• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಕಪ್ ಯಾರು ಗೆದ್ದರೂ ಹೊಸ ಇತಿಹಾಸ

By Mahesh
|

ಜೋಹಾನ್ಸ್ ಬರ್ಗ್, ಜು.11: 19 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಯಾರು ಗೆದ್ದರೂ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಸುಮಾರು 30 ದಿನಗಳ ಕಾಲದ ಫುಟ್ಭಾಲ್ ಹಬ್ಬದ ಅಂತಿಮ ಕ್ಷಣಕ್ಕೆ ಅಭಿಮಾನಿಗಳು ಕಾತುರದಿಂದ ಕಾದಿದ್ದು, ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯರಾತ್ರಿ ಅಂತಿಮ ಹಣಾಹಣಿ ನಡೆಯಲಿದೆ. ಯುರೋ ದೇಶಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿರುವ ಸ್ಪೇನ್ ಹಾಗೂ ಹಾಲೆಂಡ್ ಹೋರಾಟ ಎಲ್ಲರ ನಿರೀಕ್ಷೆಯ ತುದಿ ಮುಟ್ಟಿಸಲಿದೆ.

ಬಲಾಬಲ, ಇತಿಹಾಸ: 1974 ಹಾಗೂ 1978 ರಲ್ಲಿ ನೆದರ್ಲೆಂಡ್ ಫೈನಲ್ ತಲುಪಿತ್ತು. ಆದರೆ, ಸ್ಪೇನ್ ಗೆ ಇದೇ ಮೊದಲ ಅನುಭವ. 1950ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದೇ ಈವರೆಗಿನ ದೊಡ್ಡ ಸಾಧನೆ. ಇದುವರೆವಿಗೂ ಸ್ಪೇನ್ ಹಾಗೂ ಹಾಲೆಂಡ್ 8 ಬಾರಿ ಪರಸ್ಪರ ಎದುರಾಗಿದ್ದು, ಹಾಲೆಂಡ್ 4ಬಾರಿ, ಸ್ಪೇನ್ 3ಬಾರಿ ಗೆದ್ದಿದ್ದು, ಒಂದು ಪಂದ್ಯ ಡ್ರಾ ಆಗಿದೆ.

ಹಾಲೆಂಡ್ ರಣತಂತ್ರ: ಕ್ಯೂಟ್, ರೊಬೆನ್ ಫಾರ್ವಡ್ ನೊಂದಿಗೆ 1-4-4-2 ರಚನೆಯೊಂದಿಗೆ ಕಣಕ್ಕಿಳಿಯುವ ಸಾ ಧ್ಯತೆಯಿದೆ. ಮಿಡ್ ಫೀಲ್ಡರ್ ಸ್ನೈಡರ್, ಜಂಗ್, ಬೊಮ್ಮೆಲ್, ವಾರ್ಟ್ ಮುಂಪಡೆಗೆ ಸಾಥ್ ನೀಡಲಿದ್ದಾರೆ.

ಡಚ್ಚರ ನ್ಯೂನತೆಗಳು: ಜಾನ್ ಹೈಟಿಂಗ ನೇತೃತ್ವದ ರಕ್ಷಣಾ ಪಡೆ ಭಾರಿ ತೊಂದರೆ ಅನುಭವಿಸಿಲ್ಲ. 6 ಗೋಲುಗಳು ಮಾತ್ರ ಹಾಲೆಂಡ್ ವಿರುದ್ಧ ಹೊಡೆಯಲ್ಪಟ್ಟಿವೆ. 12 ಗೋಲು ಹೊಡೆದು ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಹಾಲೆಂಡ್ ಗೆ ತನ್ನ ಆಕ್ರಮಣಕಾರಿ ಆಟವೇ ಮುಳುವಾಗಬಹುದು.ಎದುರಾಳಿ ಅಟಗಾರರು ತಾಳ್ಮೆ ಕಳೆದುಕೊಳ್ಳುವಂತೆ ಮಾಡುವಲ್ಲಿ ಸ್ಪಾನೀಷ್ ವೀರರು ನಿಷ್ಣಾತರು.

