Bank Holiday: ಏಪ್ರಿಲ್‌ನಲ್ಲಿ ಈ ದಿನಾಂಕಗಳಂದು ಬ್ಯಾಂಕ್ ಕ್ಲೋಸ್; ಇಲ್ಲಿದೆ ಪಟ್ಟಿ
ಪ್ರತಿ ತಿಂಗಳು ಆರಂಭಕ್ಕೂ ಆರ್‌ಬಿಐ ಆ ತಿಂಗಳಲ್ಲಿ ಬರುವ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಏಪ್ರಿಲ್ ತಿಂಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಿಂದ ಗ್ರಾಹಕರು ಬ್ಯಾಂಕ್‌ಗೆ ಬಂದು ಬ್ಯಾಂಕ್ ಕ್ಲೋಸ್ ಆಗಿರುವುದನ್ನು ನೋಡಿಕೊಂಡು ಹೋಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ ಏಪ್ರಿಲ್ ಆರಂಭವಾಗಲಿದೆ. ಏಪ್ರಿಲ್‌ನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಯಾವಾಗ ಬ್ಯಾಂಕ್‌ಗಳು ಕ್ಲೋಸ್ ಆಗಿರುತ್ತವೆ ಎಂಬ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್‌ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಏಪ್ರಿಲ್‌ನಲ್ಲಿ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ರಜಾದಿನಗಳ ಪಟ್ಟಿಯನ್ನು ನೋಡಿಕೊಂಡು ತಮ್ಮ ಕೆಲಸವನ್ನು ಹೊಂದಿಸಿಕೊಳ್ಳಬಹುದು.

ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾದಿನಗಳ ಕಾರಣ ಏಪ್ರಿಲ್‌ನಲ್ಲಿ ಒಟ್ಟು 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಿರುತ್ತವೆ. ಈದ್ ಹಾಗೂ ಯುಗಾದಿ, ರಾಮನವಮಿ ಕಾರಣದಿಂದ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಕರ್ನಾಟಕದಲ್ಲಿನ ಬ್ಯಾಂಕ್‌ಗಳು ಯಾವಗೆಲ್ಲಾ ಓಪನ್ ಆಗಿರುತ್ತವೆ ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಎಪ್ರಿಲ್‌ನಲ್ಲಿ ಬ್ಯಾಂಕ್‌ಗಳ ರಜಾ ಪಟ್ಟಿ
1 ಏಪ್ರಿಲ್ ಒಂದರಂದು ವಾರ್ಷಿಕ ವ್ಯವಹಾರ ಮುಕ್ತಾಯವಾಗಿದ್ದ ಕಾರಣ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
- ಬಾಬು ಜಗಜೀವನ್ ರಾಮ್ ಜನ್ಮದಿನ ಮತ್ತು ಜುಮಾತ್ ಜುಮಾತುಲ್ ವಿದಾ ನಿಮಿತ್ಯ ಏಪ್ರಿಲ್ 5 ರಂದು ತೆಲಂಗಾಣ, ಜಮ್ಮು ಮತ್ತು ಶ್ರೀನಗರದಲ್ಲಿ ಭಾಗದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
- ಏಪ್ರಿಲ್ 7 ಭಾನುವಾರ
- 9 ಏಪ್ರಿಲ್: ಗುಡಿ ಪಡ್ವಾ/ಯುಗಾದಿ ಹಬ್ಬ/ತೆಲುಗಿನ ಹೊಸ ವರ್ಷದ ನಿಮಿತ್ಯ ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ಬಂದ್ ಇರುತ್ತವೆ.
- ಏಪ್ರಿಲ್ 10 ರಂದು ಈದ್ ಕಾರಣ ಕೇರಳದ ಕೊಚ್ಚಿಯಲ್ಲಿ ಬ್ಯಾಂಕ್ ಕ್ಲೋಸ್ ಆಗಿರುತ್ತವೆ.
- ಏಪ್ರಿಲ್ 11 ರ ಈದ್ ಕಾರಣ ಚಂಡೀಗಢ, ಗ್ಯಾಂಗ್‌ಟಕ್, ಕೊಚ್ಚಿ ಹೊರತುಪಡಿಸಿ ದೇಶದ ಬೇರೆಲ್ಲಾ ಭಾಗಗಳಲ್ಲಿ ಬ್ಯಾಂಕುಗಳು ಬಂದಿರುತ್ತವೆ.
- 13 ಏಪ್ರಿಲ್ ಎರಡನೇ ಶನಿವಾರ
- ಏಪ್ರಿಲ್ 14 ಭಾನುವಾರ ಆಗಿದ್ದು ಆ ದಿನ ಬ್ಯಾಂಕ್ ರಜೆ ಇರುತ್ತದೆ.
- ಏಪ್ರಿಲ್ 17 ರ ರಾಮನವಮಿಯಂದು ಅಹಮದಾಬಾದ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಾಕ್, ಹೈದರಾಬಾದ್, ಜೈಪುರ, ಕಾನ್ಪುರ, ಲಕ್ನೋ, ಪಾಟ್ನಾ, ರಾಂಚಿ, ಶಿಮ್ಲಾ, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕುಗಳು ಕ್ಲೋಸ್ ಇರುತ್ತವೆ.
- ಏಪ್ರಿಲ್ 21 ಭಾನುವಾರ
- 27 ಏಪ್ರಿಲ್ ನಾಲ್ಕನೇ ಶನಿವಾರ
- ಏಪ್ರಿಲ್ 28 ಭಾನುವಾರ












Click it and Unblock the Notifications