಳನ್ನು ವಂಚಕರು ಒಮ್ಮೆ ಹೊಕ್ಕರೆ ಅವರು ನಿರಂತರವಾಗಿ ನಿಮಗೆ ಗೊತ್ತಾಗದಂತೆ ಆರ್ಥಿಕ ತೊಂದರೆ ನೀಡಬಹುದು. ಲಕ್ಷ ಲಕ್ಷ ಹಣ ವರ್ಗಾಯಿಸಿಕೊಳ್ಳಬಹುದು. ಇಲ್ಲವೇ ಕೆಲವು ಫೋಟೊಗಳನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟು ನಿಮ್ಮನ್ನು ಆಟವಾಡಿಸಲೂ ಬಹುದು. ಅಥವಾ ನಿಮ್ಮ ಹೆಸರಿನಲ್ಲಿ ಹೊಸ ಕ್ರೆಡಿಟ್ ಲೈನ್‌ಗಳನ್ನು ತೆರೆಯುವ ಸಾಧ್ಯತೆಯು ಇದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಇನ್ನೂ ಮುಂದುವರಿದು ನೋಡುವುದಾದರೆ, ಇಂತಹ ವಂಚಕರೇ ಸ್ವತಃ ಸಾರ್ವಜನಿಕ ಚಾರ್ಜಿಂಗ್ ಸೆಂಟರ್ ಸ್ಥಾಪಿಸಬಹುದು. ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಹೋಟೆಲ್‌ಗಳು ಅಥವಾ ಇತರ ಜನನಿಬಿಡ ಪ್ರದೇಶಗಳಲ್ಲಿ ಜನರು ತಮ್ಮ ಡಿವೈಸ್‌ಗಳನ್ನು ಚಾರ್ಜಿಂಗ್ ಹಾಕಿದಾಗ ಕೃತ್ಯ ವೆಸಗುವ ಸಾಧ್ಯತೆಗಳು ಹೆಚ್ಚಿವೆ.
ವಂಚಕರಿಂದ ರಕ್ಷಣೆ ಹೇಗೆ?
ಇಂತಹ ಅಪಾಯಗಳಿಂದ ನೀವು ತಪ್ಪಿಸಿಕೊಳ್ಳಲು ಗೊತ್ತಿರುವ ವಿಶ್ವಾಸಾರ್ಹ ಚಾರ್ಜಿಂಗ್ ಸ್ಟೇಷನ್ ಬಳಸಬೇಕು. ಆದಷ್ಟು ಮನೆಯಲ್ಲಿಯೇ ಇಲ್ಲ ನಿಮ್ಮ ಕಚೇರಿಗಳಲ್ಲಿ ಡಿವೈಸ್‌ಗಳನ್ನು ಫುಲ್ ಚಾರ್ಜ್ ಮಾಡಿಟ್ಟುಕೊಳ್ಳಿ. ಅನವಶ್ಯಕಾಗಿ ಅವಲಂಬನೆ ತಪ್ಪಿಸಿ. ಜೊತೆಗೆ ಸಾರ್ವಜನಿಕವಾಗಿ ಹಣದ ವಹಿವಾಟು, ಪಾಸವರ್ಡ್ ಬಳಕೆ ಆದಷ್ಟು ಕಡಿಮೆ ಮಾಡುವ ಮೂಲಕ ಇಂತಹ ವಂಚಕರಿಂದ ದೂರವಿರಬಹುದಾಗಿದೆ.
-
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications