Lok Sabha Election 2024: ಏಪ್ರಿಲ್ 26ಕ್ಕೆ 2ನೇ ಹಂತದ ಮತದಾನ, ಕರ್ನಾಟಕದ ಯಾವ ಕ್ಷೇತ್ರಗಳಿಗೆ ವೋಟಿಂಗ್? ಇಲ್ಲಿದೆ ವಿವರ

ಬೆಂಗಳೂರು, ಏಪ್ರಿಲ್ 24: ದೇಶಾದ್ಯಂತ ಲೋಕಸಭೆ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮೊದಲ ಹಂತದ ವೋಟಿಂಗ್ ಏಪ್ರಿಲ್ 19ರಂದು ನಡೆದಿದೆ. ಇದೀಗ ಏಪ್ರಿಲ್ 26ರಂದು ಎರಡನೇ ಹಂತದ ಮತದಾನ ನಡೆಯಲಿದೆ.

ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಒಟ್ಟು 13 ರಾಜ್ಯಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣೆ ನಡೆಯಲಿರುವ 13 ರಾಜ್ಯಗಳಲ್ಲಿ ಕರ್ನಾಟಕದ ಜತೆಗೆ ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿವೆ. ಅಸ್ಸಾಂನಲ್ಲಿ 5, ಬಿಹಾರದಲ್ಲಿ 5, ಛತ್ತೀಸ್‌ಗಢದಲ್ಲಿ 3, ಕೇರಳದಲ್ಲಿ 20, ಮಧ್ಯಪ್ರದೇಶದಲ್ಲಿ 7, ಮಹಾರಾಷ್ಟ್ರದಲ್ಲಿ 8, ಮಣಿಪುರದಲ್ಲಿ 1, ರಾಜಸ್ಥಾನದಲ್ಲಿ 13, ತ್ರಿಪುರಾ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 1, ಉತ್ತರ ಪ್ರದೇಶದ 8, ಪಶ್ಚಿಮ ಬಂಗಾಳದ 3 ಮತ್ತು ಜಮ್ಮು ಮತ್ತು ಕಾಶ್ಮೀರದ 1 ಲೋಕಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

How Many Constituencies Were There In Election Phase 2 Polls Voting In Karnataka On 26h April

ಈಗಾಗಲೇ ಕರ್ನಾಟಕದ 28 ಕ್ಷೇತ್ರಗಳ ಫೈಕಿ 14 ಕ್ಷೇತ್ರಗಳ ಏಪ್ರಿಲ್‌ 26 ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು ಸಕಲ ಸಿದ್ದತೆಯನ್ನ ಮಾಡಿಕೊಂಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣದ ಜಿಲ್ಲೆಗಳ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಹಾಗಾದ್ರೆ ಆ 14 ಕ್ಷೇತ್ರಗಳ ಯಾವುವು, ಮೇ 7 ರಂದು 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಏಪ್ರಿಲ್‌ 26 ರಂದು ಯಾವ ಯಾವ ಜಿಲ್ಲೆಗಳಲ್ಲಿ ಚುನಾವಣೆ!

* ಬೆಂಗಳೂರು ಕೇಂದ್ರ

* ಬೆಂಗಳೂರು ಉತ್ತರ

* ಬೆಂಗಳೂರು ಗ್ರಾಮಾಂತರ

* ಬೆಂಗಳೂರು ದಕ್ಷಿಣ

* ಚಾಮರಾಜನಗರ

* ಚಿಕ್ಕಬಳ್ಳಾಪುರ

* ಚಿತ್ರದುರ್ಗ

* ದಕ್ಷಿಣ ಕನ್ನಡ

* ಹಾಸನ

* ಕೋಲಾರ

* ಮಂಡ್ಯ

* ಮೈಸೂರು

* ತುಮಕೂರು

* ಉಡುಪಿ ಚಿಕ್ಕಮಗಳೂರು

ಮೇ 7ರಂದು ಯಾವ ಯಾವ ಜಿಲ್ಲೆಗಳಲ್ಲಿ ಚುನಾವಣೆ!

* ಚಿಕ್ಕೋಡಿ

* ಬೆಳಗಾವಿ

* ಬಾಗಲಕೋಟೆ

* ಬಿಜಾಪುರ (ಎಸ್‌ಸಿ)

* ಗುಲ್ಬರ್ಗಾ (ಎಸ್‌ಸಿ)

* ರಾಯಚೂರು (ಎಸ್‌ಟಿ)

* ಬೀದರ್

* ಕೊಪ್ಪಳ

* ಬಳ್ಳಾರಿ (ಎಸ್‌ಟಿ)

* ಹಾವೇರಿ

* ಧಾರವಾಡ

* ಉತ್ತರ ಕನ್ನಡ

* ದಾವಣಗೆರೆ

* ಶಿವಮೊಗ್ಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+