ಸ್ಪಾನೀಷ್ ಅರ್ಮಡಾ:ಚಿನ್ನದ ಬೂಟಿನ ಮೇಲೆ ಕಣ್ಣಿರಿಸುವ ಡೇವಿಡ್ ವಿಲ್ಲಾ,ಪೆಡ್ರೋ ಮುಂಪಡೆಯೊಂದಿಗೆ 1-4-5-2 ರಚನೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ. ಇನ್ನೆಷ್ಟಾ, ಚಾವಿ, ಅಲಾನ್ಸೋ, ಫ್ಯಾಬ್ರಿಗ್ರೆಸ್ , ರಮೋಸ್ ವಿಶ್ವ ಶ್ರೇಷ್ಠ ಮಿಡ್ ಫೀಲ್ಡ್ ಪಡೆ , ಡಚ್ಚರನ್ನು ಕಾಡುವುದು ಖಂಡಿತಾ. ರಕ್ಷಣಾ ವ್ಯೂಹದಲ್ಲಿ ಅಲಾನ್ಸೊ,ಪುಯೋಲ್, ಕ್ಯಾಪ್ಡೆವಿಲ್ಲಾ,ಗೋಲಿ ಐಕರ್ ಕ್ಯಾಸಿಲ್ಲಾಸ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಸ್ಪೇನ್ ನ್ಯೂನತೆ: ಸ್ಪೇನ್ ಕೋಚ್ ಬೋಸ್ಕ್ ಟೊರೆಸ್ ರನ್ನು ಮತ್ತೆ ಹಿಂದಿನ ಪಂದ್ಯದಂತೆ ದ್ವಿತೀಯಾರ್ಧದಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ.ಪೆನಾಲ್ಟಿ ಶೂಟೌಟ್ ಸ್ಪೇನ್ ಗೆ ಕೊಂಚ ತಲೆನೋವು. ವಿಲ್ಲಾಗೆ ಹೆಚ್ಚಿನ ಒತ್ತಡ ತಂದರೆ, ಸ್ಪೇನ್ ವಿಶ್ವಕಪ್ ಮರೆಯುವುದು ಒಳ್ಳೆಯದು.

ಫಲಿತಾಂಶ: ಸಮಬಲದ ಹೋರಾಟದ ನಿರೀಕ್ಷೆಯಿದ್ದು, ದ್ವಿತೀಯಾರ್ಧದ ಅಂತಿಮ ಅವಧಿಯಲ್ಲಿ ಗೆಲ್ಲುವ ತಂಡದ ನಿರ್ಧಾರವಾಗುವ ಸಾಧ್ಯತೆಯಿದೆ. ಆದರೆ, ಮೊದಲ ಗೋಲುಗಳಿಸುವ ತಂಡಕ್ಕೆ ಮುನ್ನಡೆ ಪಡೆಯುವ ಎಲ್ಲಾ ಅವಕಾಶವಿದೆ.

ಪೌಲ್ ಆಕ್ಟೋಪಸ್, ಹ್ಯಾರಿ ಮೊಸಳೆ ಅಲ್ಲದೆ ಥೈಲ್ಯಾಂಡ್ ನ ಆನೆಗಳು ಕೂಡಾ ಸ್ಪೇನ್ ಗೆ ಬೆಟ್ ಮಾಡಿವೆ. ಗಿಳಿ ಮಣಿ ಮಾತ್ರ ಹಾಲೆಂಡ್ ಎಂದಿದೆ. ಬುಕ್ಕಿಗಳು ಮಾತ್ರ ಇಂದಿಗೂ ಸ್ಪೇನ್ ಪರವಾಗಿದ್ದಾರೆ.ಸ್ಪೇನ್ 2-1 ಅಂತರ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಬೆಟ್ಟಿಂಗ್ ದೊರೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X