Get Updates
Get notified of breaking news, exclusive insights, and must-see stories!

KSRTC 2024 ಪ್ರಯಾಣಿಕ ಸ್ನೇಹಿ ವರ್ಷ: 2023ರ ಅನುಷ್ಠಾನಗೊಂಡ ಯೋಜನೆ, ವಿಮೆ, ಅಭಿವೃದ್ಧಿ ಪಟ್ಟಿ ಹೀಗಿದೆ

ಬೆಂಗಳೂರು, ಜನವರಿ 01: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ವರ್ಷ 2024 ಅನ್ನು ಅರ್ಥಪೂರ್ಣವಾಗಿ ಆಚರಿಸಿದೆ. ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟಿದ್ದ ಒಟ್ಟು 12 ಸಿಬ್ಬಂದಿಗಳ ಅವಲಂಬಿತರಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ಹಣ ವಿತರಣೆಗೆ ಮಾಡುತ್ತಿದೆ. ಈ ಪೈಕಿ ಮೂರು ಸಿಬ್ಬಂದಿಗಳ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಹಣ ನೀಡಿದ ಹೊಸ ವರ್ಷ ಆಚರಿಸಿತು. ಜೊತೆಗೆ 2023ರಲ್ಲಿ ಏನೇನು ಯೋಜನೆಗಳನ್ನು ಜಾರಿ ತಂದಿದ್ದರ ಪಟ್ಟಿಯನ್ನು ಪ್ರಕಟಿಸಿದೆ.

ಅಪಘಾತದಲ್ಲಿ ಮೃತ ಪಟ್ಟವರ ಕುಟುಂಬದವರಿಗೆ ಸೀರೆ ಮತ್ತು ಸಿಹಿಯನ್ನು ನೀಡಿ ಸೋಮವಾರ ಗೌರವಿಸಲಾಯಿತು. ಮೃತರನ್ನು ಕಳೆದುಕೊಂಡು ಕುಟುಂಬದವರಿಗೆ ಯಾವ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆರ್ಥಿಕ ವಾಗಿ ಅವರಿಗೆ ಶಕ್ತಿ ಮತ್ತು ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ನಾವು ಮಾಡುತ್ತಿದ್ದೇವೆ. ಕೋಟಿ ಹಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ , ಮನೆ ಮಾಡಿಕೊಂಡು ಯಾರನ್ನು ಅವಲಂಬಿಸದೆ ಬದುಕು‌ ನಡೆಸಬಹುದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದೆ.

KSRTC 2023 Labour Health, 1 Cr Insurance Schemes List, 2024 Passenger Friendly Year, Targets

KSRTC ಸಂಸ್ಥೆ 2024 ವರ್ಷವನ್ನು 'ಪ್ರಯಾಣಿಕ ಸ್ನೇಹಿ' ವರ್ಷವಾಗಿ ಘೋಷಿಸಿದೆ. ಈ ಹಿಂದಿನ ವರ್ಷ 2023 ಅನ್ನು 'ಕಾರ್ಮಿಕ ಕಲ್ಯಾಣ ವರ್ಷ' ಎಂದು ತಿಳಿಸಿತ್ತು. ಆ ವರ್ಷ ಕಾರ್ಮಿಕರಿಗೆ ಏನೇನು ಸೌಲಭ್ಯ, ಯೋಜನೆ ಜಾರಿಗೊಳಿಸಿತು ಎಂಬ ಮಾಹಿತಿ ಇಲ್ಲಿದೆ.

ಸಾರಿಗೆ ಸುರಕ್ಷಾ ಅಪಘಾತ ವಿಮಾ ಪರಿಹಾರ ಯೋಜನೆ

ನಿಗಮದಲ್ಲಿ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅದೇರೀತಿ, ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಅಂಗನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗಳಿಗೆ ಹೆಚ್ಚಿನ ಮೊತ್ತದ ಆರ್ಥಿಕ ಪರಿಹಾರ ಒದಗಿಸುವ ಕ್ರಮ ಜಾರಿಗೆ ತಂದಿದೆ. ಈ ಮೂಲಕ ಸಿಬ್ಬಂದಿ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ರವರೊಂದಿಗೆ 50 ಲಕ್ಷ ರೂ. ಹಾಗೂ SBI ರವರ Corporate Salary Package ಅಡಿಯಲ್ಲಿ ರೂ.50 ಲಕ್ಷ ನೀಡಲಾಗುತ್ತಿದೆ.

