ಭಾನುವಾರ (ಮಾರ್ಚ್ 31) ಯಾವೆಲ್ಲ ಬ್ಯಾಂಕ್‌ಗಳು ತೆರೆದಿರಲಿವೆ?-ಪಟ್ಟಿ ಇಲ್ಲಿದೆ ನೋಡಿ
ನವದೆಹಲಿ, ಮಾರ್ಚ್ 31: ಭಾನುವಾರ (ಮಾರ್ಚ್ 31) ಆರ್ಥಿಕ ವರ್ಷದ ಕೊನೆಯ ದಿನ ಹಿನ್ನೆಲೆ ಬ್ಯಾಂಕ್‌ಗಳು, ಎಲ್‌ಐಸಿ (ಭಾರತೀಯ ಜೀವ ವಿಮಾ ನಗಮ) ಮತ್ತು ತೆರಿಗೆ ಕಚೇರಿಗಳು ತೆರೆದಿರಲಿವೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಹಾಗಾದರೆ ಯಾವೆಲ್ಲ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ತೆರೆದಿರಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸರ್ಕಾರದ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಏಜೆನ್ಸಿ ಬ್ಯಾಂಕುಗಳೂ ಮಾರ್ಚ್ 31 ತೆರೆದಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿತ್ತು. ಹಣಕಾಸು ವರ್ಷದ ಕೊನೆಯಲ್ಲಿ ಸರ್ಕಾರ ಎಲ್ಲಾ ಪಾವತಿ ಮತ್ತು ಸ್ವೀಕೃತಿಗಳ ಲೆಕ್ಕವನ್ನು ಕಲೆಹಾಕಬೇಕಾಗುತ್ತದೆ. ಆದ್ದರಿಂದ ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಬ್ಯಾಂಕುಗಳು ಸರ್ಕಾರಕ್ಕೆ ವರ್ಷದ ಕೊನೆಯಲ್ಲಿ ದತ್ತಾಂಶಗಳನ್ನು ನೀಡಬೇಕಾಗುತ್ತದೆ. ಈ ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ಭಾನುವಾರ ಆಗಿದ್ದು, ಈ ದಿನ ಬ್ಯಾಂಕ್‌ಗಳಿ ತೆರೆದಿರುತ್ತವೆ.

ಸರ್ಕಾರದ ಪರವಾಗಿ ಅಥವಾ ಏಜೆಂಟ್ಗಳಾಗಿ ಬ್ಯಾಂಕಿಂಗ್ ಚಟುವಟಿಕೆ ನಡೆಸಲು ಕೆಲ ಬ್ಯಾಂಕ್‌ಗಳಿಗೆ ಅಧಿಕಾರ ನೀಡಲಾಗಿರುತ್ತದೆ. ಅಂತಹ ಬ್ಯಾಂಕುಗಳನ್ನು ಏಜೆನ್ಸಿ ಬ್ಯಾಂಕುಗಳು ಎನ್ನಲಾಗುತ್ತದೆ. ಸರ್ಕಾರದ ಪಾವತಿಗಳ ಹಂಚಿಕೆ, ತೆರಿಗೆ ಸಂಗ್ರಹ ಇತ್ಯಾದಿ ಕಾರ್ಯಗಳನ್ನು ಈ ಏಜೆನ್ಸಿ ಬ್ಯಾಂಕುಗಳು ಮಾಡುತ್ತವೆ. ಪಿಪಿಎಫ್ ಸೇರಿದಂತೆ ಇನ್ನಿತರ ಸರ್ಕಾರಿ ಉಳಿತಾಯ ಯೋಜನೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
* ಸರ್ಕಾರಿ ಬ್ಯಾಂಕುಗಳು
1. ಬ್ಯಾಂಕ್ ಆಫ್ ಬರೋಡಾ
2. ಬ್ಯಾಂಕ್ ಆಫ್ ಇಂಡಿಯಾ
3. ಬ್ಯಾಂಕ್ ಆಫ್ ಮಹಾರಾಷ್ಟ್ರ
4. ಕೆನರಾ ಬ್ಯಾಂಕ್
5. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
6. ಇಂಡಿಯನ್ ಬ್ಯಾಂಕ್
7. ಇಂಡಿಯನ್ ಓವರ್‌ಸೀಸ್ ಬ್ಯಾಂಕ್
8. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
9. ಪಂಜಾಬ್ ನ್ಯಾಷನಲ್ ಬ್ಯಾಂಕ್
10. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
11. UCO ಬ್ಯಾಂಕ್
12. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
* ಖಾಸಗಿ ವಲಯದ ಬ್ಯಾಂಕುಗಳು
1. ಆಕ್ಸಿಸ್ ಬ್ಯಾಂಕ್ ಲಿಮಿಟೆಡ್
2. ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್
3. ಡಿಸಿಬಿ ಬ್ಯಾಂಕ್ ಲಿಮಿಟೆಡ್
4. ಫೆಡರಲ್ ಬ್ಯಾಂಕ್ ಲಿಮಿಟೆಡ್
5. HDFC ಬ್ಯಾಂಕ್ ಲಿಮಿಟೆಡ್.
6. ICICI ಬ್ಯಾಂಕ್ ಲಿಮಿಟೆಡ್.
7. ಐಡಿಬಿಐ ಬ್ಯಾಂಕ್ ಲಿಮಿಟೆಡ್
8. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್
9. ಇಂಡಸ್‌ಇಂಡ್ ಬ್ಯಾಂಕ್ ಲಿಮಿಟೆಡ್
10. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಲಿಮಿಟೆಡ್
11. ಕರ್ನಾಟಕ ಬ್ಯಾಂಕ್ ಲಿಮಿಟೆಡ್
12. ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್
13. ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್
14. RBL ಬ್ಯಾಂಕ್ ಲಿಮಿಟೆಡ್
15. ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್
16. ಯೆಸ್ ಬ್ಯಾಂಕ್ ಲಿಮಿಟೆಡ್
17. ಧನಲಕ್ಷ್ಮಿ ಬ್ಯಾಂಕ್ ಲಿಮಿಟೆಡ್
18. ಬಂಧನ್ ಬ್ಯಾಂಕ್ ಲಿಮಿಟೆಡ್
19. CSB ಬ್ಯಾಂಕ್ ಲಿಮಿಟೆಡ್
20. ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಲಿಮಿಟೆಡ್
* ವಿದೇಶಿ ಬ್ಯಾಂಕು
1. DBS ಬ್ಯಾಂಕ್ ಇಂಡಿಯಾ ಲಿಮಿಟೆಡ್












Click it and Unblock the Notifications