Get Updates
Get notified of breaking news, exclusive insights, and must-see stories!

Government Employee; KGID ಮಾಹಿತಿ ತಿದ್ದುಪಡಿಗೆ ಅವಕಾಶ

ಬೆಂಗಳೂರು, ಫೆಬ್ರವರಿ 22; ಕರ್ನಾಟಕದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ. ನೌಕರರು ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ) ಮಾಹಿತಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಯಾ-ಯಾವ ಮಾಹಿತಿ ತಿದ್ದುಪಡಿ ಮಾಡಬಹುದು ಎಂಬ ವಿವರ ನೀಡಲಾಗಿದೆ.

Karnataka Government Insurance Department (KGID) ವಿಮಾದಾರರೇ ದಯವಿಟ್ಟು ಈ ಮಾಹಿತಿಯನ್ನು ಗಮನಿಸಿ. ಮಾಹಿತಿಗಳು ತಿದ್ದುಪಡಿ ಮಾಡುವುದಿದ್ದರೆ ಅದನ್ನು ನಿಯಮಾನುಸಾರ ಮಾಡಿ ಎಂದು ಮನವಿ ಮಾಡಲಾಗಿದೆ.

Government Employee Now Edit Details Of The KGID

ತಿದ್ದುಪಡಿಗೆ ಸೂಚನೆಗಳು: ತಿದ್ದುಪಡಿ ಮಾಡಲು ಆಯ್ಕೆ ವಿಧ - 1. ಹೆಚ್.ಆರ್.ಎಂ.ಎಸ್. ನಲ್ಲಿ Dummy( ವಿಮಾ ಇಲಾಖೆಯಿಂದ ನೀಡದಿರುವ ) ಅಥವಾ ಇತರೆ ವಿಮಾದಾರರಿಗೆ ನೀಡಿರುವ ಪಾಲಿಸಿ ಸಂಖ್ಯೆಯನ್ನು ಬಳಸುತ್ತಿದ್ದರೆ, ವಿಮಾ ಇಲಾಖೆಯಿಂದ ನೀಡಲಾಗಿರುವ ಪ್ರಥಮ ಪಾಲಿಸಿ ಸಂಖ್ಯೆಯ ವಿಮಾ ಪತ್ರದ ನಕಲು ಪ್ರತಿಯನ್ನು ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಸಲ್ಲಿಸಿ HRMS Master Table ನಲ್ಲಿ update ಮಾಡಿಸಿಕೊಳ್ಳತಕ್ಕದ್ದು.

Step-2: ತಮ್ಮ ವೇತನ ಬಟವಾಡೆ ಅಧಿಕಾರಿಗಳಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ (HRMS Master Table ನಲ್ಲಿ ನಮೂದಿಸಿರುವ ಪ್ರತಿ HRMS Master Table ನಲ್ಲಿ ನಮೂದಿಸಿರುವ ಪಾಲಿಸಿ ಬಾಂಡ್‌ನ ನಕಲು ಪ್ರತಿ) ಮನವಿಯನ್ನು ಸಲ್ಲಿಸುವುದು.

Step-3: ವೇತನ ಬಟವಾಡೆ ಅಧಿಕಾರಿಗಳು Step -2 ರಂತೆ ಸ್ವೀಕರಿಸಿದ ಮನವಿಯನ್ನು ಪರಿಶೀಲಿಸಿ ಹೆಚ್.ಆರ್.ಎಂ.ಎಸ್. ತಂತ್ರಾಂಶದ Insurance Details ನಲ್ಲಿ ಕಡ್ಡಾಯವಾಗಿ HRMS Master Table ನಲ್ಲಿ ನಮೂದಿಸಿರುವ ಪಾಲಿಸಿ ಸಂಖ್ಯೆಯನ್ನು ಸೇರಿಸುವುದು.

Step-4: ವೇತನ ಬಟವಾಡೆ ಅಧಿಕಾರಿಗಳು ಆಯಾ ಇಲಾಖೆಯಲ್ಲಿರುವ ಹೆಚ್.ಆರ್.ಎಂ.ಎಸ್. ನೋಡಲ್ ಅಧಿಕಾರಿಗಳ ಮುಖಾಂತರ ತಿದ್ದುಪಡಿ ಮಾಡಿಸಿಕೊಳ್ಳಲು ಕ್ರಮವಹಿಸುವುದು.

