RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್‌ಬಿಐ ಕಚೇರಿಗಳು!
ನವದೆಹಲಿ, ಮಾರ್ಚ್. 29: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸರ್ಕಾರಿ ವ್ಯವಹಾರಗಳೊಂದಿಗೆ ವ್ಯವಹರಿಸುವ ತನ್ನ ಕಚೇರಿಗಳು ಮಾರ್ಚ್ 30 ಮತ್ತು ಮಾರ್ಚ್ 31 ರಂದು ಇತರೇ ಕೆಲಸದ ದಿನದಂತೆಯೇ ತೆರೆದಿರುತ್ತವೆ ಎಂದು ಹೇಳಿದೆ. ಕಚೇರಿಗಳು ಪ್ರತಿದಿನದಂತೆ ಸಾಮಾನ್ಯ ಕೆಲಸದ ಸಮಯವನ್ನೇ ಹೊಂದಿರುತ್ತವೆ. ತೆರಿಗೆದಾರರ ಅನುಕೂಲಕ್ಕಾಗಿ ಇದನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಸರ್ಕಾರಿ ರಶೀದಿಗಳು ಮತ್ತು ಪಾವತಿಗಳನ್ನು ಸುಲಭಗೊಳಿಸಲು, ದೇಶಾದ್ಯಂತ ವಿಶೇಷ ಕ್ಲಿಯರಿಂಗ್ ಕಾರ್ಯಾಚರಣೆಗಳನ್ನು ನಡೆಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಮಾರ್ಚ್ 30 ಮತ್ತು 31, 2024 (ಶನಿವಾರ ಮತ್ತು ಭಾನುವಾರ) ರಂದು ಸರ್ಕಾರಿ ಚೆಕ್‌ಗಳಿಗಾಗಿ ವಿಶೇಷ ಕ್ಲಿಯರಿಂಗ್ ಅನ್ನು ನಡೆಸಲಾಗುತ್ತದೆ.

ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ (NEFT) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ವ್ಯವಸ್ಥೆಯ ಮೂಲಕ ವಹಿವಾಟುಗಳು ಮಾರ್ಚ್ 31, 2024 ರವರೆಗೆ ಒಟ್ಟು 2,400 ಗಂಟೆಗಳವರೆಗೆ ಕೆಲಸ ನಡೆಸಲಾಗುತ್ತಿದೆ. ಇಂತಹ ಕ್ಲಿಯರಿಂಗ್‌ನಲ್ಲಿ ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಚೆಕ್‌ಗಳನ್ನು ಪ್ರಸ್ತುತಪಡಿಸಬಹುದು ಎಂದು RBI ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ.
GST (ಸರಕು ಮತ್ತು ಸೇವಾ ತೆರಿಗೆ)/ TIN2.0 (ತೆರಿಗೆದಾರರ ಗುರುತಿನ ಸಂಖ್ಯೆ)/ ICEGATE (ಇಂಡಿಯನ್ ಕಸ್ಟಮ್ಸ್ EDI ಗೇಟ್‌ವೇ) / ಇ-ರಶೀದಿಗಳ ಲಗೇಜ್ ಫೈಲ್‌ಗಳನ್ನು ಅಪ್‌ಲೋಡ್ ಮಾಡುವ ಕೆಲಸಗಳು ಇವೆ. ಹೀಗಾಗಿಯೇ ಆರ್‌ಬಿಐಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಹಿವಾಟುಗಳ ವರದಿಗಾಗಿ ಮಾರ್ಚ್ 31, 2024 ಮತ್ತು ಏಪ್ರಿಲ್ 1, 2024 ರಂದು 1200 ಗಂಟೆಗಳವರೆಗೆ ತೆರೆದಿರುತ್ತದೆ.

ಈ ವಿಶೇಷ ಕ್ಲಿಯರಿಂಗ್ ಸೆಷನ್‌ಗಳಲ್ಲಿ ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಚೆಕ್‌ಗಳನ್ನು ಪ್ರಸ್ತುತಪಡಿಸಲು ಆರ್‌ಬಿಐ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳಿಗೂ ತಿಳಿಸಿದೆ. ಆರ್‌ಬಿಐ ಕಚೇರಿಗಳಲ್ಲದೆ, ಬ್ಯಾಂಕ್‌ಗಳು ಮತ್ತು ಆದಾಯ ತೆರಿಗೆ ಇಲಾಖೆಯ ಕಚೇರಿಗಳು ತೆರಿಗೆದಾರರಿಗಾಗಿ ತೆರೆದಿರುತ್ತವೆ.
ಈ ತಿಂಗಳ ಆರಂಭದಲ್ಲಿ, ಆದಾಯ ತೆರಿಗೆ ಇಲಾಖೆಯು ಈ ವೀಕೆಂಡ್ ಅನ್ನು ಗಮನದಲ್ಲಿ ಇರಿಸಿಕೊಳ್ಳುವುದಿಲ್ಲ. ಬಾಕಿ ಉಳಿದಿರುವ ತೆರಿಗೆ ಸಂಬಂಧಿತ ಕಾರ್ಯಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಮಾರ್ಚ್ 29 ರಿಂದ ಮಾರ್ಚ್ 31 ರವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಘೋಷಿಸಿತ್ತು. ಇದರ ಬೆನ್ನಲ್ಲೇ ಆರ್‌ಬಿಐ ಕೂಡ ಇಂತಹ ನಿರ್ಧಾರವನ್ನೇ ಪ್ರಕಟಿಸಿದೆ.
ಈ ವಾರಾಂತ್ಯದಲ್ಲಿ ಸತತವಾಗಿ ಮೂರು ರಜಾದಿನಗಳಿವೆ. ಮಾರ್ಚ್ 29 ರಂದು ಗುಡ್ ಫ್ರೈಡೆ ಇದೆ. ನಂತರ ಶನಿವಾರ ಮತ್ತು ಭಾನುವಾರ ಕ್ರಮವಾಗಿ ಮಾರ್ಚ್ 30 ಮತ್ತು ಮಾರ್ಚ್ 31 ರಂದು ರಜಾ ದಿನಗಳಿವೆ. ಹೀಗಾಗಿ ಕೆಲಸ ಅಗುವುದಿಲ್ಲ. ಈಗ ಈ ಎರಡು ದಿನಗಳು ಆರ್‌ಬಿಐ ಕಚೇರಿಗಳು ತೆರೆದಿರುವ ಕಾರಣ ಕೆಲಸ ಸುಲಭವಾಗಲಿದೆ.
ಮಾರ್ಚ್ 31 ರವರೆಗೆ ವಿಸ್ತರಿಸಲಾದ ಗಡುವು 2021-22 ಗಾಗಿ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಅಪ್‌ಟೇಡ್ ಮಾಡುವುದು, ತೆರಿಗೆ ಉಳಿಸುವ ಹೂಡಿಕೆಗಳನ್ನು ಪರಿಣಾಮಕಾರಿಯಾಗಿ ಮಾಡುವಂತಹ ತೆರಿಗೆ ಬಾಧ್ಯತೆಗಳನ್ನು ಪೂರೈಸಲು ವ್ಯಕ್ತಿಗಳಿಗೆ ಅನುಮತಿಸುತ್ತದೆ. ಈ ಹೆಚ್ಚುವರಿ ಸಮಯವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.












Click it and Unblock the Notifications