Jowar-Cotton Interim Crop Insurance: ಬೆಳೆ ವಿಮೆ ಪರಿಹಾರ ಮಂಜೂರು, ಯಾರಿಗೆಲ್ಲ ಸಿಗಲಿದೆ ತಿಳಿಯಿರಿ.
ಧಾರವಾಡ, ನವೆಂಬರ್ 29: ಉತ್ತರ ಕರ್ನಾಟಕದ ರೈತರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. 2023ನೇ ಸಾಲಿನ ಮುಂಗಾರು ಹಂಗಾಮಿನ ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆಗಳಿಗೆ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡ ಅರ್ಹ ರೈತರಿಗೆ ಮದ್ಯಂತರ ವಿಮೆ ಪರಿಹಾರ ಮಂಜೂರು ಮಾಡಲಾಗಿದೆ.
ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಪರಿಹಾರ ಹಣ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಜಿಲ್ಲಾಮಟ್ಟದ ಬೆಳೆ ವಿಮೆ ಜಂಟಿ ಸಮಿತಿ ಅಧ್ಯಕ್ಷರು ಆಗಿರುವ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಬುಧವಾರ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ರೈತರು, ಊರು, ಪರಿಹಾರದ ಮಾಹಿತಿ
ಜಿಲ್ಲೆಯ 46,937 ನೊಂದಾಯಿತ ಅರ್ಹ ರೈತರಿಗೆ ರೂ.31.7760 ಕೋಟಿ ರೂ.ಗಳ ಮಧ್ಯಂತರ ವಿಮಾ ಪರಿಹಾರ ಹಣ ಜಮೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯ ಅಳ್ಳಾವರ ತಾಲ್ಲೂಕಿನ 3,052 ಜನ ನೊಂದಾಯಿತ ಅರ್ಹ ರೈತರಿಗೆ 1.82 ಕೋಟಿ ರೂ., ಅಣ್ಣಿಗೇರಿ ತಾಲ್ಲೂಕಿನ ನೋಂದಾಯಿತ 833 ಅರ್ಹ ರೈತರಿಗೆ 0.65 ಕೋಟಿ ರೂ, ಧಾರವಾಡ ತಾಲ್ಲೂಕಿನ ನೋಂದಾಯಿತ 9,978 ಅರ್ಹ ರೈತರಿಗೆ 6.57 ಕೋಟಿ ರೂಪಾಯಿ ಪರಿಹಾರ ಹಣ ಜಮೆ ಆಗಲಿದೆ.
ಹುಬ್ಬಳ್ಳಿ ತಾಲ್ಲೂಕಿನ ನೊಂದಾಯಿತ 4,681 ಅರ್ಹ ರೈತರಿಗೆ 3.28 ಕೋಟಿ ರೂ, ಹುಬ್ಬಳ್ಳಿ ನಗರ ತಾಲ್ಲೂಕಿನ ನೊಂದಾಯಿತ 199 ಅರ್ಹ ರೈತರಿಗೆ 0.23 ಕೋಟಿ ರೂ. ಕಲಘಟಗಿ ತಾಲ್ಲೂಕಿನ ನೊಂದಾಯಿತ 15,248 ಅರ್ಹ ರೈತರಿಗೆ 9.74 ಕೋಟಿ ರೂ, ಕುಂದಗೋಳ ತಾಲ್ಲೂಕಿನ ನೋಂದಾಯಿತ 9,120 ಅರ್ಹ ರೈತರಿಗೆ 5.70 ಕೋಟಿ ರೂ.ಗಳ ಮತ್ತು ನವಲಗುಂದ ತಾಲ್ಲೂಕಿನ ನೋಂದಾಯಿತ 3,826 ಅರ್ಹ ರೈತರಿಗೆ 3.79 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಪರಿಹಾರ ಜಮಾ ಆಗಲಿದೆ.

ಕೆಂಪು ಮೆಣಸಿನಕಾಯಿ ಬೆಳೆಯಡಿಯು ಕೂಡ ಮಧ್ಯಂತರ ವಿಮಾ ಪರಿಹಾರ ಪ್ರಸ್ತಾವನೆ ಅಂಗೀಕೃತವಾಗಿದ್ದು, 15 ದಿನಗೊಳಗಾಗಿ ಈ ಬೆಳೆಯಡಿ ಕೂಡ ಅರ್ಹ ನೋಂದಾಯಿತ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಜಮೆ ಆಗಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭತ್ತ-ಜೋಳ ಖರೀದಿ ಕೇಂದ್ರ ಸ್ಥಾಪನೆ
ಧಾರವಾಡ ಜಿಲ್ಲೆ ವ್ಯಾಪ್ತಿಯ ಕೆಲವೆಡೆ ಆಹಾರಧಾನ್ಯ ಖರೀದಿ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ರೈತರಿಂದ ಭತ್ತ-ಬಿಳಿಜೋಳ ವನ್ನು ಒಂದು ಎಕರೆಗೆ ಹತ್ತು ಕ್ವೀಂಟಾಲ್‌ನಂತೆ ಖರೀದಿಸಲು ಅವಕಾಶ ಇದೆ. ಸರ್ಕಾರವೇ ಬೆಂಬಲ ಬೆಲೆ ಸಹಿತ ಈ ಕೇಂದ್ರಗಳಲ್ಲಿ ರೈತರ ಇವೆರಡು ಬೆಳೆಯನ್ನು ಖರೀದಿ ಮಾಡುತ್ತದೆ. ಈ ಸಂಬಂಧ ರೈತರು ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಂಗಳವಾರ ಹೇಳಿದ್ದರು.












Click it and Unblock the Notifications