Step-5 : ಪಾಲಿಸಿ ಸಂಖ್ಯೆಯನ್ನು ಹೆಚ್.ಆರ್.ಎಂ.ಎಸ್. ನಲ್ಲಿ ತಿದ್ದುಪಡಿ ಮಾಡಿಸಿಕೊಂಡ ನಂತರ ವಿಮಾದಾರರು ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ತಿದ್ದುಪಡಿಯಾದ ವೇತನ ಚೀಟಿಯೊಂದಿಗೆ (Pay slip with Updated KGID NO) ತಮ್ಮ ಪಾಲಿಸಿಗಳ ಖಾತೆಗಳನ್ನು ಕ್ರಮಬದ್ಧಗೊಳಿಸಲು ನಿರ್ದಿಷ್ಟಪಡಿಸಿರುವ ನಮೂನೆಯೊಂದಿಗೆ ಮನವಿಯನ್ನು ಸಲ್ಲಿಸತಕ್ಕದ್ದು.

ತಿದ್ದುಪಡಿ ಮಾಡಲು ಆಯ್ಕೆ ವಿಧ -2

ಹೆಚ್.ಆರ್.ಎಂ.ಎಸ್. ನಲ್ಲಿ Dummy (ವಿಮಾ ಇಲಾಖೆಯಿಂದ ನೀಡದಿರುವ ) ಅಥವಾ ಇತರೆ ವಿಮಾದಾರರಿಗೆ ನೀಡಿರುವ ಪಾಲಿಸಿ ಸಂಖ್ಯೆಯನ್ನು ಬಳಸುತ್ತಿದ್ದರೆ, ವೇತನ ಬಟವಾಡೆ ಅಧಿಕಾರಿಗಳಿಂದ ವಿಮಾ ಇಲಾಖೆ ನೀಡಲಾಗಿರುವ ಪ್ರಥಮ ಪಾಲಿಸಿ ಸಂಖ್ಯೆಯ ವಿಮಾ ಪತ್ರದ ನಕಲು ಪ್ರತಿಯನ್ನು ಸಲ್ಲಿಸಿ ಹೆಚ್.ಆರ್.ಎಂ.ಎಸ್. ತಂತ್ರಾಂಶದ Insurance Details ನಲ್ಲಿ ಕಡ್ಡಾಯವಾಗಿ ಪಾಲಿಸಿ ಸಂಖ್ಯೆಯನ್ನು ಸೇರಿಸುವುದು.

Step-2. Step-1 ರಂತೆ Insurance Details ನಲ್ಲಿ ನಮೂದಿಸಿರುವ ಪ್ರಿಂಟ್ ಪಡೆದ ಪ್ರತಿ, ವಿಮಾ ಪತ್ರದ ನಕಲು ಪ್ರತಿ, ವೇತನ ಚೀಟಿ( pay slip) ಹಾಗೂ ವೇತನ ಬಟವಾಡೆ ಅಧಿಕಾರಿಯಿಂದ ಧೃಡೀಕೃತ ತಿದ್ದುಪಡಿ ಕೋರಿಕೆ ಅರ್ಜಿಯನ್ನು ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಸಲ್ಲಿಸಿ ಕಡ್ಡಾಯವಾಗಿ ಸ್ವೀಕೃತಿ ಪಡೆದುಕೊಳ್ಳತಕ್ಕದ್ದು.

Step-3. ಮೇಲಿನಂತೆ ಜಿಲ್ಲಾ ವಿಮಾ ಕಛೇರಿ ಸ್ವೀಕರಿಸಿದ ಮನವಿಯನ್ನು ಪರಿಶೀಲಿಸಿ HRMS Master Table ನಲ್ಲಿ update ಮಾಡಿದ ನಂತರ, ಹೆಚ್.ಆರ್.ಎಂ.ಎಸ್. ನಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಕಛೇರಿಗೆ ಸಲ್ಲಿಸುವುದು ಹಾಗೂ ತಿದ್ದುಪಡಿಯಾದ ಮಾಹಿತಿಯನ್ನು ಪಡೆದು ಮನವಿದಾರರಿಗೆ ತಿಳಿಸುವುದು ಪಾಲಿಸಿ ಸಂಖ್ಯೆಯನ್ನು ಹೆಚ್.ಆರ್.ಎಂ.ಎಸ್. ನಲ್ಲಿ ತಿದ್ದುಪಡಿ ಮಾಡಿಸಿಕೊಂಡ ನಂತರ ವಿಮಾದಾರರು ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ತಿದ್ದುಪಡಿಯಾದ ವೇತನ ಚೀಟಿಯೊಂದಿಗೆ (Pay slip with Updated KGID NO) ತಮ್ಮ ಪಾಲಿಸಿಗಳ ಖಾತೆಗಳನ್ನು ಕ್ರಮಬದ್ಧಗೊಳಿಸಲು ನಿರ್ದಿಷ್ಟಪಡಿಸಿರುವ ನಮೂನೆಯೊಂದಿಗೆ ಮನವಿಯನ್ನು ಸಲ್ಲಿಸತಕ್ಕದ್ದು.