* ಇದೇ ಯೋಜನೆ ಅಡಿಯಲ್ಲಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟ ನೌಕರರ ನಾಮನಿರ್ದೇಶಿತರಿಗೆ ಒಟ್ಟು ಒದು ಕೋಟಿ (01) ರೂಪಾಯಿ ಅಪಘಾತ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.

* ಸಾರಿಗೆ ನಿಗಮಗಳಲ್ಲಿ ದೇಶದಲ್ಲಿಯೇ ಈ ಯೋಜನೆಯನ್ನು ಪ್ರಥಮ ಬಾರಿಗೆ KSRTC ನಿಗಮದಲ್ಲಿ ಜಾರಿಗೊಳಿಸಲಾಗಿತ್ತು,‌ ತದನಂತರ ಇತರೆ ನಿಗಮಗಳಲ್ಲಿಯೂ ಜಾರಿಗೆಗೊಳಿಸಲಾಗಿದೆ.

* ಈ ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯನಿರತ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

* ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ವಿಮಾ ಹಣವನ್ನು ನೀಡಲಾಗಿದೆ.

* ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು 3 ರಿಂದ 5 ಪಟ್ಟು ಹೆಚ್ಚಳ ಮಾಡಲಾಗಿದೆ. ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು "ವಿದ್ಯಾ ಚೇತನ ಯೋಜನೆ" ಹೆಸರಿನಲ್ಲಿ 3345 ಮಕ್ಕಳಿಗೆ ರೂ.1.67 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ.

* ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, 10 ಕ್ಕಿಂತ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಾಗಿ ಪ್ರತಿ ವರ್ಷ ರೂ.2.55 ಕೋಟಿಗಳನ್ನು ಪಾವತಿಸುತ್ತಿದೆ. ಇದರಿಂದ ಸುಮಾರು 21,000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ.

* ಕಾರ್ಮಿಕರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.

ಕರ್ತವ್ಯಕ್ಕೆ ಮರಳಲು ಅವಕಾಶ

* ಈಗಾಗಲೇ ನೌಕರರ ಮೇಲಿನ 10364 ಅಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ವಿಧಿಸಿ ಮನ್ನಾ ಹಾಗೂ 10 ತಿಂಗಳುಗಿಂತ ಕಡಿಮೆ ಗೈರು ಹಾಜರಿ ಪ್ರಕರಣಗಳಲ್ಲಿ 425ಕ್ಕೂ ಹೆಚ್ಚು ಚಾಲಕರಿಗೆ ಕರ್ತವ್ಯಕ್ಕೆ ಮರಳಲು ಅವಕಾಶ ನೀಡಲಾಗಿದೆ.

* ಕೇಂದ್ರ ಕಛೇರಿಯ ಮಟ್ಟದಲ್ಲಿ ವ್ಯವಸ್ಥಾಪಕ ನಿರ್ದೇಶಕರು/ ನಿರ್ದೇಶಕರು (ಸಿ&ಜಾ)ರವರು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುತ್ತಿದ್ದಾರೆ.

* ವಿಭಾಗ/ಘಟಕ ಮಟ್ಟದಲ್ಲಿ ಕಾಲಕಾಲಕ್ಕೆ ಸಿಬ್ಬಂದಿಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ.

* ನಿಗಮಗಳಿಗೆ ಸ್ವಾಯತ್ತತೆ ನೀಡಲಾಗಿದ್ದು, (Autonomous) ಅಧಿಕಾರಿಗಳು/ಸಿಬ್ಬಂದಿಗಳನ್ನು ಆಯಾಯ ನಿಗಮಗಳಿಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗಿದೆ.

ನೌಕರರ ವರ್ಗಾವಣೆಗೆ ಅವಕಾಶ

* ಅಂತರ ವಿಭಾಗ/ ಘಟಕಗಳಿಗೆ 900 ಕ್ಕೂ ಹೆಚ್ಚು ನೌಕರರಿಗೆ ವರ್ಗಾವಣೆ ನೀಡಲಾಗಿದೆ.

