BPL ಆರೋಗ್ಯ ವಿಮೆ ಜಾರಿಗಾಗಿ ಇಂಧನ ಮೇಲೆ 'ಸೆಸ್' ವಿಧಿಸಲು ರಾಜ್ಯ ಸರ್ಕಾರ ಪ್ಲಾನ್
ಬೆಂಗಳೂರು, ಡಿಸೆಂಬರ್ 10 ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಆರೋಪ ಹೊತ್ತಿರುವ ಕರ್ನಾಟಕ ಸರ್ಕಾರ ಇದೀಗ ಮಹತ್ವದ ಯೋಜನೆ ಹಣ ಹೊಂದಿಸುವ ಸಲುವಾಗಿ ಇಂಧನದ ಮೇಲೆ ಸೆಸ್ ವಿಧಿಸಲು ಚಿಂತನೆ ನಡೆಸಿದೆ.
ಹೌದು, ರಾಜ್ಯ ಸರ್ಕಾರ ತನ್ನ ಖಜಾನೆಯಲ್ಲಿ ಹಣ ಇದೆ, ಯಾವ ಹಣಕಾಸಿನ ತೊಂದರೆ ಇಲ್ಲ ಎಂದು ಹೇಳಿಕೊಂಡರೂ ಸಹಿತ ಹಣಕಾಸಿ ತೊಂದರೆ ಎದುರಿಸುತ್ತಿರುವುದನ್ನು ಸ್ವತಃ ಡಿಸಿಎಂ ಅವರೇ ಈ ಹಿಂದೆ ಹೇಳಿದ್ದರು. ಇದೀಗ ಬಿಪಿಎಲ್ ಕಾರ್ಡುದಾರರ (BPL) ಸಾರ್ವತ್ರಿಕ ಆರೋಗ್ಯ ಯೋಜನೆ ಒದಗಿಸುವ ದೃಷ್ಟಿಯಿಂದ ಈ ಯೋಜನೆಗೆ ಹಣ ಕ್ರೂಢೀಕರಿಸಲು ಇಂಧನೆ ಮೇಲೆ ಸೆಸ್ ವಿಧಿಸಲು ಮುಂದಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕರ್ನಾಟಕ ಸರ್ಕಾರ 50 ಪೈಸೆಯಿಂದ 1 ರೂಪಾಯಿವರೆಗೆ ಸೆಸ್ ವಿಧಿಸಲು ಚಿಂತನೆ ನಡೆಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆಂದು TOI ವರದಿ ಮಾಡಿದೆ.
ಆರೋಗ್ಯ ವಿಮೆಯಿಂದ 1.8 ಕೋಟಿ ಬಡವರಿಗೆ ಅನುಕೂಲ
ಬಿಪಿಎಲ್ ಕಾರ್ಡುದಾರರಿಗೆ ಸಾರ್ವತ್ರಿಕ ಆರೋಗ್ಯ ಯೋಜನೆ ಒದಗಿಸುವ ಉದ್ದೇಶದಿಂದ ಸರ್ಕಾರ ಸೆಸ್ ವಿಧಿಸುವ ಮೂಲಕ ಹಣ ಹೊಂದಿಸುವ ದಾರಿ ಕಂಡು ಕೊಳ್ಳಲಿದೆ. ಈ ಆರೋಗ್ಯ ಯೋಜನೆಯು ಸಂಪೂರ್ಣ 1.8 ಕೋಟಿ ಬಡತನ-ರೇಖೆಯ (BPL) ಕಾರ್ಡುದಾರರಿಗೆ ಉಪಯೋಗವಾಗಲಿದೆ. ಈ ಸಂಬಂಧ ಸೆಸ್ ಸಾರ್ವಜನಿಕರ ಮೇಲೆ ಹೊರೆಯಾಗುವುದಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಯನ್ನು ಇತ್ತೀಚೆಗೆ ಪ್ರಾರಂಭಿಸಿದ ನಂತರ, ಕಾರ್ಮಿಕ ಇಲಾಖೆಯು ಈ ವ್ಯಾಪಕವಾದ ಆರೋಗ್ಯ ಯೋಜನೆಯತ್ತ ಗಮನ ಹರಿಸಿದೆ. 1.8 ಕೋಟಿ ಬಿಪಿಎಲ್ ಕಾರ್ಡುದಾರರನ್ನು ಒಳಗೊಳ್ಳುವ ಈ ಯೊಜನೆಯಡಿ ಪ್ರತಿ ವ್ಯಕ್ತಿಗೆ ಆರೋಗ್ಯ ಮತ್ತು ಅಪಘಾತದ ಕವರೇಜ್‌ನಲ್ಲಿ ಅಂದಾಜು 25 ಲಕ್ಷ ರೂ.ಒಳಗೊಂಡಿರುತ್ತದೆ.

ಸಾವಿರಾರು ಕೋಟಿ ರೂ.ಸಂಗ್ರಹದ ಗುರಿ
ಮೂಲಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯ ಸರ್ಕಾರ ಉದ್ದೇಶಿಸಿತ ಆರೋಗ್ಯ ಯೋಜನೆಯ ಅನುಷ್ಠಾನಕ್ಕೆ ಸಹಾಯವಾಗುವಂತೆ ವಾರ್ಷಿಕವಾಗಿ 1,200 ಕೋಟಿ ರೂ.ನಿಂದ 1,500 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ನಿರೀಕ್ಷೆ ಇದೆ.
ಇದರೊಂದಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಥವಾ ಸಾರಿಗೆ ಕಾರ್ಮಿಕರಿಗಾಗಿ ಹೊಸದಾಗಿ ರಚನೆಯಾದ ಸಾರಿಗೆ ಮಂಡಳಿಯಂತಹ ಅಸ್ತಿತ್ವದಲ್ಲಿರುವ ಮಂಡಳಿಗಳ ವ್ಯಾಪ್ತಿಗೆ ಒಳಪಡದ ಅಸಂಘಟಿತ ವಲಯಗಳ ಮೇಲೆ ಸರ್ಕಾರ ಗಮನ ಹರಿಸಲಿದೆ. ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲು 43 ಅಸಂಘಟಿತ ವಲಯಗಳನ್ನು ಸರ್ಕಾರ ಗುರುತಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.












Click it and Unblock the Notifications