Bank Holiday Cancel: ಮಾರ್ಚ್ 31 ಭಾನುವಾರ ಈ ಬ್ಯಾಂಕ್​​ಗಳಿಗೆ ರಜೆ ರದ್ದು

ಬೆಂಗಳೂರು, ಮಾರ್ಚ್ 21: ಸಾಮಾನ್ಯವಾಗಿ ಭಾನುವಾರ ಬ್ಯಾಂಕ್‌ ರಜೆ ಇರುತ್ತದೆ. ಆದರೆ ಈ ತಿಂಗಳ ಕೊನೆಯ ಭಾನುವಾರ ಲಾಂಗ್‌ ವೀಕೆಂಡ್‌ ಪ್ಲಾನ್‌ ಮಾಡುವ ಮುನ್ನ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಈ ಸುದ್ದಿಯನ್ನು ಮಿಸ್‌ ಮಾಡದೇ ಓದಿ.

ಸರ್ಕಾರದ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಏಜೆನ್ಸಿ ಬ್ಯಾಂಕುಗಳು ಆರ್ಥಿಕ ವರ್ಷದ ಅಂತ್ಯ(Financial year end)ನ ಕೊನೆಯ ದಿನ ಮಾರ್ಚ್ 31 ಭಾನುವಾರದಂದು ಕಾರ್ಯನಿರ್ವಹಿಸಬೇಕು ಎಂದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.

RBI Directs These Banks Are Remain Open On March 31 Sunday

ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಬ್ಯಾಂಕುಗಳು ಸರ್ಕಾರಕ್ಕೆ ವರ್ಷದ ಕೊನೆಯಲ್ಲಿ ದತ್ತಾಂಶ ಒದಗಿಸಬೇಕು. ಜೊತೆಗೆ ಸರ್ಕಾರ ಎಲ್ಲಾ ಪಾವತಿ ಮತ್ತು ಸ್ವೀಕೃತಿಗಳ ದತ್ತಾಂಶವನ್ನು ಕಲೆ ಹಾಕಬೇಕಾಗುತ್ತದೆ. ಆದ್ದರಿಂದ ಬ್ಯಾಂಕ್‌ ರಜಾ ದಿನವಾದ ಭಾನುವಾರವೂ ಬ್ಯಾಂಕ್‌ ತೆರೆದಿರುವಂತೆ ಹಾಗೂ ಕರ್ತವ್ಯ ನಿರ್ವಹಿಸುವಂತೆ ಆರ್‌ಬಿಐ ಆದೇಶ ನೀಡಿದೆ. ಹಾಗೂ ಈ ವಿಚಾರವನ್ನು ಸಾರ್ವಜನಿಕರಿಗೆ ತಿಳಿಸುವಂತೆ ಸಹ ಸೂಚನೆ ನೀಡಲಾಗಿದೆ.

ಈ ಕೆಳಗಿನ ಬ್ಯಾಂಕ್‌ಗಳು ಮಾರ್ಚ್ 31 ಭಾನುವಾರದಂದೂ ತೆರೆದಿರುತ್ತವೆ

*ಬ್ಯಾಂಕ್ ಆಫ್ ಬರೋಡಾ

*ಬ್ಯಾಂಕ್ ಆಫ್ ಇಂಡಿಯಾ

*ಬ್ಯಾಂಕ್ ಆಫ್ ಮಹಾರಾಷ್ಟ್ರ

*ಕೆನರಾ ಬ್ಯಾಂಕ್

*ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

*ಇಂಡಿಯನ್ ಬ್ಯಾಂಕ್

*ಇಂಡಿಯನ್ ಓವರ್ಸೀಸ್ ಬ್ಯಾಂಕ್

*ಪಂಜಾಬ್ ಮತ್ತು ಸಿಂಧ್ ಬ್ಯಾಂಕ್

*ಪಂಜಾಬ್ ನ್ಯಾಷನಲ್ ಬ್ಯಾಂಕ್

*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

*ಯುಸಿಒ ಬ್ಯಾಂಕ್

*ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಖಾಸಗಿ ವಲಯದ ಬ್ಯಾಂಕ್‌ಗಳು

*ಆಕ್ಸಿಸ್ ಬ್ಯಾಂಕ್

*ಸಿಟಿ ಯೂನಿಯನ್ ಬ್ಯಾಂಕ್

*ಡಿಸಿಬಿ ಬ್ಯಾಂಕ್

*ಫೆಡರಲ್ ಬ್ಯಾಂಕ್

*ಹೆಚ್‌ಡಿಎಫ್‌ಸಿ ಬ್ಯಾಂಕ್

*ಐಸಿಐಸಿಐ ಬ್ಯಾಂಕ್

*ಐಡಿಬಿಐ ಬ್ಯಾಂಕ್

*ಐಡಿಎಫ್‌ಸಿ ಫಸ್ಟ್ ಬ್ಯಾಂಕ್

*ಇಂಡಸ್‌ಇಂಡ್ ಬ್ಯಾಂಕ್

*ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್

*ಕರ್ನಾಟಕ ಬ್ಯಾಂಕ್

*ಕೋಟಕ್ ಮಹೀಂದ್ರಾ ಬ್ಯಾಂಕ್

*ಆರ್‌ಬಿಎಲ್‌ ಬ್ಯಾಂಕ್

*ಸೌತ್ ಇಂಡಿಯನ್ ಬ್ಯಾಂಕ್

*ಯೆಸ್ ಬ್ಯಾಂಕ್

*ಧನಲಕ್ಷ್ಮಿ ಬ್ಯಾಂಕ್

*ಬಂಧನ್ ಬ್ಯಾಂಕ್

*ಸಿಎಸ್‌ಬಿ ಬ್ಯಾಂಕ್

*ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+