ದೋಷಯುಕ್ತ ಐಫೋನ್ ಕೊಟ್ಟ Apple; ಹೊಸ ಮೊಬೈಲ್ ಕೊಡಲು ಕಂಪನಿಗೆ ಆದೇಶ
ಧಾರವಾಡ, ಫೆಬ್ರವರಿ.18: ಫ್ಲಿಪ್‍ಕಾರ್ಟ್ ವೇದಿಕೆಯಲ್ಲಿ ಮೊಬೈಲ್ ಆರ್ಡರ್ ಮಾಡಿ ಮೋಸಕ್ಕೆ ಒಳಗಾದ ಧಾರವಾಡದ ಮಹೇಂದ್ರಕರ ಚಾಳದ ಕಾಲೇಜು ವಿದ್ಯಾರ್ಥಿಯೊಬ್ಬರಿಗೆ ಹೊಸ ಐಫೋನ್ ಕೊಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಮಹೇಂದ್ರಕರ ಚಾಳ ನಿವಾಸಿ ಕಾರ್ತಿಕ ಎಲಿಗಾರ ಎಂಬುವವರು ಕಾಲೇಜ ವಿದ್ಯಾರ್ಥಿಯಾಗಿದ್ದು ಗಿಟಾರ್ ವಾದ್ಯ ಕಲಿಯುತ್ತಿದ್ದರು. ಅವರು ತಮ್ಮ ವಿದ್ಯಾಭ್ಯಾಸ ಮತ್ತು ಗಿಟಾರ್ ಕಲಿಯಲು ಸಹಾಯವಾಗಲೆಂದು ಆನ್ಲೈನ್ ಮೂಲಕ ಪ್ಲಿಪ್‍ಕಾರ್ಟ್‍ನಿಂದ 22/09/2022 ರಂದು 54,019 ರೂಪಾಯಿ ಮೌಲ್ಯದ ಆಪಲ್ ಐಫೋನ್ ಖರೀದಿಸಿದ್ದರು. ಆ ಐಫೋನ್ ಮೂರು ದಿನಗಳ ನಂತರ ಅಂದರೆ 25 ರಂದು ದೂರುದಾರನಿಗೆ ತಲುಪಿತ್ತು.

ಆದರೆ, ಆ ಫೋನ್ ಖರೀದಿಸಿದ ಒಂದೇ ದಿನದಲ್ಲಿ ದೋಷ ಉಂಟಾಗಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆ ವಿಷಯವನ್ನು ದೂರುದಾರ ಕೂಡಲೇ ಫ್ಲಿಪ್‍ಕಾರ್ಟ್ ಹಾಗೂ ಐಫೋನ್ ಕಂಪನಿಯವರಿಗೆ ದೂರು ನೀಡಿದ್ದಾರೆ. ಬಳಿಕ ಹುಬ್ಬಳ್ಳಿಯ ಸರ್ವಿಸ್ ಸೆಂಟರ್‍ನಲ್ಲಿ ತಪಾಸಣೆ ಮಾಡಿಸಿದಾಗ ಅದರಲ್ಲಿ ದೋಷ ಇರುವುದು ಖಚಿತವಾಗಿದೆ. ನಂತರ ದೂರುದಾರ ಬೆಂಗಳೂರಿನ ಆಪಲ್ ಕಂಪನಿಯ ಅಧಿಕೃತ ಸರ್ವಿಸ್ ಸೆಂಟರನಲ್ಲಿ ತೋರಿಸಿದಾಗಲೂ ದೋಷ ಇರುವುದು ಕಂಡುಬಂತು.
ಇನ್ನು, ಐಫೋನ್ ಮೇಲೆ ಜಖಂಗಳು ಇರುವುದರಿಂದ ಅವುಗಳು ವಾರಂಟಿಯಲ್ಲಿ ಕವರ್ ಆಗುವುದಿಲ್ಲ ಎಂದಿದ್ದಾರೆ. ಅದಕ್ಕೆ ತಗಲುವ ವೆಚ್ಚ ಕೊಟ್ಟಲ್ಲಿ ಸರಿಪಡಿಸಿಕೊಡುವುದಾಗಿ ಬೆಂಗಳೂರಿನ ಸರ್ವಿಸ್ ಸೆಂಟರ್‌ನವರು ಹೇಳಿದ್ದಾರೆ. ಐಫೋನ್ ಖರೀದಿಸಿದ ಒಂದೇ ದಿನದಲ್ಲಿ ದೋಷ ಕಂಡುಬಂದಿರುವುದರಿಂದ ಅದನ್ನು ಪುಕ್ಕಟೆಯಾಗಿ ಸರಿಪಡಿಸಿಕೊಡುವುದು ಉತ್ಪಾದರು ಮತ್ತು ಇತರೆ ಎದುರುದಾರರ ಕರ್ತವ್ಯವಾಗಿದೆ. ಅದರೆ ಎಲ್ಲ ಎದುರುದಾರರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿ ತನಗೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 28.02.2023 ರಂದು ದೂರು ಸಲ್ಲಿಸಿದ್ದಾರೆ.

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಸದರಿ ಆಪಲ್ ಐಫೋನ್ ಖರೀದಿಸಿದ ಒಂದೇ ದಿನದಲ್ಲಿ ಅದರಲ್ಲಿ ದೋಷ ಕಂಡುಬಂದಿದ್ದರಿಂದ ಮತ್ತು ಆ ಬಗ್ಗೆ ದೂರುದಾರ ದೂರಿದರೂ ಆಪಲ್ ಕಂಪನಿಯವರು ಅದರ ದೋಷ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳದೇ ಸೇವಾ ನ್ಯೂನ್ಯತೆ ಎಸಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ ಎಂದು ಆಯೋಗತೀರ್ಪು ನೀಡಿದೆ.
ಸದರಿ ಐಫೋನಿನಲ್ಲಿ ಉತ್ಪಾದನಾ ದೋಷ ಕಂಡು ಬಂದಿದ್ದರಿಂದ ಆಪಲ್ ಕಂಪನಿಯವರನ್ನು ಮಾತ್ರ ಹೊಣೆಗಾರರನ್ನಾಗಿಸಿ ಆಯೋಗ ಆದೇಶಿಸಿದೆ. ಸದರಿ ಆಪಲ್ ಕಂಪನಿಯವರು ಈ ತೀರ್ಪು ನೀಡಿದ ಒಂದು ತಿಂಗಳೊಳಗೆ ದೂರುದಾರನಿಂದ ಹಳೆಯ ಆಪಲ್ ಐಫೋನ್ ಪಡೆದುಕೊಂಡು ಹೊಸ ಐಫೋನ್ ಕೊಡುವಂತೆ ಆಯೋಗ ನಿರ್ದೇಶಿಸಿದೆ.
ಇಲ್ಲದಿದ್ದಲ್ಲಿ ಆ ಐಫೋನಿನ ಒಟ್ಟು ಮೊತ್ತ ರೂ.54,019 ಮತ್ತು ಅದರ ಮೇಲೆ ಶೇಕಡಾ 8 ರಷ್ಟು ತೀರ್ಪು ಆದ ದಿನದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯ ಮಾಡುವಂತೆ ಆಪಲ್ ಕಂಪನಿಗೆ ತೀರ್ಪಿನಲ್ಲಿ ತಿಳಿಸಿದೆ. ಇದಲ್ಲದೆ, ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಕಂಪನಿಯವರು 25,000 ರೂಪಾಯಿಗಳ ಪರಿಹಾರ ಹಾಗೂ 10,000 ರೂಪಾಯಿಗಳ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications