Karnataka Jobs 2023: ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗ: ಅರ್ಜಿ ಆಹ್ವಾನ, ಕೊನೆ ದಿನಾಂಕ ವೇತನ ವಿವರ
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ನಿಗಮವು ತನ್ನಲ್ಲಿ ಖಾಲಿ ಹತ್ತಾರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ನವೆಂಬರ್ 16 ರಂದು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಆದ್ದರಿಂದ ಈ ಕೂಡಲೇ ಅರ್ಜಿ ಸಲ್ಲಿಸಿ.
ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ನಿಗಮ ಇದು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಅಧೀನ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ. ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಿದೆ. ಹುದ್ದೆಗಳ ವಿವರ ತಿಳಿದು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.

ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ
ಸಂಸ್ಥೆ ಹೆಸರು: ಕರ್ನಾಟಕ ರಾಜ್ಯ ವಿಮಾ ನಿಗಮ
ಹುದ್ದೆ ಹೆಸರು: ಸೀನಿಯರ್ ರೆಸಿಡೆಂಟ್‌ಗಳು
ಖಾಲಿ ಹುದ್ದೆ ಎಷ್ಟಿವೆ: 45
ಪೋಸ್ಟಿಂಗ್: ESIC ಮೆಡಿಕಲ್ ಕಾಲೇಜು & ಆಸ್ಪತ್ರೆ, ಕಲಬುರಗಿ
ನೇರ ಸಂದರ್ಶನ ದಿನ: ನವೆಂಬರ್ 16
ನೇಮಕ: ಗುತ್ತಿಗೆ ಆಧಾರದಲ್ಲಿ
ಖಾಲಿ ಹುದ್ದೆಗಳ ಮಾಹಿತಿ
ಇನ್ನೂ ಖಾಲಿ ಹುದ್ದೆಗಳನ್ನು ವಿವರವಾಗಿ ನೋಡುವುದಾದರೆ, ಕಲಬುರಗಿ ESIC ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆಂಟ್ ಹುದ್ದೆಗಳಾದ ಪೆಥಾಲಜಿ, ಮೈಕ್ರೋಬಯೋಲಜಿ, ಅನಾಟೊಮಿ, ಬಯೋಕೆಮಿಸ್ಟ್ರಿ, ರೆಸ್ಪಿರೇಟರಿ ಮೆಡಿಷನ್, ಫಾರ್ಮಾಕೊಲಜಿ, ಫಾರೆನ್ಸಿಕ್ ಮೆಡಿಷನ್, ಕಂಮ್ಯೂನಿಟಿ ಮೆಡಿಷನ್, ಜೆನೆರಲ್ ಮೆಡಿಷನ್, ಪೀಡಿಯಾಟ್ರಿಕ್ಸ್, ಡರ್ಮಟೊಲಜಿ, ಸೈಕಿಯಾಟ್ರಿ, ಎಮರ್ಜೆನ್ಸಿ ಮೆಡಿಷನ್, ಆರ್ಥೋಪೆಡಿಕ್ಸ್, ಇಎನ್‌ಟಿ, ಜೆನೆರಲ್ ಸರ್ಜರಿ, ಒಬಿಜಿ, ಅನಸ್ತೇಷಿಯಾ, ರೇಡಿಯೋಲಜಿ, ಡೆಂಟಿಸ್ಟ್ ಸೇರಿದಂತೆ ವಿಷಯಗಳಲ್ಲಿ ಈ ನೇಮಕಾತಿ ನಡೆಯಲಿದೆ.

ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೇಲಿನ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಎಂಡಿ /ಎಂಎಸ್/ಡಿಎನ್‌ಬಿ ಕೋರ್ಸ್‌ಗಳಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು ಎಂದು ನಿಗಮ ತಿಳಿಸಿದೆ.
ವಯೋಮಿತಿ ವಿವರ
ಅಭ್ಯರ್ಥಿಗಳಿಗೆ ಸಂದರ್ಶನ ದಿನಾಂಕ ನವೆಂಬರ್ 16ರ ವೇಳೆಗೆ ಗರಿಷ್ಠ 44 ವರ್ಷ ವಯಸ್ಸು ಮೀರಿರಬಾರದು. ಇನ್ನೂ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಮಾಸಿಕ ವೇತನ 1,21,048 ರೂಪಾಯಿ ಇರಲಿದ್ದು, ಇದರೊಂದಿಗೆ ಟಿಎ ಡಿಎ ಇತರೆ ಭತ್ಯೆಗಳು ಅನ್ವಯವಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಅಭ್ಯರ್ಥಿಗಳು ಅರ್ಜಿಗಳನ್ನು ಈ ಅಧಿಕೃತ https://www.esic.gov.in/recruitments ವೆಬ್‌ಸೈಟ್‌ಗೆ ಮೊದಲು ಭೇಟಿ ನೀಡಬೇಕು. ಅಲ್ಲಿ ರಾಜ್ಯ ನೇಮಕಾತಿ ವಿವಿರ ಆಯ್ಕೆ ಮಾಡಿಕೊಂಡು ಅರ್ಜಿ ನಮೂನೆ ಪ್ರಿಂಟ್ ತೆಗೆದುಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿ ಜೊತೆಗೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನವೆಂಬರ್ 16 ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.
ಈ ಸಂದರ್ಶನವು ಕಲಬುರಗಿಯ ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಯಲಿದೆ. ಬೆಳಗ್ಗೆ 10-30ರ ಒಳಗೆ ಸ್ಥಳದಲ್ಲಿರುವಂತೆ ತಿಳಿಸಲಾಗಿದೆ. ಈ ವೇಳೆ ಪಿಜಿ / ಡಿಎನ್‌ಬಿ ಸರ್ಟಿಫಿಕೇಟ್, ಕೆಎಂಸಿ / ಎನ್‌ಎಂಸಿ ರಿಜಿಸ್ಟ್ರೇಷನ್ ಲಿಂಕ್, ಜಾತಿ ಪ್ರಮಾಣ ಪತ್ರ, ಕಾರ್ಯಾನುಭವ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಎಂಬಿಬಿಎಸ್ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಇತರೆ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರ ಒಯ್ಯುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗೆ ಮೇಲೆ ನೀಡಲಾಗಿರುವ ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಿಕೊಳ್ಳಬೇಕು.












Click it and Unblock the Notifications