* ಚಾಲಕರಲ್ಲಿ ಸುರಕ್ಷತಾ ಚಾಲನೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ, ಅಪಘಾತರಹಿತ ಚಾಲನೆಯ ಕುರಿತು ಕಾರ್ಯಾಗಾರ/ಉಪನ್ಯಾಸಗಳ ಆಯೋಜನೆ ಹಾಗೂ 65 ಹೊಸ ಬೊಲೆರೋ ಜೀಪುಗಳನ್ನು ವಿಭಾಗಗಳಿಗೆ ನೀಡಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತೆರಳಲು ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

* ಇನ್ನೂ ನಿಗಮದ ಅರ್ಹ ನೌಕರರಿಗೆ Higher Pension ಸೌಲಭ್ಯವನ್ನು ಒದಗಿಸುತ್ತಿದ್ದು, ಅಂದಾಜು ರೂ.1650 ಕೋಟಿಗಳಷ್ಟು ಪಾವತಿಸಲಾಗುವುದು ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

KSRTC 2023 Labour Health, 1 Cr Insurance Schemes List, 2024 Passenger Friendly Year, Targets

2024ರ 'ಪ್ರಯಾಣಿಕ ಸ್ನೇಹಿ ವರ್ಷ'ದ ಕಿರುನೋಟ

* ಈಗಾಗಲೇ ಪ್ರಯಾಣಿಕ ಸ್ನೇಹಿ ವರ್ಷದ ಘೋಷಣೆಯಂತೆ, ದಿನಾಂಕ: 01/01/2024 ರಿಂದ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಿದೆ.

* ಪ್ರಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ ಮಾಡಲಾಗುವುದು. ಇದರಲ್ಲಿ ಅಂಬಾರಿ ಉತ್ಸವ- 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ- 100, ಪಾಯಿಂಟ್- ಟು -ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು - 1000, ಎಲೆಕ್ಟ್ರಿಕ್ ಬಸ್ಸುಗಳು-500 ಸೇರ್ಪಡೆಯಾಗಲಿವೆ.

* ಪ್ರಸ್ತುತ ಪರಿಚಯಿಸಲಾಗಿರುವ 20 "ನಮ್ಮ ಕಾರ್ಗೋ ಟ್ರಕ್ಕು"ಗಳನ್ನು ವರ್ಷಾಂತ್ಯಕ್ಕೆ 500 ಕ್ಕೆ ಹೆಚ್ಚಿಸಲಾಗುವುದು.

* 1000 ವಾಹನಗಳ ಪುನಶ್ಚೇತನ ಯೋಜನೆಯ ಗುರಿ ಹೊಂದಲಾಗಿದೆ.

* ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ. ಉತ್ತಮ ಕುಡಿಯುವ ನೀರು, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು.

* ಮಾಹಿತಿ ತಂತ್ರಜ್ಙಾನವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ VTMS (Vehicle Tracking & Monitoring System), Mobile App, (UPI, ATM, Debit/ Credit Cards, NAMC) ಕಾರ್ಡ್ ಜಾರಿ, ನಗದು ರಹಿತ ಸೇವೆಗೆ ಆದ್ಯತೆ.

ಬಸ್ಸುಗಳ ಸ್ವಚ್ಚತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು

* ಚಾಲನಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವ ಸಂಬಂಧ ನುರಿತ ತರಬೇತುದಾರರಿಂದ Soft Skill Training ಹಾಗೂ ಅಪಘಾತ / ಸಂಚಾರ ನಿಯಮ ಪಾಲನೆ ಸಂಬಂಧ ನಿರಂತರ ಕಾರ್ಯಾಗಾರ ನಡೆಸಲಾಗುವುದು.

* ನಿಗಮದಲ್ಲಿ‌ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು/ಉಪಕ್ರಮಗಳು 2023 ರ ಸಾಲಿನಲ್ಲಿ 50 ಕ್ಕೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದು, ಈ ಪ್ರಶಸ್ತಿಗಳನ್ನು ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ.

* ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದ್ದು, ಆ‌ ನಿಟ್ಟಿನಲ್ಲಿ ನಮ್ಮ ಸಂಸ್ಢೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ ಶ್ಲಾಘನೀಯ ಎಂದು ನಿಗಮ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+