ಬ್ಯಾಂಕ್ ಉದ್ಯೋಗಿಗಳಿಗೂ ಬಂತು ಆರೋಗ್ಯ ವಿಮೆ
ನವದೆಹಲಿ, ಆಗಸ್ಟ್.08: ಶೀಘ್ರವೇ ಬ್ಯಾಂಕ್ ಉದ್ಯೋಗಿಗಳು ಸಹ ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಭಾರತೀಯ ಬ್ಯಾಂಕ್ಗಳ ಅಸೋಸಿಯೇಶನ್ (ಐಬಿಎ) ಹಾಗೂ ಬ್ಯಾಂಕ್ ಯೂನಿಯನ್ಗಳ ಮಧ್ಯೆ ಈ ಬಗ್ಗೆ ಒಪ್ಪಂದ ಒಂದು ನಡೆದಿದೆ.
ಎಲ್ಲ ಬ್ಯಾಂಕ್ ಉದ್ಯೋಗಿಗಳಿಗೆ ಹಾಗೂ ನಿವೃತ್ತರೂ ಸಹ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. ಎಲ್ಲ ಉದ್ಯೋಗಿಗಳ ಮಾಹಿತಿ ಕಲೆ ಹಾಕಲಾಗುತ್ತಿದ್ದು 20 ಅಧಿಕ ಬ್ಯಾಂಕ್ ಗಳು ವಿವರ ನೀಡಿವೆ.[ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ವಿಮೆ]

ದತ್ತಾಂಶ ಸಂಗ್ರಹವಾದ ನಂತರ ಉದ್ಯೋಗಿಗಳಿಗೆ ಮಾಸ್ಟರ್ ಮೆಡಿಕ್ಲೇಮ್ವಿಮೆ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಐಬಿಎ ಸದಸ್ಯರಾಗಿರುವ 43 ಬ್ಯಾಂಕ್ಗಳ ಉದ್ಯೋಗಿಗಳಿಗೆ ಈ ವೈದ್ಯಕೀಯ ವಿಮೆ ಲಭ್ಯವಾಗಲಿದೆ.
ಭಾರತೀಯ ಬ್ಯಾಂಕ್ಗಳ ಅಸೋಸಿಯೇಶನ್ (ಐಬಿಎ)
ಭಾರತೀಯ ಬ್ಯಾಂಕ್ಗಳ ಅಸೋಸಿಯೇಶನ್ ನಲ್ಲಿ 25 ರಾಷ್ಟ್ರೀಕೃತ ಬ್ಯಾಂಕುಗಳು, 11 ಖಾಸಗಿ ಬ್ಯಾಂಕ್ಗಳು ಮತ್ತು ಏಳು ವಿದೇಶಿ ಬ್ಯಾಂಕ್ಗಳು ಸದಸ್ಯರಾಗಿವೆ. ಈ ಬ್ಯಾಂಕ್ ಗಳಲ್ಲಿ ಕೆಲಸ ಮಾಡುತ್ತಿರುವ 10 ಲಕ್ಷ ಉದ್ಯೋಗಿಗಳು ಹಾಗೂ ಮೂರು ಲಕ್ಷ ನಿವೃತ್ತರಿಗೆ ಮಾಸ್ಟರ್ ಮೆಡಿಕ್ಲೇಮ್ವಿಮೆ ಸಿಗಲಿದೆ.[ಸಾಮಾಜಿಕ ಭದ್ರತೆಗೆ 3 ಹೊಸ ವಿಮಾ ಯೋಜನೆ]
ಸಂಸ್ಥೆ ಆರು ಸಾವಿರ ಮತ್ತು ಉದ್ಯೋಗಿ 5 ಸಾವಿರ ರು. ನಷ್ಟು ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಚೆನ್ನೈ ಮೂಲದ ಯೂನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ವೈದ್ಯಕೀಯ ವಿಮೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಮೂರರಿಂದ ನಾಲ್ಕು ಲಕ್ಷದ ವರೆಗೆ ವಿಮಾ ಸೌಲಭ್ಯ ದೊರೆಯಲಿದೆ.












Click it and Unblock the Notifications