ವಿಮಾ ಸೌಲಭ್ಯಗಳು ಸಂಪೂರ್ಣವಾಗಿ ಆನ್ಸೆನ್ ಆಗಿದ್ದು, ಈ ರೀತಿ ತಪ್ಪಾದ ಮಾಹಿತಿಯಿಂದಾಗಿ ಆನೈನ್ ಮೂಲಕ ಯಾವುದೇ ವಿಮಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಸೂಚನೆಗಳು

* ಜನ್ಮದಿನಾಂಕ ದೃಢೀಕರಿಸುವ ಪ್ರಮಾಣಪತ್ರದೊಂದಿಗೆ ಜನ್ಮದಿನಾಂಕ ತಪ್ಪಾಗಿರುವ ತಂತ್ರಾಂಶದಲ್ಲಿ ಈ ಕೆಳಕಂಡಂತೆ ತಿದ್ದುಪಡಿ ಮಾಡಿಸಿಕೊಳ್ಳುವುದು.

* ಹೆಚ್.ಆರ್.ಎಂ.ಎಸ್. ನಲ್ಲಿ ಜನ್ಮ ದಿನಾಂಕ ತಪ್ಪಾಗಿದ್ದಲ್ಲಿ ವಿಮಾ ಇಲಾಖೆಯಲ್ಲಿ ಜನ್ಮದಿನಾಂಕ ಸರಿಯಿದ್ದು, ಹೆಚ್.ಆರ್.ಎಂ.ಎಸ್.ನಲ್ಲಿ ಜನ್ಮ ದಿನಾಂಕ ತಪ್ಪಾಗಿದ್ದರೆ ವೇತನ ಬಟವಾಡೆ ಅಧಿಕಾರಿಗಳ ಮೂಲಕ ತಿದ್ದುಪಡಿಮಾಡಿಸಿಕೊಂಡು ತಿದ್ದುಪಡಿಯಾದ ಸೇವಾ ಪುಸ್ತಕದ ನಕಲು ಪ್ರತಿಯೊಂದಿಗೆ ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಮಾಹಿತಿ ಸಲ್ಲಿಸುವುದು.

* ವಿಮಾ ಇಲಾಖೆಯಲ್ಲಿ ಜನ್ಮದಿನಾಂಕ ತಪ್ಪಾಗಿದ್ದಲ್ಲಿ ಹೆಚ್.ಆರ್.ಎಂ.ಎಸ್. ನಲ್ಲಿ ಜನ್ಮ ದಿನಾಂಕ ಸರಿಯಿದ್ದು ವಿಮಾ ಇಲಾಖೆಯಲ್ಲಿ ಜನ್ಮ ದಿನಾಂಕ ತಪ್ಪಾಗಿದ್ದರೆ ವೇತನ ಬಟವಾಡೆ ಅಧಿಕಾರಿಗಳಿಂದ ದೃಢೀಕರಿಸಿರುವ ಸೇವಾ ಪುಸ್ತಕದ ನಕಲು ಪ್ರತಿಯೊಂದಿಗೆ ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಮನವಿಯನ್ನು ಸಲ್ಲಿಸಿ ತಮ್ಮ ಪಾಲಿಸಿಗಳ ಮಾಹಿತಿಗಳನ್ನು ಸರಿಪಡಿಸಿಕೊಳ್ಳುವುದು.

ವಿಮಾ ಸೌಲಭ್ಯಗಳು ಸಂಪೂರ್ಣವಾಗಿ ಆನ್‌ನೈನ್ ಆಗಿದ್ದು, ಈ ರೀತಿ ತಪ್ಪಾದ ಮಾಹಿತಿಯಿಂದಾಗಿ ಆನ್‌ಲೈನ್ ಮೂಲಕ ಯಾವುದೇ ವಿಮಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+